ಮಳೆಗೆ ಜಲಾವೃತಗೊಂಡ ರಸೆ

ಯಾದಗಿರಿ: ಜಿಲ್ಲಾದ್ಯಂತ ಕಳೆದ ರಾತ್ರಿ ಅಲ್ಪಮಳೆ ಸುರಿದಿದ್ದು,ಯಾದಗಿರಿ ತಾಲೂಕು ವ್ಯಾಪ್ತಿಯಲ್ಲಿ 23 ಮಿ.ಮೀ, ವಡಗೇರಾ 14 ಮಿ.ಮೀ, ಶಹಾಪುರ 19 ಮಿ.ಮೀ ಹಾಗೂ ಗುರುಮಠಕಲ್ ವ್ಯಾಪ್ತಿಯಲ್ಲಿ ಸೋಮವಾರ ಬೆಳಗ್ಗೆವರೆಗೆ
25 ಮಿ.ಮೀ ಮಳೆ ಆಗಿರುವ ವರದಿಯಾಗಿದೆ.
ಮಳೆ ಬಂದರೆ ಸಾಕು ಜಿಲ್ಲಾ ಕೇಂದ್ರದ ರಸ್ತೆಗಳು ಜಲಾವೃತಗೊಳ್ಳುವುದು ಸಾಮಾನ್ಯವಾಗಿದೆ. ಇದರಿಂದಾಗಿ ವಾಹನ ಸವಾರರು, ಪಾದಚಾರಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ನಗರದ ಚಿತ್ತಾಪೂರ ರಸ್ತೆಯು ಸ್ವಲ್ಪ ಮಳೆ ಬಂದರೆ ಮಳೆ ನೀರಿನಿಂದ ಜಲಾವೃತಗೊಳ್ಳುತ್ತದೆ. ಅವೈಜ್ಞಾನಿಕ ಚರಂಡಿ ನಿರ್ಮಾಣ ಮತ್ತು ಚರಂಡಿಗಳಲ್ಲಿ ಕೊಳಚೆ ತುಂಬಿರುವುದರಿಂದ ಮಳೆ ನೀರು ಸರಳವಾಗಿ ಸಾಗದೆ ರಸ್ತೆಯಲ್ಲಿ ನೀರು ಸಂಗ್ರಹ ಆಗುತ್ತದೆ. ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.