Olympics; ಇಂದು ಜಾವೆಲಿನ್ ಥ್ರೋ ಸ್ಪರ್ಧೆ:ಚಿನ್ನದ ಹುಡುಗ ನೀರಜ್ ಮೇಲೆ ನಿರೀಕ್ಷೆ
ಅರ್ಹತಾ ಸುತ್ತಿನಲ್ಲಿ ಭಾಗಿಯಾಗುತ್ತಿರುವ ನೀರಜ್, ಕಿಶೋರ್ ಜೇನಾ
Team Udayavani, Aug 6, 2024, 6:30 AM IST
ಪ್ಯಾರಿಸ್: ಭಾರತದ ಅಥ್ಲೆಟಿಕ್ಸ್ ಇತಿಹಾಸದಲ್ಲಿ ವೈಯಕ್ತಿಕ ಚಿನ್ನದ ಪದಕ ಮೊದಲ ಒಲಿಂಪಿಕ್ಸ್ ಸಾಧಕನಾಗಿ ಮೂಡಿಬಂದ ನೀರಜ್ ಚೋಪ್ರಾ ಕೋಟ್ಯಂತರ ದೇಶವಾಸಿಗಳ ನಿರೀಕ್ಷೆಯನ್ನು ಹೊತ್ತು ಮಂಗಳವಾರ ಪ್ಯಾರಿಸ್ ಅಂಗಳದಲ್ಲಿ ಪ್ರತ್ಯಕ್ಷರಾಗಲಿದ್ದಾರೆ. ಜಾವೆಲಿನ್ ಎಸೆತದ ಅರ್ಹತಾ ಸ್ಪರ್ಧೆಗಳು ಮಂಗಳವಾರ ನಡೆಯಲಿದ್ದು, ಆ. 8ರ ಗುರುವಾರ ಫೈನಲ್ ಏರ್ಪಡಲಿದೆ.
26 ವರ್ಷದ ನೀರಜ್ ಚೋಪ್ರಾ ಪ್ಯಾರಿಸ್‌ನಲ್ಲೂ ಚಾಂಪಿಯನ್ ಆಗಿ ಮೂಡಿಬಂದರೆ ಒಲಿಂಪಿಕ್ಸ್ ಚರಿತ್ರೆಯಲ್ಲಿ ಜಾವೆಲಿನ್ ಸ್ವರ್ಣ ಉಳಿಸಿಕೊಂಡ ವಿಶ್ವದ ಕೇವಲ 5ನೇ ಅಥ್ಲೀಟ್ ಎನಿಸಲಿದ್ದಾರೆ. ಉಳಿದ ಸಾಧಕರೆಂದರೆ ಸ್ವೀಡನ್‌ನ ಎರಿಕ್ ಲೆಮ್ಮಿಂಗ್ (1908, 1912), ಫಿನ್ಲಂಡ್‌ನ ಜಾನಿ ಮೈರ (1920, 1924), ಜೆಕ್ ಗಣರಾಜ್ಯದ ಜಾನ್ ಝಿಲೆಜ್ನಿ (1992, 1996 ಮತ್ತು 2000) ಮತ್ತು ನಾರ್ವೆಯ ಆ್ಯಂಡ್ರೀಸ್ ತೊರ್ಕಿಲ್ಡ್‌ಸೆನ್ (2004, 2008). ಇವರಲ್ಲಿ ಝಿಲೆಜ್ನಿ ಅವರದು ಹ್ಯಾಟ್ರಿಕ್ ಸಾಧನೆಯಾಗಿದೆ.
ಈ ವರ್ಷ ಮೂರೇ ಸ್ಪರ್ಧೆ
ಪ್ಯಾರಿಸ್ ಒಲಿಂಪಿಕ್ಸ್‌ಗಾಗಿ ಭಾರೀ ಸಿದ್ಧತೆ ನಡೆಸಿರುವ ನೀರಜ್ ಚೋಪ್ರಾ ಈ ವರ್ಷ ವಿಶ್ವ ಮಟ್ಟದ ಮೂರೇ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಆದರೆ ಇಲ್ಲಿ ನಿರೀಕ್ಷಿತ ಮಟ್ಟ ತಲುಪಿಲ್ಲ. ದೋಹಾ ಡೈಮಂಡ್ ಲೀಗ್‌ನಲ್ಲಿ ಇವರಿಗೆ ಲಭಿಸಿದ್ದು ದ್ವಿತೀಯ ಸ್ಥಾನ (88.36 ಮೀ.). ಇದೇ ಈ ಸೀಸನ್‌ನಲ್ಲಿ ನೀರಜ್ ದಾಖಲಿಸಿದ ಆತ್ಯುತ್ತಮ ಸಾಧನೆ.
ಅನಂತರ ಮೇ 28ರಂದು ನಡೆದ ಓಸ್ಟ್ರಾವಾ ಗೋಲ್ಡನ್ ಸ್ಪೈಕ್ ಕೂಟದಿಂದ ಹಿಂದೆ ಸರಿದರು. ತೊಡೆಯ ಸ್ನಾಯು ಸಂಬಂಧಿ ನೋವು ಇದಕ್ಕೆ ಕಾರಣವಾಗಿತ್ತು. ಬಳಿಕ ಪಾವೊ ನುರ್ಮಿ ಗೇಮ್ಸ್‌ನಲ್ಲಿ ಪುನರಾಗಮನ ಸಾರಿದರು. ಇಲ್ಲಿ 85.97 ಮೀ. ಸಾಧನೆಗೈದರು.
