CONNECT WITH US  

ಮುಂದಿನ ತಿಂಗಳು ಏರಾ ಉಲ್ಲೆರ್‌ಗೆ!

ಚಂಡಿ ಕೋರಿ, ಬರ್ಸ, ಅರೆ ಮರ್ಲೆರ್‌ ಸಿನೆಮಾ ನಿರ್ದೇಶಿಸಿ ಕೋಸ್ಟಲ್‌ ವುಡ್‌ನ‌ಲ್ಲಿ ಸಾಕಷ್ಟು ಸೌಂಡ್‌ ಮಾಡಿದ ದೇವದಾಸ್‌ ಕಾಪಿಕಾಡ್‌ ಈಗ ತನ್ನದೇ ನಿರ್ದೇಶನದ ನಾಲ್ಕನೇ ಸಿನೆಮಾ 'ಏರಾ ಉಲ್ಲೆರ್‌ಗೆ' ಪೂರ್ಣಗೊಳಿಸಿ ಸೆನ್ಸಾರ್‌ ಗೆ ಕಳುಹಿಸಿದ್ದಾರೆ. ಮುಂದಿನ ತಿಂಗಳು ಸಿನೆಮಾ ರಿಲೀಸ್‌ನ ತವಕದಲ್ಲಿದೆ.

ಕೆಲವೇ ದಿನಗಳಲ್ಲಿ ಫಟಾಫಟ್‌ ಶೂಟಿಂಗ್‌ ಮುಗಿಸಿದ ಚಿತ್ರ ಈಗಾಗಲೇ ಎಲ್ಲ ಹಂತದ ತಯಾರಿ ಮುಗಿಸಿ ಸೆನ್ಸಾರ್‌ನ ಹಂತದಲ್ಲಿದೆ. ಅರ್ಜುನ್‌ ಕಾಪಿಕಾಡ್‌, ಅನೂಪ್‌ ಸಾಗರ್‌, ರಶ್ಮಿಕಾ ಚೆಂಗಪ್ಪ, ಆರಾಧ್ಯ ಶೆಟ್ಟಿ ಮುಖ್ಯ
ಭೂಮಿಕೆಯ ಈ ಸಿನೆಮಾದಲ್ಲಿ ನಿರ್ದೇಶಕ ದೇವದಾಸ್‌ ಕಾಪಿಕಾಡ್‌ ಕೂಡ ಬಣ್ಣಹಚ್ಚಿದ್ದಾರೆ. ವಿಶೇಷವೆಂದರೆ, ಶೇ.80ರಷ್ಟು ಕಾಮಿಡಿ ಮೂಡ್‌ನ‌ಲ್ಲಿ ಸಿದ್ಧಗೊಂಡ ಈ ಸಿನೆಮಾದಲ್ಲಿ ಕಾಪಿಕಾಡ್‌ ಶೇ.80ರಷ್ಟು ಭಾಗದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇವರಿಗೆ ಸಾಯಿಕೃಷ್ಣ ಜತೆಯಾಗಿದ್ದಾರೆ.

ಸಾಕಷ್ಟು ಭೂಮಿ ಹೊಂದಿದ ಕರಾವಳಿಯ ಒಬ್ಬ ತನ್ನ ಪಟಲಾಂ ಜತೆಗೆ ಹೇಗೆ ವರ್ತನೆ ತೋರುತ್ತಾರೆ ಎಂಬ ರೀತಿಯಲ್ಲಿ ಕಾಪಿಕಾಡ್‌ ಕಾಣಿಸಿಕೊಂಡಿದ್ದಾರೆ. ಚಿತ್ರದ ಬಹುತೇಕ ಭಾಗದಲ್ಲಿ ಕಾಪಿಕಾಡ್‌ ಅವರೇ ಕಾಣಿಸಿಕೊಂಡ ಕಾರಣದಿಂದ ಕೋಸ್ಟಲ್‌ ವುಡ್‌ನ‌ಲ್ಲಿ ಹೊಸ ನಿರೀಕ್ಷೆ ಮೂಡಿದೆ. 'ಕರ್ಣೆ' ಚಿತ್ರದ ಕೆಮರಾ ಕೆಲಸ ಮಾಡಿದ ಸುಧಾಕರ್‌ ಅವರೇ ಈ ಸಿನೆಮಾದಲ್ಲೂ ಕೈಚಳಕ ತೋರಿದ್ದಾರೆ. ಹಾರರ್‌ ಕಥೆ ಕೂಡ ಈ ಸಿನೆಮಾಕ್ಕೆ ಹೊಸ ಲುಕ್‌ ನೀಡಿದೆ. 

ಇಂದು ಹೆಚ್ಚು ಓದಿದ್ದು

Trending videos

Back to Top