CONNECT WITH US  

ಡಾಲಿ ಧನಂಜಯ್‍ರ ಹೊಸ ಭಗವದ್ಗೀತೆ: Watch

ಡಾಲಿ ಧನಂಜಯ್ ಹಾಗೂ ಐರಾ ಮೋರಾ ಅಭಿನಯದ "ಭೈರವ ಗೀತ' ಚಿತ್ರದ "ನೀ ನನ್ನ ಭಗವದ್ಗೀತೆ' ಪೂರ್ತಿ ಹಾಡು ಬಿಡುಗಡೆಯಾಗಿದೆ. ಅಲ್ಲದೇ ನಿನ್ನೆಯಷ್ಟೇ ಹಾಡಿನ ಟೀಸರ್ ಬಿಡುಗಡೆಯಾಗಿತ್ತು. ಅಂದಹಾಗೆ ಈ ಹಾಡನ್ನು ಸಾಹಿತಿ ಕೆ. ಕಲ್ಯಾಣ್ ರಚಿಸಿದ್ದು, ವಿಜಯ್ ಯೇಸುದಾಸ್ ಹಾಗೂ ಚಿನ್ಮಯ್ ಈ ಹಾಡಿಗೆ ಧ್ವನಿ ನೀಡಿದ್ದಾರೆ. ಗೌರಿ-ಗಣೇಶ ಹಬ್ಬದ ಅಂಗವಾಗಿ ಟೀಸರನ್ನು ಬಿಡುಗಡೆ ಮಾಡಲಾಗಿದೆ ಎಂದು ಚಿತ್ರತಂಡ ಹೇಳಿದೆ.

ಹಾಡಿನಲ್ಲಿ ಧನಂಜಯ್ ಹಾಗೂ ಐರಾ ಮೋರಾ ಚುಂಬನದ ಹಿಸಿ-ಬಿಸಿ ದೃಶ್ಯ ಹಾಗೂ ಹೊಡೆದಾಟದ ದೃಶ್ಯಗಳು ಹೆಚ್ಚಾಗಿವೆ. "ಭೈರವ ಗೀತ' ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಒಟ್ಟಿಗೆ ತಯಾರಾಗುತ್ತಿವೆ. ಭಾಸ್ಕರ್ ರಾಶಿ ಹಾಗೂ ರಾಮ್​​ಗೋಪಾಲ್ ವರ್ಮಾ ಈ ಸಿನಿಮಾಗೆ ಬಂಡವಾಳ ಹೂಡಿದ್ದು, ರಾಮ್​​​ಗೋಪಾಲ್ ವರ್ಮಾ ಶಿಷ್ಯ ಸಿದ್ದಾರ್ಥ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ನಿಜಜೀವನದಲ್ಲಿ ನಡೆದ ಪ್ರೇಮಕಥೆಯೊಂದನ್ನು ಆಧರಿಸಿ ಈ ಸಿನಿಮಾ ನಿರ್ಮಿಸಲಾಗಿದೆ.

ಇನ್ನು ಈ ಚಿತ್ರ ರಾಶಿ ಕಂಬೈನ್ಸ್‌ ಹಾಗೂ ಕಂಪೆನಿ ಪ್ರೊಡಕ್ಷನ್ಸ್‌ನಡಿ ನಿರ್ಮಾಣವಾಗಿದೆ. ಹೆಸರಿಗೆ ತಕ್ಕಂತೆ ಇದೊಂದು ಔಟ್‌ ಅಂಡ್‌ ಔಟ್‌ ಲವ್‌ಸ್ಟೋರಿಯಾಗಿದ್ದು, ಪ್ರೀತಿಗಾಗಿ ಕ್ರೈಮ್‌ನತ್ತ ವಾಲುವ ಪ್ರೇಮಿಯೊಬ್ಬನ ಕಥೆಯನ್ನು ಹೊಂದಿದೆ. ಈ ನಡುವೆಯೇ ಸೂರಿ ನಿರ್ದೇಶನದ "ಪಾಪ್‌ಕಾರ್ನ್ ಮಂಕಿ ಟೈಗರ್‌' ಚಿತ್ರದಲ್ಲೂ ಧನಂಜಯ್‌ ನಾಯಕರಾಗಿ ನಟಿಸುತ್ತಿದ್ದಾರೆ. "ಭೈರವ ಗೀತಾ' ಅಕ್ಟೋಬರ್ 12 ರಂದು ಬಿಡುಗಡೆಯಾಗುತ್ತಿದ್ದು ಹೇಗೆ ಮೂಡಿ ಬಂದಿದೆ ಎನ್ನುವುದಕ್ಕೆ ಉತ್ತರ ಸಿಗಲಿದೆ.


Trending videos

Back to Top