CONNECT WITH US  

ಮತದಾರರ ಪಟ್ಟಿ : ದುರ್ಗಾವತಿಯ ಹೆಸರು ಸನ್ನಿ ಲಿಯೋನ್‌ ಫೋಟೋ!

ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಉತ್ತರ ಪ್ರದೇಶದ ಪುಟ್ಟ ಗ್ರಾಮ ಬಲ್ಲಿಯಾದ ಮತದಾರರು. ಆದರೆ ಅವರು ಮತ ಹಾಕಲು ದುರ್ಗಾವತಿ ಎಂಬ ಹೆಸರಿನಲ್ಲಿ ಮತಗಟ್ಟೆಗೆ ತೆರಳಲಿದ್ದಾರೆ. ಇವರ ಜೊತೆ ಒಂದು ಆನೆ, ಒಂದು ಪಾರಿವಾಳ ಕೂಡ ಇಲ್ಲಿಯ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಲಿವೆ. ಇದೇನು ತಮಾಷೆಯಾ ಎಂದು ಕೇಳುತ್ತಿದ್ದೀರಾ? ಇದು ಮತದಾರರ ಪಟ್ಟಿಯಲ್ಲಿ ಅಧಿಕಾರಿಗಳು ಮಾಡಿರುವ ಎಡವಟ್ಟು. ಮತದಾರರ ಪಟ್ಟಿ ಪರಿಶೀಲನೆ ನಡೆಸುವ ವೇಳೆ ಈ ಅಚಾತುರ್ಯಗಳೆಲ್ಲಾ ಬೆಳಕಿಗೆ ಬಂದಿವೆ. ದುರ್ಗಾವತಿ ಎಂಬ ಮಹಿಳೆಗೆ ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಫೋಟೊ ಬಳಸಲಾಗಿದೆ.

ಕನ್ವರ್‌ ಅಂಕುರ್‌ ಸಿಂಗ್‌ ಅವರ ಫೋಟೋ ಬದಲಿಗೆ ಜಿಂಕೆ ಮತ್ತು ಗೌರವ್‌ ಸಿಂಗ್‌ ಎಂಬವರ ಫೋಟೊ ಬದಲಿಗೆ ಪಾರಿವಾಳದ ಫೋಟೊ ಲಗತ್ತಿಸಲಾಗಿದೆ. ಸಮಾಜವಾದಿ ಪಕ್ಷದ ಸರ್ಕಾರದಲ್ಲಿ ಸಚಿವರಾಗಿದ್ದ ನಾರದ್‌ ರಾಯ್‌ ಬದಲಿಗೆ ಆನೆ ಚಿತ್ರ ಲಗತ್ತಿಸಲಾಗಿದೆ. ಈ ಅಚಾತುರ್ಯಕ್ಕೆ ಕಾರಣ ಯಾರೆಂದು ತನಿಖೆ ನಡೆಸಿದಾಗ ಸಿಬ್ಬಂದಿ ವಿಷ್ಣು ವರ್ಮ ಸಿಕ್ಕಿಬಿದ್ದಿದ್ದಾರೆ. ಇವರನ್ನು ಈಗ ವಜಾ ಮಾಡಲಾಗಿದೆಯಂತೆ.


Trending videos

Back to Top