CONNECT WITH US  

ಪರಾಗ ಸ್ಪರ್ಶವಾಯ್ತು ಹೂವಿಗೆ: ಫೀಲಿಂಗ್ ಸಾಂಗ್ ವೀಕ್ಷಿಸಿ

''ನಡುವೆ ಅಂತರವಿರಲಿ' ಚಿತ್ರದ "ಪರಾಗ ಸ್ಪರ್ಶವಾಗಿದೆ ಸೇವಂತಿ ಹೂವಿಗೆ' ಎಂಬ ಫೀಲಿಂಗ್ ಹಾಡು ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಕತ್ ಸದ್ದು ಮಾಡುತ್ತಿದೆ. ಅಲ್ಲದೇ ಹಾಡನ್ನು ಮೈತ್ರಿ ಅಯ್ಯರ್ ಹಾಡಿದ್ದು, ಯೋಗರಾಜ್ ಭಟ್ಟರ ಸಾಹಿತ್ಯವಿದೆ. ಬೃಂದಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ರವೀನ್- ಜಿ.ಕೆ. ನಾಗರಾಜು ನಿರ್ಮಾಣದಲ್ಲಿ ಈ ಚಿತ್ರ ಮೂಡಿಬಂದಿದೆ. ಪ್ರಖ್ಯಾತ್ ಪರಮೇಶ್ ಎಂಬ ನವ ಪ್ರತಿಭೆ ಈ ಚಿತ್ರದ ಮೂಲಕ ನಾಯಕರಾಗಿ ಪರಿಚಯವಾಗುತ್ತಿದ್ದು, ಅವರಿಗೆ ಜೋಡಿಯಾಗಿ ಐಶಾನಿ ಶೆಟ್ಟಿ ನಟಿಸಿದ್ದಾರೆ.  ಕಾಲೇಜ್ ಹುಡುಗ- ಹುಡುಗಿಯರ ಲವ್ ಸ್ಟೋರಿ ಜೊತೆಗೆ ಪ್ರಸ್ತುತ ಜನರೇಷನ್ ಗೆ ಸಂಬಂಧಿಸಿದ ನೈಜ ಘಟನೆಯನ್ನು ಚಿತ್ರ ಆಧಾರಿಸಿದೆ. ಚಿತ್ರದಲ್ಲಿ "ಟ್ರಂಕ್' ಚಿತ್ರದ ನಿರ್ದೇಶಕಿ ರಿಶಿಕಾ ಶರ್ಮ ಅವರನ್ನು ಸಹ ಕಾಣಬಹುದು. ಜೊತೆಗೆ ಚಿಕ್ಕಣ್ಣ, ಅರುಣಾ ಬಾಲರಾಜ್, ರಕ್ಷಿತ್ ಕುಮಾರ್, ಮಂಜು ಮಾಂಡವ್ಯ, ತುಳಸಿ ಶಿವಮಣಿ, ಶ್ರೀನಿವಾಸಪ್ರಭು ಹಾಗೂ ಇನ್ನಿತರರು ಚಿತ್ರದ ತಾರಾಬಳಗದಲ್ಲಿದ್ದು, ಈ ಚಿತ್ರವನ್ನು ರವೀನ್ ಅವರು ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಇನ್ನು ಚಿತ್ರಕ್ಕೆ ವಿ. ನಾಗೇಂದ್ರ ಪ್ರಸಾದ್, ಯೋಗರಾಜ್ ಭಟ್ ಮತ್ತು ಗೌಸ್ ಪೀರ್ ಸಾಹಿತ್ಯ, ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ಚಿತ್ರದ ಫೀಲಿಂಗ್ ಸಾಂಗ್ ವೀಕ್ಷಿಸಿ.

Back to Top