CONNECT WITH US  

ವಾಟ್ಸಪ್‌ನಲ್ಲಿ  ಅಂಬೇಡ್ಕರ್‌ ಅವಹೇಳನ:ಯುವಕನಿಗೆ ಹಿಗ್ಗಾಮುಗ್ಗಾ ಥಳಿತ

ಕೊಪ್ಪಳ: ಜಿಲ್ಲೆಯ ಕುಷ್ಟಗಿಯ ಮುದೆನೂರ ಗ್ರಾಮದ ಯುವಕನೊಬ್ಬನಿಗೆ ಲಿಂಗೂಸೂರಿನ ಅಂಬೇಡ್ಕರ್‌ ಅಭಿಮಾನಿ ಸಂಘಟನೆಯ ಸದಸ್ಯರು ಅರೆಬೆತ್ತಲೆ ಮಾಡಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ. 

ಶಾಮೀದ್‌ ಎನ್ನುವ ಯುವಕ ಹಲ್ಲೆಗೊಳಗಾದವನಾಗಿದ್ದು, ಈತ ವಾಟ್ಸಪ್‌ನಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರ ಕುರಿತು,ಮತ್ತು ಲಿಂಗಸೂರಿನ ವ್ಯಕ್ತಿಯೊಬ್ಬರ ಕುರಿತಾಗಿ ಅವಹೇಳನಕಾರಿಯಾಗಿ ಬರೆದಿದ್ದ ಎಂದು ತಿಳಿದು ಬಂದಿದೆ. 

ರೊಚ್ಚಿಗೆದ್ದ ಲಿಂಗಸೂರಿನ ಸಂಘಟನೆಯ  ಸದಸ್ಯರು ಕುಷ್ಟಗಿಗೆ ಆಗಮಿಸಿ ತಳಿಸಿದ್ದಾರೆ. 

ದೆಹಲಿಯಲ್ಲಿ ಸಂವಿಧಾನದ ಪ್ರತಿ ಸುಟ್ಟು ಹಾಕಿದನ್ನು ವಿರೋಧಿಸಿ ದೂರು ನೀಡಿದ ವಿಚರಾದಲ್ಲಿ ಈ ಹಲ್ಲೆ ನಡೆದಿದೆ ಎನ್ನಲಾಗಿದೆ. 

ಈ ಸಂಬಂಧ ಕುಷ್ಠಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Trending videos

Back to Top