ಟೋಕಿಯೊದಲ್ಲಿ 87.58 ಮೀ. ಸಾಧನೆಯೊಂದಿಗೆ ಚಿನ್ನ ಗೆದ್ದ ಬಳಿಕ ನೀರಜ್ ಚೋಪ್ರಾ ಅವರ ಒಟ್ಟು ಪ್ರದರ್ಶನವೇನೋ ಸ್ಥಿರವಾಗಿದೆ. 15 ಸ್ಪರ್ಧೆಗಳಲ್ಲಿ 85 ಮೀಟರ್‌ಗೂ ಕಡಿಮೆ ದೂರ ದಾಖಲಿಸಿದ್ದು 2 ಸಲ ಮಾತ್ರ. ಪ್ಯಾರಿಸ್‌ನಲ್ಲಿ ಅವರು ಸಂಪೂರ್ಣ ಫಿಟ್ ಆಗಿರುವುದರಿಂದ ಭಾರತೀಯರ ನಿರೀಕ್ಷೆ ಗರಿಗೆದರಿದೆ.
ನೀರಜ್ ಎದುರಾಳಿಗಳು
ಟೋಕಿಯೊದಲ್ಲಿ ಬೆಳ್ಳಿ ಪದಕ ಗೆದ್ದ ಜೆಕ್ ತ್ರೋವರ್ ಜಾಕುಬ್ ವಾದ್ಲೆಶ್, ಜರ್ಮನಿಯ ಜೂಲಿಯನ್ ವೆಬರ್, ಮಾಜಿ ವಿಶ್ವ ಚಾಂಪಿಯನ್ ಆ್ಯಂಡರ್ಸನ್ ಪೀಟರ್ ಅವರ ಪ್ರಬಲ ಪೈಪೋಟಿ ನೀರಜ್‌ಗೆ ಎದುರಾಗಲಿದೆ. ಇವರಲ್ಲಿ ವಾದ್ಲೆಶ್, ದೋಹಾ ಡೈಮಂಡ್ ಲೀಗ್’ನಲ್ಲಿ ಭಾರತೀಯನನ್ನು ಹಿಂದಿಕ್ಕಿದ್ದರು.
ಭಾರತದ ಮತ್ತೋರ್ವ ಜಾವೆಲಿನ್ ಎಸೆತಗಾರ ಕಿಶೋರ್ ಜೇನಾ ಕೂಡ ಸ್ಪರ್ಧೆಯಲ್ಲಿದ್ದಾರೆ. ಕಳೆದ ವರ್ಷದ ಏಷ್ಯಾಡ್‌ನಲ್ಲಿ 87.54 ಮೀ. ಸಾಧನೆಯಿಂದಾಗಿ ಅವರು ನೇರವಾಗಿ ಪ್ಯಾರಿಸ್ ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದರು. ಅನಂತರ 80 ಮೀ. ಗಡಿ ದಾಟಲು ಇವರಿಂದಾಗಲಿಲ್ಲ ಎಂಬುದೊಂದು ಹಿನ್ನಡೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vinesh Phogat ತೀರ್ಪು ನಮ್ಮ ಪರ ಬರುವ ನಿರೀಕ್ಷೆ;ಅದು ವೈಯಕ್ತಿಕ ಪದಕವಲ್ಲ: ಸಂಜಯ್ ಸಿಂಗ್
Paris Olympics: ಅಮೆರಿಕಕ್ಕೆ ಬಂತು ಒಲಿಂಪಿಕ್ಸ್ ಧ್ವಜ
Paris: 2036ರ ಒಲಿಂಪಿಕ್ಸ್ ಭಾರತ ನಡೆಸಬಲ್ಲದು: ಫ್ರಾನ್ಸ್ ಅಧ್ಯಕ್ಷ
Paris Olympics 2024ಕ್ಕೆ ವರ್ಣರಂಜಿತ ವಿದಾಯ
IOA; ವಿನೀಶ್ ಫೋಗಾಟ್ ವಿಚಾರದಲ್ಲಿ ತಣ್ಣಗೆ ನುಣುಚಿಕೊಂಡಿತಾ ಐಒಎ?; ಪಿಟಿ ಉಷಾ ಹೇಳಿದ್ದೇನು?
MUST WATCH
ಹೊಸ ಸೇರ್ಪಡೆ
Haryana Assembly Election: ಆಪ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ
Kangana Ranaut: 32 ಕೋಟಿ ರೂ.ಗೆ ಬಂಗಲೆ ಮಾರಿದ ಸಂಸದೆ ಕಂಗನಾ
Manipur: ಮತ್ತೆ ಉದ್ವಿಗ್ನ, ಇಂಟರ್ನೆಟ್ ಸ್ಥಗಿತ, ಕರ್ಫ್ಯೂ ಜಾರಿಗೊಳಿಸಿದ ಸರಕಾರ
Bidar: ಲಂಚ ಸ್ವೀಕರಿಸುತ್ತಿದ್ದ ವೇಳೆ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ
Bigg Boss Kannada-11: ಬಿಗ್ ಬಾಸ್.. ಪ್ರೋಮೊ ರಿಲೀಸ್: ಆ್ಯಂಕರ್ ಯಾರೆಂಬುದೇ ಕುತೂಹಲ !
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.