CONNECT WITH US  

28ರಂದು ಮೆಡಿಕಲ್‌ ಶಾಪ್‌ ಬಂದ್‌

ಮುಂಬೈ: ಆನ್‌ಲೈನ್‌ ಮೂಲಕ ಔಷಧಿಗಳ ಮಾರಾಟಕ್ಕೆ ಅವಕಾಶ ನೀಡಿರುವುದರ ವಿರುದ್ಧ ಈಗಾಗಲೇ ಮುಷ್ಕರ ನಡೆಸಿದ್ದ ಆಲ್‌ ಇಂಡಿಯಾ ಕೆಮಿಸ್ಟ್‌ ಮತ್ತು ಡ್ರಗಿಸ್ಟ್‌ (ಎಐಒಸಿಡಿ) ಸಂಘಟನೆ, ಇದೇ ವಿಚಾರವಾಗಿ ಸೆ. 28ರಂದು ಮತ್ತೂಮ್ಮೆ ಮುಷ್ಕರಕ್ಕಿಳಿಯಲು ನಿರ್ಧರಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಎಐಒಸಿಡಿ ಅಧ್ಯಕ್ಷ ಜೆ.ಎಸ್‌. ಶಿಂಧೆ, "ಇ-ಫಾರ್ಮಸಿ ಕಂಪನಿಗಳು ಭಾರತದಲ್ಲಿ ಯಾವುದೇ ರೀತಿಯ ವ್ಯಾಪಾರ, ವಹಿವಾಟು ನಡೆಸಲು ಅವಕಾಶ ನೀಡಬಾರದೆಂದು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ.

ಆದರೆ, ಮನವಿಗೆ ಈವರೆಗೆ ಸ್ಪಂದನೆ ಸಿಕ್ಕಿಲ್ಲ. ಹಾಗಾಗಿ, ಸೆ. 28ರಂದು ಒಂದು ದಿನದ ರಾಷ್ಟ್ರವ್ಯಾಪಿ ಮುಷ್ಕರ ನಡೆಸಲು ತೀರ್ಮಾನಿಸಲಾಗಿದ್ದು, ಅಂದು ದೇಶಾದ್ಯಂತ ಇರುವ ಮೆಡಿಕಲ್‌ ಸ್ಟೋರ್‌ಗಳು ಮುಚ್ಚಲ್ಪಡಲಿವೆ'' ಎಂದಿದ್ದಾರೆ.

ಇಂದು ಹೆಚ್ಚು ಓದಿದ್ದು

ಚುನಾವಣೆ ಹಿನ್ನೆಲೆಯಲ್ಲಿ ಜೈಪುರದಲ್ಲಿ ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್‌ಗಾಗಿ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿರುವ ಕಾರ್ಯಕರ್ತರು.

Nov 15, 2018 07:29am

Trending videos

Back to Top