CONNECT WITH US  

ಎಲ್‌ಜಿಬಿಟಿ ಗೆಲುವು,ಏನನ್ನುತ್ತೆ ಟ್ವೀಟ್‌ ಲೋಕ?

 ಎಜೆಪ್ಲಸ್‌
ಬ್ರಿಟಿಷ್‌ ಕಾಲದ ಕಾನೂನನ್ನು ಕಿತ್ತೆಸೆಯುವ ಮೂಲಕ ಭಾರತ ಬೃಹತ್‌ ಹೆಜ್ಜೆಯಿಟ್ಟಿದೆ. ಈ ಕಾನೂನನ್ನು ಬ್ರಿಟಿಷ್‌ ಆಳ್ವಿಕೆಯಲ್ಲಿದ್ದ ಸುಮಾರು 40 ರಾಷ್ಟ್ರಗಳು ಅಳವಡಿಸಿಕೊಂಡಿದ್ದು, ಕೇವಲ 5 ರಾಷ್ಟ್ರಗಳು ಮಾತ್ರ ಸಲಿಂಗ ಸ್ವಾತಂತ್ರ್ಯಕ್ಕೆ ಮನ್ನಣೆ ನೀಡಿವೆ (ಭಾರತ, ಆಸ್ಟ್ರೇಲಿಯಾ, ಫಿಜಿ, ಹಾಂಗ್‌ಕಾಂಗ್‌, ನ್ಯೂಜಿಲೆಂಡ್‌)

 ಚೇತನ್‌ ಭಗತ್‌
ಭಾರತದ 10 ಪ್ರತಿಶತ ಜನಸಂಖ್ಯೆ ಎಲ್‌ಜಿಬಿಟಿಯದ್ದು. ಅಂದರೆ 10 ಕೋಟಿಗೂ ಹೆಚ್ಚು ಜನರು! ಇದು ಚಿಕ್ಕ ಸಂಖ್ಯೆಯೇನೂ ಅಲ್ಲ. ಅದಕ್ಕೇ ಸುಪ್ರೀಂ ಕೋರ್ಟ್‌ ತೀರ್ಪು ಮುಖ್ಯವಾಗುತ್ತದೆ. 

ಮಿಲಿಂದ್‌ ದೇವ್ಡಾ 
ಸರಕಾರಗಳು ಮಾಡಲು ಹೆದರುತ್ತಿದ್ದ ಕೆಲಸವನ್ನು ಮತ್ತೂಮ್ಮೆ ಸುಪ್ರೀಂ ಕೋರ್ಟ್‌ ಮಾಡಿದೆ. ಸಲಿಂಗಿಗಳಿಗಾಗಿ ಹೋರಾಡಿದ ಪ್ರತಿಯೊಬ್ಬರಿಗೂ ಅಭಿನಂದನೆಗಳು ಮತ್ತು ಧನ್ಯವಾದಗಳು. 

ಲಿಟಲ್‌ಯೂಫೋರಿಯಾ
ಸಲಿಂಗಕಾಮವೀಗ ಅಪರಾಧವಲ್ಲ. ಯಾವುದು ಸಹಜವಾಗಿತ್ತೋ ಅದಕ್ಕೆ ಭಾರತವೀಗ ಕಾನೂನು ಮಾನ್ಯತೆ ನೀಡಿದೆಯಷ್ಟೆ. 

 ಐಯರ್‌ವಾಲ್‌
ಭಾರತವೆಂದಿಗೂ ಸಲಿಂಗ ವಿರೋಧಿ ರಾಷ್ಟ್ರವಾಗಿರಲೇ ಇಲ್ಲ. ನಾನೆಂದಿಗೂ ಸಲಿಂಗ ವಿರೋಧವನ್ನು ಎದುರಿಸಿಲ್ಲ. ನಾವು ಗೇ ಸಮುದಾಯದವರು ಸಂತ್ರಸ್ತರ ಪಾತ್ರವಹಿಸುವುದನ್ನು ಬಿಡಬೇಕು. 

 ರೂಪಾ ಜೋಗಾನಿ
ಹಿಂದೆಲ್ಲ ಭಾರತವು ಸಲಿಂಗಕಾಮದ ವಿರೋಧಿಯಾಗಿರಲಿಲ್ಲ. ನಮ್ಮ ದೇಶದ ಕಲೆಯಲ್ಲಿ, ಸಂಸ್ಕೃತಿಯಲ್ಲಿ  ಮುಕ್ತ ವಾತಾವರಣವಿತ್ತು. ಬ್ರಿಟಿಷರು ಬಂದು ಸಲಿಂಗಕಾಮವನ್ನು ನಿಷೇಧಿಸಿದ ಮೇಲೆಯೇ ಭಾರತ ಈ ವಿಷಯದಲ್ಲಿ ಸಂಪ್ರದಾಯವಾದಿ ಆಯಿತು. ಈಗ ನಾವು ನಮ್ಮ ಬೇರುಗಳೆಡೆಗೆ ಹಿಂದಿರುಗುತ್ತಿದ್ದೇವೆ. 

