CONNECT WITH US  

ರಾಯರ ದರ್ಶನ ಪಡೆದ ಮೋಹನ್‌ ಭಾಗವತ್‌

ರಾಯಚೂರು: ಆರ್‌ಎಸ್‌ಎಸ್‌ನ ಅಖೀಲ ಭಾರತೀಯ ಸಮನ್ವಯ ಬೈಠಕ್‌ ನಿಮಿತ್ತ ಮಂತ್ರಾಲಯಕ್ಕೆ ಆಗಮಿಸಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಷ್ಟ್ರೀಯ ಅಧ್ಯಕ್ಷ, ಮೋಹನ್‌ ಭಾಗವತ್‌ ಶುಕ್ರವಾರ ಬೆಳಗ್ಗೆ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಯ ದರ್ಶನ ಪಡೆದರು.

ಗುರುವಾರ ರಾತ್ರಿ ಮಂತ್ರಾಲಯಕ್ಕೆ ಆಗಮಿಸಿದ ಅವರಿಗೆ ಅಲ್ಲಿಯೇ ತಂಗುವ ವ್ಯವಸ್ಥೆ ಮಾಡಲಾಗಿದೆ. ಶುಕ್ರವಾರ ಬೆಳಗ್ಗೆ ಮಂಚಾಲಮ್ಮ ದೇವಿ ದರ್ಶನ ಪಡೆದ ನಂತರ, ರಾಯರ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ನಂತರ, ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಅವರನ್ನು ಆಶೀರ್ವದಿಸಿ ಗೌರವಿಸಿದರು.

ಈ ವೇಳೆ, ಉಭಯ ಕುಶಲೋಪರಿ ವಿಚಾರಿಸಿದ ಶ್ರೀಗಳು, ಮಂತ್ರಾಲಯದ ಸ್ಥಾನ ಮಹತ್ವ, ರಾಯರ ಮಹಿಮೆ ಹಾಗೂ ಮಂತ್ರಾಲಯ ಮಠದ ಅಭಿವೃದ್ಧಿ, ದೇಶದಲ್ಲಿರುವ ಮಠದ ಶಾಖಾ ಮಠಗಳ ಕುರಿತು ವಿವರಿಸಿದರು.ಹಿಂದು ಧರ್ಮದ ಪ್ರಗತಿಗೆ ಸಂಬಂಧಿಸಿದ ವಿಷಯಗಳ ಚರ್ಚೆ ನಡೆಸಿದರು.

ಇಂದು ಹೆಚ್ಚು ಓದಿದ್ದು

ಬೆಂಗಳೂರಿನಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಬಂಧಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಚಿವ ರಮೇಶ ಜಾರಕಿಹೊಳಿ.

Nov 19, 2018 06:00am

ಬಾಗಲಕೋಟೆಯಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ ಬೆಂಕಿಗೆ ಆಹುತಿ.

Nov 19, 2018 06:00am

Trending videos

Back to Top