CONNECT WITH US  

ಕ್ಷುಲ್ಲಕ ಜಗಳ: ಅಜ್ಜಿ ಮಗಳ ಮೇಲೆ ಹಲ್ಲೆ 

ಚನ್ನಪಟ್ಟಣ: ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಲ್ಲಿ ಅಜ್ಜಿ, ಮಗಳು, ಮೊಮ್ಮಗಳ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ ಅಕ್ಕೂರು ಪೊಲೀಸ್‌ ಠಾಣೆ ವ್ಯಾಪ್ತಿಯ ತಾಲೂಕಿನ ವಿರುಪಾಕ್ಷಿಪುರ ಗ್ರಾಮದಲ್ಲಿ ನಡೆದಿದೆ.

ಹಲ್ಲೆಗೊಳಗಾಗಿರುವವರು ಗ್ರಾಮದ ಲೇಟ್‌ ಕುಳ್ಳಯ್ಯ ಎಂಬುವರ ಪತ್ನಿ ಕೆಂಪಮ್ಮ, ಮಗಳು ಚಿಕ್ಕ ಉರಗಯ್ಯರ ಪತ್ನಿ ದೇವಮ್ಮ, ಮಗಳು ಆಶಾ ಇವರ ಮೇಲೆ ಅದೇ ಗ್ರಾಮದ ತಮ್ಮಯ್ಯನ ಮಗ ಸತೀಶ್‌, ತಾಯಿ ಪುಟ್ಟಮ್ಮ ಹಾಗೂ ತಮ್ಮಯ್ಯನ ಸಹೋದರಿ ಗುಂಗಮಾರಮ್ಮ ಹಲ್ಲೆ ನಡೆಸಿದ್ದಾರೆ ಆರೋಪಿಸಲಾಗಿದೆ.

ಗ್ರಾಮದ ಒಂದೇ ಬೀದಿಯಲ್ಲಿ ಎದುರು ಬದುರು ಮನೆಯಲ್ಲಿರುವ ಕುಟುಂಬಗಳು ಮೇಕೆ  ಸೀಮೆ ಹುಲ್ಲಿಗೆ ಬಾಯಿ ಹಾಕಿದ ವಿಚಾರದಲ್ಲಿ ಪ್ರಶ್ನಿಸಿದ್ದಕ್ಕೆ ಅಜ್ಜಿ,ಮಗಳು, ಮೊಮ್ಮಗಳ ಮೇಲೆ ಏಕಾಏಕಿ ದಾಳಿ ಮಾಡಿ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ. 80 ವರ್ಷದ ವೃದ್ಧೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಕ್ಕೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.

ಇಂದು ಹೆಚ್ಚು ಓದಿದ್ದು

ಬೆಂಗಳೂರಿನಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಬಂಧಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಚಿವ ರಮೇಶ ಜಾರಕಿಹೊಳಿ.

Nov 19, 2018 06:00am

ಬಾಗಲಕೋಟೆಯಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ ಬೆಂಕಿಗೆ ಆಹುತಿ.

Nov 19, 2018 06:00am

Trending videos

Back to Top