ಜಿಲ್ಲಾದ್ಯಂತ ರಕ್ಷಾ ಬಂಧನ ಸಂಭ್ರಮ

ತುಮಕೂರು: ಅಣ್ಣ ತಂಗಿಯರ ಸಂಬಂಧದ ಪವಿತ್ರ ಹಬ್ಬವಾಗಿರುವ ರಕ್ಷಾಬಂದನವನ್ನು ಜಿಲ್ಲೆಯಾದ್ಯಂತ ಸಹೋದರಿಯರು ಸಹೋದರನಿಗೆ ರಕ್ಷೆ ಕಟ್ಟುವ ಮೂಲಕ ಆಚರಿಸಿದರು. ಜಿಲ್ಲಾದ್ಯಂತ ನೂಲು ಹುಣ್ಣಿಮೆಯ ದಿನವಾದ ಭಾನುವಾರ ಎಲ್ಲಾ ಕಡೆಯಲ್ಲಿಯೂ ರಕ್ಷಾ ಬಂಧನದ ಸಂಭ್ರಮ ಕಂಡು ಬಂದಿತು.
ಅಣ್ಣ ತಂಗಿಯರ ಪವಿತ್ರ ಸಂಬಂಧದ ಸಂಕೇತವಾಗಿ ಆಚರಿಸುವ ಈ ಹಬ್ಬದಲ್ಲಿ ತಂಗಿಯರು ಅಣ್ಣಂದರಿಗೆ ರಾಕಿ ಕಟ್ಟಿ ಆಶೀರ್ವಾದ ಪಡೆಯುತ್ತಿದ್ದದ್ದು ಕಂಡು ಬಂದಿತು. ರಕ್ಷಾ ಬಂಧನದ ಹಿನ್ನೆಲೆಯಲ್ಲಿ ನಗರದ ಅಂಗಡಿಗಳಲ್ಲಿ ಬಗೆ ಬಗೆಯ ರಾಕಿಗಳು ಮಾರಾಟಕ್ಕೆ ಇಟ್ಟಿದ್ದು ಭರ್ಜರಿ ಮಾರಾಟ ನಡೆಯಿತ್ತಿದು ಕಂಡು ಬಂದಿತು.
ಮನೆಗಳಲ್ಲಿ ಮನೆಗಳಲ್ಲಿ ಅಣ್ಣಂದಿರನ್ನು ಕೂರಿಸಿ ತಂಗಿ ಹಣೆಗೆ ತಿಲಕವಿಟ್ಟು ರಕ್ಷಾ ಬಂಧನ ಕಟ್ಟಿ ಸಿಹಿ ತಿನ್ನಿಸಿ ಅಣ್ಣನಿಂದ ಪ್ರೀತಿಯ ಉಡುಗೊರೆ ಪಡೆಯುತ್ತಿದ್ದದ್ದು ಸಾಮಾನ್ಯವಾಗಿತ್ತು. ಮಕ್ಕಳು ಕೂಡಾ ತಂಗಿಯರಿಂದ ರಾಕಿ ಕಟ್ಟಿಸಿಕೊಳ್ಳುತ್ತಿದ್ದರು ಜಿಲ್ಲೆಯ ಎಲ್ಲಾ ಕಡೆ ರಕ್ಷಾ ಬಂಧನ ವಿಶೇಷ ವಾಗಿ ನಡೆಯಿತು.