CONNECT WITH US  

ಸುಂದರ ನಗು ಅರಳಿಸುವ ಸುದಂತ ಯೋಜನೆ ಚಿಕಿತ್ಸೆ

ವ್ಯಕ್ತಿಯ ಹಲ್ಲು ಸಾಲುಗಳು ಅಥವಾ ದವಡೆಗಳು ಪರಸ್ಪರ ಹೊಂದಾಣಿಕೆ ಆಗದೇ ಇದ್ದರೆ ಅದನ್ನು ತಪ್ಪು ಜಗಿತ ಅಥವಾ ಮಾಲ್‌ ಒಕ್ಲೂಶನ್‌ ಎಂಬುದಾಗಿ ಕರೆಯುತ್ತಾರೆ. ಪರಸ್ಪರ ಹೊಂದಾಣಿಕೆ ಆಗದ ಕಳಪೆ ಜಗಿತವು ವಂಶವಾಹಿಯಾಗಿರಬಹುದು ಅಥವಾ ಉಂಟಾದದ್ದಾಗಿರಬಹುದು. ಇದಕ್ಕೆ ಕಾರಣಗಳಲ್ಲಿ ಹಲ್ಲು ಇಲ್ಲದಿರುವುದು ಅಥವಾ ಹೆಚ್ಚುವರಿ ಹಲ್ಲು ಇರುವುದು, ಹಲ್ಲುಗಳು ಕಿಕ್ಕಿರಿದಿರುವುದು ಅಥವಾ ದವಡೆಗಳು ತಪ್ಪು ಸ್ಥಾನದಲ್ಲಿ ಇರುವುದು ಸೇರಿವೆ. ಅಪಘಾತ ಅಥವಾ ಚಿಕ್ಕಮಕ್ಕಳು ದೀರ್ಘ‌ಕಾಲ ಬೆರಳು ಯಾ ಹೆಬ್ಬೆರಳು ಚೀಪುವ ಅಭ್ಯಾಸದಿಂದ ಕೂಡ ಮಾಲ್‌ಒಕ್ಲೂಶನ್‌ ಉಂಟಾಗಬಹುದು.

1. ಉಬ್ಬುಹಲ್ಲು
ಮೇಲ್ಭಾಗದ ದಂತಪಂಕ್ತಿಯ ಹಲ್ಲುಗಳು ತುಂಬಾ ಮುಂದಕ್ಕೆ ಚಾಚಿಕೊಳ್ಳುವುದರಿಂದ ಈ ಸಮಸ್ಯೆ ಉಂಟಾಗುತ್ತದೆ. ಇದರಿಂದ ವ್ಯಕ್ತಿಗೆ ತುಟಿಗಳನ್ನು ಮುಚ್ಚಲು ಅಸಾಧ್ಯವಾಗುತ್ತದೆಯಲ್ಲದೆ ಮುಖದ ಅಂದವೂ ಕೆಡುತ್ತದೆ. 

2. ಒಳಜಗಿತ
ಮೇಲ್ಭಾಗದ ಮುಂದಿನ ಹಲ್ಲುಗಳು ಕೆಳಗಿನ ಸಾಲಿನ ಹಲ್ಲುಗಳಿಗಿಂತ ಮುಂದಕ್ಕೆ ಕಚ್ಚಿಕೊಳ್ಳುವುದು.

3. ಅಡ್ಡಾದಿಡ್ಡಿ ಜಗಿತ
ಮೇಲ್ಭಾಗದ ಹಲ್ಲುಗಳು ಕೆಳ ಸಾಲಿನ ಹಲ್ಲುಗಳ ಒಳಗೆ ಕಚ್ಚಿಕೊಳ್ಳುವ ಪರಿಣಾಮ ಜಗಿತದ ಹೊಂದಾಣಿಕೆ ಕೆಡುತ್ತದೆ.

4. ತೆರೆದ ಜಗಿತ
ಮೇಲ್ಭಾಗದ ಹಲ್ಲು ಸಾಲು ಮತ್ತು ಕೆಳಭಾಗದ ಹಲ್ಲು ಸಾಲು ಜಗಿಯುವಾಗ ಕೂಡಿಕೊಳ್ಳುವುದಿಲ್ಲ.

5. ಹಲ್ಲುಗಳು ಕಿಕ್ಕಿರಿದಿರುವಿಕೆ ಮತ್ತು ಹಲ್ಲುಗಳ ನಡುವೆ ಹೆಚ್ಚು ಸ್ಥಳ
ಹಲ್ಲುಗಳಿಗೆ ಮೂಡಲು ಅಗತ್ಯವಿದ್ದಷ್ಟು ಸ್ಥಳಾವಕಾಶ ಇಲ್ಲವಾದಾಗ ಕಿಕ್ಕಿರಿಯುವಿಕೆ ಉಂಟಾಗುತ್ತದೆ. ಹಲ್ಲುಗಳು ತಪ್ಪಿ ಹೋಗುವುದರಿಂದ ಹೆಚ್ಚುವರಿ ಸ್ಥಳಾವಕಾಶ ಉಂಟಾಗಬಹುದು. ಕೆಲವೊಮ್ಮೆ ಹಲ್ಲುಸಾಲುಗಳು ಸರಿಯಾಗಿ ಹೊಂದದೆ ಕುರೂಪಕ್ಕೂ ಕಾರಣವಾಗಬಹುದು. ಕ್ಲಿಪ್‌ಗ್ಳು ಅಥವಾ ಬ್ರ್ಯಾಕೆಟ್‌ಗಳ ಸಹಾಯದಿಂದ ಹಲ್ಲುಗಳನ್ನು ತೆಗೆದುಹಾಕಿ ಯಾ ತೆಗೆದುಹಾಕದೆಯೂ ಹಲ್ಲುಗಳ ಹೊಂದಾಣಿಕೆಯನ್ನು ಸರಿಪಡಿಸಬಹುದು. ಯಾವುದೇ ಸಮಸ್ಯೆ ಇಲ್ಲದೆಯೇ ಮುಖದಲ್ಲಿ ಸುಂದರ ನಗುವನ್ನು ಅರಳಿಸಬಹುದು.ಸುದಂತ ಯೋಜನೆ ಚಿಕಿತ್ಸೆಯ ಮೂಲಕ ನಿಮ್ಮ ಹಲ್ಲುಗಳ ಹೊಂದಾಣಿಕೆಯನ್ನು ಸರಿಪಡಿಸಿಕೊಳ್ಳಿ; ಸುಂದರ ನಗು ನಿಮ್ಮ ಮುಖದಲ್ಲಿ ಮೂಡಲಿ.

ಡಾ| ಸಿದ್ದಾರ್ಥ ಮೆಹ್ತಾ, 
ಆಥೊìಡಾಂಟಿಕ್ಸ್‌ ಮತ್ತು ಡೆಂಟೊಫೇಶಿಯಲ್‌ ಆಥೊìಪೆಡಿಕ್ಸ್‌ ವಿಭಾಗ,
ಮಣಿಪಾಲ ದಂತವೈದ್ಯಕೀಯ ಕಾಲೇಜು, ಮಣಿಪಾಲ


Trending videos

Back to Top