CONNECT WITH US  

ನಡುರಾತ್ರಿ ಬಂದ ಕಾರು ಕಳ್ಳ;ನಗ್ನವಾಗಿಯೇ ಬೆನ್ನಟ್ಟಿ ಹಿಡಿದ ಯಜಮಾನ!

ವಾಷಿಂಗ್ಟನ್‌ : ನಡುರಾತ್ರಿ ಪತಿ,ಪತ್ನಿ ಹಾಯಾಗಿ ಏಕಾಂತದಲ್ಲಿ ರಮಿಸುತ್ತಿದ್ದರು. ಈ ವೇಳೆ ಮನೆಯ ಹೊರಗೆ ಆಗಂತುಕನೊಬ್ಬ ಆಗಮಿಸಿ ಕಾರು ಕಳವಿಗೆ ಯತ್ನಿಸುತ್ತಾನೆ. ಒಮ್ಮೆಲೆ ಸೈರನ್‌ ಮೊಳಗುತ್ತದೆ. ಕಾರಿನ ಯಜಮಾನ ಹುಟ್ಟುಡುಗೆಯಲ್ಲೆ ಹೊರಗೋಡಿ ಬಂದು ಕಳ್ಳನನ್ನು ಹಿಡಿಯುತ್ತಾನೆ. ಅರೇ ಇದ್ಯಾವ ಕಥೆ ಎಂದು ಅಸಹ್ಯಪಡಬೇಡಿ, ಅಮೆರಿಕಾದ ನ್ಯೂಕ್ಯಾಸ್ಟಲ್‌ನಲ್ಲಿ ನಡೆದ ನೈಜ ಘಟನೆ. ವಿಡಿಯೋ ನೋಡಿ ..

ಸ್ಟಿಫ‌ನ್‌ ಕುಲ್ಲನ್‌ ಎನ್ನುವ 29 ರ ಹರೆಯದ ಯುವಕ ಕಳ್ಳನನ್ನು ನಗ್ನವಾಗಿ ಹಿಡಿದ ವ್ಯಕ್ತಿ . ಈ  ವಿಚಾರವನ್ನು ಆತನ ಪತ್ನಿ ನಿಕೋಲಾ ಅವರೇ ಫೇಸ್‌ ಬುಕ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳ ವಿಡಿಯೋ ಸಹಿತ ಪೋಸ್ಟ್‌ ಮಾಡಿದ್ದು ಅದೀಗ ವೈರಲ್‌ ಆಗಿದೆ. 

17 ರ ಹರೆಯದ ಕುಡಿದ ಮತ್ತಿನಲ್ಲಿದ್ದ ಕಳ್ಳ ಕಾರು ಕಳವಿಗೆ ಯತ್ನಿಸಿದ್ದು, ನಗ್ನವಾದ ಯಜಮಾನನನ್ನು ಕೋಡಿ ಅಮಲಿನಲ್ಲೂ ಆತ ಬೆಚ್ಚಿ ಬಿದ್ದಿದ್ದಾನೆ. ಆತನನ್ನು ಪೊಲೀಸರು ಬೆಳಗಾದ ಮೇಲೆ ಬಂದು ವಶಕ್ಕೆ ಪಡೆದಿದ್ದಾರಂತೆ. 

Trending videos

Back to Top