CONNECT WITH US  

ತುಮಕೂರು:ಕ್ರೇನ್‌ಗೆ ಕಾರು ಢಿಕ್ಕಿ;4ಮಂದಿ ಬಲಿ,ಮೂವರು ಗಂಭೀರ 

ತುಮಕೂರು: ಶಿರಾದ ಕರಜೀವನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ  ನಿಂತಿದ್ದ ಕ್ರೇನ್‌ಗೆ ಮಾರುತಿ ಆಮ್ನಿ ಕಾರೊಂದು ಢಿಕ್ಕಿಯಾಗಿ ನಾಲ್ವರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡ ಭೀಕರ ಅವಘಡ ಬುಧವಾರ ಬೆಳಗಿನ ಜಾವ ನಡೆದಿದೆ. 

ಬೆಂಗಳೂರಿನಿಂದ ಶಿರಾ ಕಡೆಗೆ ತೆರಳುತ್ತಿದ್ದ ಕಾರು ಕೆಟ್ಟು ನಿಂತ ಲಾರಿ ತೆರವಿಗೆ ಬಂದಿದ್ದ ಕ್ರೇನ್‌ಗೆ ಢಿಕ್ಕಿಯಾಗಿ ಅವಘಡ ಸಂಭವಿಸಿದೆ. 

ಮೃತರ ಪೈಕಿ 30 ಶಶಿಕುಮಾರ್‌, ಹೇಮಂತ್‌ ಎನ್ನುವವರ ಗುರುತು ಪತ್ತೆಯಾಗಿದೆ.

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತದ ತೀವ್ರತೆಗೆ ಆಮ್ನಿಯ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.

ಕಳ್ಳಂಬೆಳ್ಳ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.  

Trending videos

Back to Top