CONNECT WITH US  

ಅಕ್ಟೋಬರ್‌ 28ರಿಂದ ದತ್ತಮಾಲಾ ಅಭಿಯಾನ

ಸಾಂದರ್ಭಿಕ ಚಿತ್ರ.

ಚಿಕ್ಕಮಗಳೂರು: ಶ್ರೀರಾಮಸೇನೆ ವತಿಯಿಂದ ದತ್ತಪೀಠದಲ್ಲಿ ಅ.28 ರಂದು ದತ್ತಮಾಲಾ ಅಭಿಯಾನ ನಡೆಯಲಿದೆ ಎಂದು ಶ್ರೀರಾಮಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ತಿಳಿಸಿದರು. 

ಭಾನುವಾರ ಮಾತನಾಡಿ, ಶ್ರೀರಾಮಸೇನೆ ವತಿಯಿಂದ ನಡೆಯಲಿರುವ 13ನೇ ದತ್ತಮಾಲಾ ಅಭಿಯಾನ ಇದಾಗಲಿದೆ. ಪ್ರತಿ ವರ್ಷದಂತೆ ಈ ವರ್ಷವೂ ಸಾವಿರಾರು ದತ್ತಭಕ್ತರು ಮಾಲೆ ಧರಿಸಿ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಅ.28 ರಂದು ನಗರದಲ್ಲಿ ಬೃಹತ್‌ ಶೋಭಾಯಾತ್ರೆ ನಡೆಸಿ ನಂತರ ದತ್ತಪೀಠಕ್ಕೆ ತೆರಳಿ ದತ್ತಪಾದುಕೆಗಳ ದರ್ಶನ ಪಡೆಯಲಾಗುವುದು ಎಂದು ಹೇಳಿದರು. 

ದತ್ತಪೀಠವನ್ನು ಹಿಂದೂಗಳ ಪೀಠವೆಂದು ಘೋಷಿಸಬೇಕು. ಅಲ್ಲಿರುವ ಘೋರಿಗಳನ್ನು ನಾಗೇನಹಳ್ಳಿಗೆ ಸ್ಥಳಾಂತರಿಸಬೇಕೆಂದು ಒತ್ತಾಯಿಸಿ ಅ.25 ರಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ, ಧರಣಿ, ಭಜನೆ ಮಾಡುವ ಮೂಲಕ ಹೋರಾಟ ನಡೆಸಲಾಗುವುದು ಎಂದರು.


Trending videos

Back to Top