ಅಫ್ಘಾನಿಸ್ಥಾನಕ್ಕೆ ಅಮೆರಿಕ ರಕ್ಷಣಾ ಸಚಿವ ಮ್ಯಾಟಿಸ್ ಅಪ್ರಕಟಿತ ಭೇಟಿ

ಕಾಬೂಲ್ : ಅಮೆರಿಕದ ರಕ್ಷಣಾ ಸಚಿವ ಜಿಮ್ ಮ್ಯಾಟಿಸ್ ಅವರು ಇಂದು ಶುಕ್ರವಾರ ಬೆಳಗ್ಗೆ ಅಪ್ರಕಟಿತ ಭೇಟಿಗಾಗಿ ಸಮರತ್ರಸ್ತ ಅಫ್ಘಾನಿಸ್ಥಾನದ ಕಾಬೂಲ್ನಲ್ಲಿ ಬಂದಿಳಿದರು.
ತಾಲಿಬಾನ್ ಉಗ್ರ ಸಂಘಟನೆಯನ್ನು ಮಾತುಕತೆಯ ವೇದಿಕೆಗೆ ಕರೆ ತರುವ ಯತ್ನದಲ್ಲಿ ಮ್ಯಾಟಿಸ್ ಅವರು ಅಪಾ^ನಿಸ್ಥಾನಕ್ಕೆ ದಿಢೀರ್ ಭೇಟಿ ನೀಡಿರುವುದಾಗಿ ತಿಳಿದು ಬಂದಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವರ್ಷದ ಹಿಂದೆ ತಮ್ಮ ನೂತನ ಅಫ್ಘಾನಿಸ್ಥಾನ ತಂತ್ರಗಾರಿಕೆಯನ್ನು ಪ್ರಕಟಿಸಿದ್ದರು. ಆ ಮೂಲಕ ಅವರು ಅಫ್ಘಾನಿಸ್ಥಾನಕ್ಕೆ ಹೆಚ್ಚುವರಿಯಾಗಿ ಸಹಸ್ರಾರು ಅಮೆರಿಕನ್ ಸೈನಿಕರನ್ನು ಕಳುಹಿಸಿದ್ದರು. ಅದಾಗಿ ಈಗ ವಿದೇಶ ಸಚಿವ ಮ್ಯಾಟಿಸ್ ಅಪಾ^ನಿಸ್ಥಾನಕ್ಕೆ ಭೇಟಿ ನೀಡಿದ್ದಾರೆ.