CONNECT WITH US  

"ನಳ ಮಹಾರಾಜ'ನಾಗಿ ಅರವಿಂದ್: ಬೊಂಬಾಟ್ ಟೀಸರ್ ವೀಕ್ಷಿಸಿ

ಕಿರಿಕ್ ಪಾರ್ಟಿ ಚಿತ್ರದಲ್ಲಿ ನಟಿಸಿದ್ದ ಅರವಿಂದ್ ಅಯ್ಯರ್ ನಳ ಮಹಾರಾಜನಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿರುವುದು ಈಗಾಗಲೇ ಗೊತ್ತಿರುವ ವಿಷಯ. ಹೌದು! ಕೆಲವು ತಿಂಗಳ ಹಿಂದೆ ಸೆಟ್ಟೇರಿದ್ದ "ಭೀಮಸೇನ ನಳಮಹಾರಾಜ' ಚಿತ್ರದ ಟೀಸರ್ ಈಗ ರಿಲೀಸ್ ಆಗಿದೆ. ಅಲ್ಲದೇ "ಭೀಮಸೇನ ನಳಮಹಾರಾಜ' ಕನ್ನಡದಲ್ಲಿ ಬರುತ್ತಿರುವ ವಿಭಿನ್ನ ಶೈಲಿಯ ಸಿನಿಮಾ. ನಳಮಹಾರಾಜನ ಅಡಿಗೆ ರುಚಿಯಾಗಿದೆ ಎಂಬುದನ್ನು ಟೀಸರ್ ಹೇಳುತ್ತಿದೆ. ಅವರ ಲುಕ್ ಬಗ್ಗೆ ಸಿನಿಪ್ರಿಯರಿಗೆ ತುಂಬಾ ಕುತೂಹಲ ಹುಟ್ಟಿಸಿದೆ. ಈ ಚಿತ್ರದ ಜೊತೆಗೆ ಶಿವಣ್ಣ ನಿರ್ಮಾಣದ ವೆಬ್ ಸೀರಿಸ್ ನಲ್ಲಿಯೂ ಅವರು ನಟಿಸುತ್ತಿದ್ದಾರೆ. ಇನ್ನು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರ ಹುಟ್ಟು ಹಬ್ಬದ ಅಂಗವಾಗಿ ಟೀಸರ್ ರಿಲೀಸ್ ಆಗಿದೆ. ಕಾರ್ತಿಕ್ ಸರಗೂರು ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರಲಿದ್ದು, ರಕ್ಷಿತ್ ಶೆಟ್ಟಿ, ಪುಷ್ಕರ್ ಮಲ್ಲಿಕಾರ್ಜುನ್, ಹೇಮಂತ್ ರಾವ್ ಸೇರಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಅರೋಹಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಚಿತ್ರದ ಬೊಂಬಾಟ್ ಟೀಸರ್ ವೀಕ್ಷಿಸಿ.

Back to Top