CONNECT WITH US  

ನಿಕ್‌ ಜೊನಾಸ್‌ ಜೊತೆ ಪ್ರಿಯಾಂಕಾ ಚೋಪ್ರಾ Engaged:ವರದಿ 

ಹೊಸದಿಲ್ಲಿ: ಕಳೆದ ಹಲವು ದಿನಗಳಲ್ಲಿ ಜೊತೆಯಾಗಿ ಸುತ್ತುತ್ತಿದ್ದ  ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಅವರು ಗಾಯಕ ನಿಕ್‌ ಜೊನಾಸ್‌ ಅವರೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.

ಪೀಪಲ್‌ ಡಾಟ್‌ ಕಾಂ ವರದಿ ಪ್ರಕಾರ ಕಳೆದ ವಾರ ಪ್ರಿಯಾಂಕಾ ಚೋಪ್ರಾ ಅವರ 36 ನೇ ಜನ್ಮ ದಿನಾಚರಣೆ ವೇಳೆ ನಿಶ್ಚಿತಾರ್ಥ ನಡೆದಿದೆ. 

ಪ್ರಿಯಾಂಕಾಗಾಗಿ ನಿಕ್‌ ನ್ಯೂಯಾರ್ಕ್‌ನಲ್ಲಿ ಉಂಗುರವೊಂದನ್ನು ಖರೀದಿಸಿದ್ದರು ಎಂದು ವರದಿಯಾಗಿದೆ. 

ಪ್ರಿಯಾಂಕ ಅವರಾಗಲಿ ನಿಕ್‌ ಆಗಲಿ ಈ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ ಮತ್ತು ವರದಿಯನ್ನು ತಳ್ಳಿ ಹಾಕಿಯೂ ಇಲ್ಲ. 

ಪ್ರಿಯಾಂಕಾ 36 ರ ಹರೆಯದಲ್ಲಿದ್ದರೆ,ನಿಕ್‌ 25 ರ ಚೆಲುವ. ತನಗಿಂತ 11 ವರ್ಷ ಕಿರಿಯನನ್ನು ಕೈ ಹಿಡಿದ ನಟಿ ಎನಿಸಿಕೊಂಡಿದ್ದಾರೆ. 

ಪ್ರಿಯಾಂಕಾ ಅವರು ಅಲಿ ಅಬ್‌ಬಾಸ್‌ ಝಫ‌ರ ಅವರ ಭಾರತ್‌ ಚಿತ್ರದಲ್ಲಿ ನಾಯಕಿಯಾಗಿ ಬಾಲಿವುಡ್‌ಗೆ ಮರಳುವವರಿದ್ದರು. ಆದರೆ ಅಲಿ ಅವರು ಚಿತ್ರ ತಂಡದಲ್ಲಿರುವುದಿಲ್ಲ, ಅವರಿಗೆ ಶುಭ ಕೋರುವುದಾಗಿ ಟ್ವೀಟ್‌ ಮಾಡಿದ್ದಾರೆ. 


Trending videos

Back to Top