ತೂಜಾನೇನಾ
ಎಲ್‌ಜಿಬಿಟಿ ಸಮುದಾಯ ನಮ್ಮ ದೇಶದಲ್ಲಿ ಅಪಮಾನ-ಭಯ ಎದುರಿಸಿಲ್ಲ ಎನ್ನುವುದು ಸುಳ್ಳು. ತೃತೀಯ ಲಿಂಗಿಗಳು ಮತ್ತು ಗೇಗಳು ತಾವು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಲೇ ಬಂದಿದ್ದಾರೆ. ಜನರು ತಮ್ಮ ಮಗ/ಮಗಳು ತೃತೀಯ ಲಿಂಗಿ/ಗೇ ಎಂದು ತಿಳಿದದ್ದೇ ಅವರನ್ನು ಈಗಲೂ ಮನೆಯಿಂದ ಹೊರದಬ್ಬುತ್ತಾರೆ ಎನ್ನು ವುದು ಸುಳ್ಳೇ? ಸಮಾಜ ಅವರನ್ನು ತುತ್ಛವಾಗಿ, ವ್ಯಂಗ್ಯವಾಗಿ ನೋಡುತ್ತದೆ ಎನ್ನುವುದು ಸುಳ್ಳೇ? 

 ಸುನೇತ್ರ ಇಂದು
ಈಗ ಸಿನೆಮಾ ರಂಗದ ಪ್ರಮುಖರು ಗೇ ಸಮುದಾಯಕ್ಕೆ ಗೆಲುವಾಯಿತು ಎಂದು ಕುಣಿದಾಡುತ್ತಿದ್ದಾರೆ. ಆದರೆ ಭಾರತದ ಎಲ್ಲಾ ಸಿನೆಮಾ ಇಂಡಸ್ಟ್ರಿಗಳೂ ಆ ಸಮುದಾಯವನ್ನು ಇಷ್ಟು ವರ್ಷಗಳಿಂದ ಹೀನಾಯವಾಗಿ ತೋರಿಸುತ್ತಾ ಬಂದಿಲ್ಲವೇ? ಮೊದಲು ಸಿನೆಮಾ ಇಂಡಸ್ಟ್ರಿಯ ಮನಸ್ಸು ಸ್ವತ್ಛವಾಗಲಿ. 

 ಹೀರೇನ್‌ 
ಸುಪ್ರೀಂ ಕೋರ್ಟ್‌ ಆರ್ಟಿಕಲ್‌ 377 ಬಗ್ಗೆ ಕೊಟ್ಟ ತೀರ್ಪು ಭಾರತೀಯ ದಂಡ ಸಂಹಿತೆ(ಐಪಿಸಿ) ವ್ಯಾಪ್ತಿಯಲ್ಲಿ ಬರುತ್ತದೆ. ಆದರೆ ಜಮ್ಮು-ಕಾಶ್ಮೀರ  ದಲ್ಲಿ ಪ್ರತ್ಯೇಕ ಕ್ರಿಮಿನಲ್‌ ಕಾಯ್ದೆಯಿದೆ(ಆರ್‌ಪಿಸಿ). ಹೀಗಾಗಿ ಈಗ ಐಪಿಸಿಯಲ್ಲಾಗಿರುವ ಬದಲಾವಣೆ ಆರ್‌ಪಿಸಿಗೂ ಅನ್ವಯವಾಗುವುದಿಲ್ಲ. 

 ಟೂಲಿಪ್‌ಟ್ರಾತ್ಸ್
ಇಂಥ ಐತಿಹಾಸಿಕ ತೀರ್ಪು ಬಂದರೂ ನಮ್ಮ ಪ್ರಧಾನಮಂತ್ರಿಗಳು ಅಥವಾ ಬಿಜೆಪಿ ಎಲ್‌ಜಿಬಿಟಿ ಸಮುದಾಯಕ್ಕೆ ಅಭಿನಂದಿಸಿ ಟ್ವೀಟ್‌ ಮಾಡಿಲ್ಲ. ಏಕೆ ಹಿಂಜರಿಕೆ? 

 ಕುನಾಲ್‌ ತೀರಥ್‌
ಯುಪಿಎ ಸರಕಾರ ತನ್ನ ಮತಬ್ಯಾಂಕ್‌ ಅನ್ನು ಎದುರುಹಾಕಿಕೊಳ್ಳಲು ಇಷ್ಟವಿಲ್ಲದೇ ಆರ್ಟಿಕಲ್‌ 377 ವಿರುದ್ಧ ಮಾತನಾಡುತ್ತಿರಲಿಲ್ಲ. ಆದರೆ ಬಿಜೆಪಿ ನ್ಯಾಯಾಲಯದ ತೀರ್ಪನ್ನು ಗೌರವಿಸಿದೆ. ಮಾತಿಗಿಂತ ಕೃತಿ ಮುಖ್ಯ ಎನ್ನುವುದು ನೆನಪಿರಲಿ. 

ನೀವೂ ನಮಗೆ ಟ್ವೀಟ್‌ ಮಾಡಿ @UdayavaniNews


Trending videos

Back to Top