CONNECT WITH US  

ಕಾತ್ರಜ್‌ ಶ್ರೀ ಅಯ್ಯಪ್ಪ ದೇವಸ್ಥಾನ ಸಾರ್ವಜನಿಕ ಸತ್ಯನಾರಾಯಣ ಪೂಜೆ 

ಪುಣೆ: ಕಾತ್ರಜ್‌ನ ಸಚ್ಚಾಯಿ ಮಾತಾ ನಗರದಲ್ಲಿರುವ ಕಾರಣಿಕ ಕ್ಷೇತ್ರ, ಪುಣೆಯ ಭಕ್ತ ಜನರ ಶ್ರದ್ಧಾಕೇಂದ್ರ  ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ  ಶ್ರಾವಣ ಮಾಸದ  ದಕ್ಷಿಣಾಯಣ ಚತುರ್ದಶಿ  ದಿನ ಸೆ. 8ರಂದು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ಶ್ರದ್ಧಾ ಭಕ್ತಿಯಿಂದ  ಜರಗಿತು.

ಶ್ರೀ ಅಯ್ಯಪ್ಪ ಸ್ವಾಮಿ ಮಂದಿ ರದಲ್ಲಿ ಸಂಜೆ  5.30 ಶುಭ ಮಹೂ ರ್ತದಲ್ಲಿ ದೇವಸ್ಥಾನದ  ಪ್ರಧಾನ ಅರ್ಚಕರಾದ ಹರೀಶ್‌ ಭಟ್‌ ಅವರ ಪೌರೋಹಿತ್ಯದಲ್ಲಿ ಶ್ರೀ ಸತ್ಯ ನಾರಾಯಣ ಕಲೊ³àಕ್ತ ಪೂಜೆ ಕಥೆ ಪ್ರಾರಂಭಗೊಂಡು ಪೂಜಾ-ವಿಧಿಗಳು ನೆರವೇರಿದವು.  ನಂತರ ಮಹಾ ಪೂಜೆ, ಮಹಾ ಮಂಗಳಾರತಿ ಜರಗಿತು. ಕಾತ್ರಜ್‌ ಶ್ರೀ ಅಯ್ಯಪ್ಪ ಸ್ವಾಮೀ ಸೇವಾ ಸಮಿತಿಯ ಭಾಸ್ಕರ್‌ ಕೊಟ್ಟಾರಿ ದಂಪತಿ ಪೂಜಾ  ವಿಧಿ-ವಿಧಾನಗಳನ್ನೂ ನೆರವೇರಿಸಿದರು.

ಸತ್ಯನಾರಾಯಣ ಪೂಜೆ ಮಾಡಿಸಿದ ಭಕ್ತರು  ಗಂಧ ಪ್ರಸಾದ ಸ್ವೀಕರಿಸಿದರು. ನಂತರ  ಸಾರ್ವಜನಿಕ ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನಡೆಯಿತು. ಅನ್ನಸಂತರ್ಪಣೆ ಸೇವೆಯು  ವಿಶ್ವಸ್ಥ ಸಮಿತಿ ಜೊತೆ ಕೋಶಾಧಿಕಾರಿ ಶ್ರೀ  ಬಾಲಕೃಷ್ಣ ಗೌಡ ಮತ್ತು ಪರಿವಾರದವರಿಂದ ಸೇವಾರೂಪಲ್ಲಿ  ಜರಗಿತು.

ಈ ಸಂದರ್ಭದಲ್ಲಿ ಮಂದಿರದ ಸನ್ನಿಧಿಯಲ್ಲಿ ಆರಾಧ್ಯ ದೇವರಾದ ಅಯ್ಯಪ್ಪ ಸ್ವಾಮಿ  ಮತ್ತು ಪರಿವಾರ ದೇವರಿಗೆ ವಿಶೇಷ ಪೂಜೆ ಜರಗಿತು. ಭಕ್ತರು ಸೇವಾ ರೂಪದಲ್ಲಿ  ಅಕ್ಕಿ, ಕಾಯಿ, ತುಪ್ಪ ಹೂ ಹಿಂಗಾರ ದೇವರಿಗೆ ಅರ್ಪಿಸಿದರು. ಅಪಾರ ಸಂಖ್ಯೆಯಲ್ಲಿ ಸೇರಿದ ಭಕ್ತರು ಗಂಧ ಪ್ರಸಾದ ಸ್ವೀಕರಿಸಿ ಶ್ರೀ ವೆಂಕಟರಮಣ ದೇವರ, ಶ್ರೀ  ಅಯ್ಯಪ್ಪ ಸ್ವಾಮೀ  ಕೃಪೆಗೆ ಪಾತ್ರರಾದರು.

ಪ್ರತಿ ವರ್ಷವೂ ಶ್ರೀ ಅಯ್ಯಪ್ಪ ಸ್ವಾಮೀ ಸನ್ನಿಧಿಯಲ್ಲಿ ಶ್ರಾವಣ ಮಾಸದಲ್ಲಿ ಸತ್ಯನಾರಾಯಣ ಪೂಜೆಯು ನಡೆಯುತಿದ್ದು,  ಅತಿ ಹೆಚ್ಚಿನ ಸಂಖ್ಯೆಯಲ್ಲಿ   ಭಕ್ತರು ಈ ಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಧಾರ್ಮಿಕ ಕಾರ್ಯಕ್ರಮವು ದೇವಸ್ಥಾನದ  ಶ್ರೀ ಅಯ್ಯಪ್ಪ ಸ್ವಾಮೀ ಸೇವಾ ಸಮಿತಿಯ  ವಿಶ್ವಸ್ಥ ಮಂಡಳಿಯ ಅಧ್ಯಕ್ಷರಾದ ಸುಭಾಶ್‌ ಶೆಟ್ಟಿ  ಮತ್ತು ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಅಧ್ಯಕ್ಷರು ಮತ್ತು  ಪದಾಧಿಕಾರಿಗಳು, ಮಹಿಳಾ ಮಂಡಲದ ಅಧ್ಯಕ್ಷೆ ಮತ್ತು ಪದಾಧಿಕಾರಿಗಳ ನೇತೃತ್ವದಲ್ಲಿ ಹಾಗೂ ಭಕ್ತರ   ಸಹಕಾರ ಸೇವೆಯೊಂದಿಗೆ ಅದ್ದೂರಿಯಾಗಿ ನಡೆಯಿತು. 

ಚಿತ್ರ-ವರದಿ : ಹರೀಶ್‌ ಮೂಡಬಿದ್ರಿ ಪುಣೆ


Trending videos

Back to Top