CONNECT WITH US  

ಪೊಲೀಸರು-ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ

ಕುಂದಾಪುರ: ಬಂದ್‌ ಸಂದರ್ಭ ಮುಚ್ಚಿದ್ದ ಅಂಗಡಿ ಮುಂಗಟ್ಟುಗಳನ್ನು ತೆರೆಸಲು ಮನವಿ ಮಾಡಲು ಹೊರಟಿದ್ದ ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರನ್ನು ಡಿವೈಎಸ್‌ಪಿ ಡಿ.ಪಿ. ದಿನೇಶ್‌ ಕುಮಾರ್‌ ಹಾಗೂ ಕಂಡ್ಲೂರು ಎಸ್‌ಐ ಶ್ರೀಧರ ನಾಯ್ಕ ತಡೆದಾಗ ಮಾತಿನ ಚಕಮಕಿ ನಡೆಯಿತು. ಕಾಂಗ್ರೆಸ್‌ನವರು ಮೆರವಣಿಗೆ ಹೋದಾಗ ತಡೆಯದ ಪೊಲೀಸರು ಬಿಜೆಪಿಗರ ಮೇಲೆ ದಬ್ಟಾಳಿಕೆ ನಡೆಸುತ್ತಿದ್ದಾರೆ ಎಂದು ಕಾರ್ಯಕರ್ತರು ಅಸಮಾಧಾನ ತೋರಿಸಿದರು. 

ನಮಗೆ ಎಲ್ಲ ಪಕ್ಷದವರೂ ಒಂದೇ, ಶಾಂತಿ ಸುವ್ಯವಸ್ಥೆ ಮುಖ್ಯ. ಕಾಂಗ್ರೆಸ್‌ನವರಿಗೆ ಕೂಡ ಬಲವಂತದಿಂದ ಬಂದ್‌ ನಡೆಸಲು ಅವಕಾಶ ಕೊಡಲಿಲ್ಲ. ಅಂತೆಯೇ ಬಿಜೆಪಿಯವರಿಗೆ ಕೂಡ ಬಲ ವಂತದಿಂದ ಅಂಗಡಿ ತೆರೆಸಲು ಬಿಡುವುದಿಲ್ಲ. ವರ್ತಕರು ಸ್ವಯಂ ಅಪೇಕ್ಷೆಯಂತೆ ನಡೆದುಕೊಳ್ಳಬಹುದು. ಅವರಿಗೆ ರಕ್ಷಣೆ ಕೊಡುವ ಜವಾಬ್ದಾರಿ ನಮ್ಮದು ಎಂದು ಡಿವೈಎಸ್‌ಪಿ ಪ್ರತಿಕ್ರಿಯಿಸಿದರು. ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಕೂಡ ಬಂದ್‌ ಮಾಡಿಸಲಾಗಿದೆ ಎಂದು ಬಿಜೆಪಿಯವರು ಹೇಳಿದರು.

ಇಂದು ಹೆಚ್ಚು ಓದಿದ್ದು

Trending videos

Back to Top