Olympics; ಕಂಚು ಗೆಲ್ಲುವ ಅವಕಾಶ ಕಳೆದುಕೊಂಡ ಧೀರಜ್-ಅಂಕಿತಾ ಜೋಡಿ


Team Udayavani, Aug 2, 2024, 8:49 PM IST

1-kanchu

ಪ್ಯಾರಿಸ್‌: ಕಾಮನ್ವೆಲ್ತ್‌, ವಿಶ್ವಕಪ್‌ಗ್ಳಲ್ಲಿ ಸಾಕಷ್ಟು ಪದಕ ಗೆದ್ದಿರುವ ಭಾರತದ ಬಿಲ್ಗಾರರು ಒಲಿಂಪಿಕ್ಸ್‌ನಲ್ಲಿ ಮೊದಲ ಪದಕ ಗೆಲ್ಲುವ ಅವಕಾಶವನ್ನು ಸ್ವಲ್ಪದರಲ್ಲೇ ತಪ್ಪಿಸಿ ಕೊಂಡರು. ಆದರೂ ಮೊದಲ ಬಾರಿ ಸೆಮಿಫೈನಲ್‌ಗೇರಿ ಇತಿಹಾಸ ನಿರ್ಮಿಸಿದರು.

ಶುಕ್ರವಾರ ನಡೆದ ಕಂಚಿನ ಪದಕದ ಪಂದ್ಯದಲ್ಲಿ ಭಾರತದ ಮಿಶ್ರ ತಂಡ ಅಮೆರಿಕ ವಿರುದ್ಧ ಸೋತು ಪದಕವನ್ನು ತಪ್ಪಿಸಿಕೊಂಡಿತು. ಶುಕ್ರವಾರ ಸತತ 2 ಪಂದ್ಯಗಳನ್ನು ಗೆದ್ದ ಭಾರತ ತಂಡ, ಬಳಿಕ ಸತತ 2 ಪಂದ್ಯ ಸೋಲುವ ಮೂಲಕ ಪದಕ ವಂಚಿತವಾಯಿತು.

ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಧೀರಜ್‌ ಬೊಮ್ಮದೇವರ ಹಾಗೂ ಅಂಕಿತಾ ಭಕತ್‌ ಅವರಿದ್ದ ತಂಡ ಅಮೆರಿಕದ ಕ್ಯಾಸಿ ಕಫೋಲ್ಡ್‌ ಮತ್ತು ಬ್ರಾಡಿ ಎಲಿಸನ್‌ ವಿರುದ್ಧ 6-2 ಅಂಕಗಳ ಅಂತರದಿಂದ ಸೋಲನ್ನಪ್ಪಿತು. ಗುರಿ ತಲುಪಲು ಪರದಾಡಿದ ಅಂಕಿತಾ 2 ಬಾರಿ 7 ಅಂಕಗಳನ್ನು ಗಳಿಸಿ ಹಿನ್ನಡೆಗೆ ಕಾರಣವಾದರು.

ಇದಕ್ಕೂ ಮೊದಲು ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಕೊರಿಯಾದ ಲಿಮ್‌ ಶಿಯಾನ್‌ ಮತ್ತು ಕಿಮ್‌ ವೋ ಜಿನ್‌ ವಿರುದ್ಧ 6-2 ಅಂತರದಿಂದ ಸೋತರು. ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಸ್ಪೇನ್‌ನ ಎಲಿಯಾ ಕ್ಯಾನಲ್ಸ್‌ ಮತ್ತು ಪಾಬ್ಲೋ ಆಚಾ ವಿರುದ್ಧ 5-3 ಅಂತರದಲ್ಲಿ ಹಾಗೂ ಅರ್ಹತಾ ಸುತ್ತಿನಲ್ಲಿ ಇಂಡೋನೇಷ್ಯಾ ವಿರುದ್ಧ 5-1ರ ಅಂತರದಲ್ಲಿ ಭಾರತ ತಂಡ ಜಯ ಗಳಿಸಿತ್ತು.
ಬಿಲ್ಗಾರಿಕೆಯಲ್ಲಿ ಭಾರತದ ಈವರೆಗಿನ ಗರಿಷ್ಠ ಸಾಧನೆ ಕ್ವಾರ್ಟರ್‌ ಫೈನಲ್‌ ಆಗಿತ್ತು. 5 ಒಲಿಂಪಿಕ್ಸ್‌ನಲ್ಲಿ ಭಾರತ ಕ್ವಾರ್ಟರ್‌ ಫೈನಲ್‌ನಲ್ಲಿ ತನ್ನ ಅಭಿಯಾನವನ್ನು ಅಂತ್ಯಗೊಳಿಸಿತ್ತು.

23ನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದ ಬಲ್ರಾಜ್‌
ಪ್ಯಾರಿಸ್‌ ಒಲಿಂಪಿಕ್ಸ್‌ ಅರ್ಹತೆ ಸಂಪಾದಿಸಿದ್ದ ಭಾರತದ ಏಕೈಕ ರೋವರ್‌ ಬಲ್ರಾಜ್‌ ಪನ್ವರ್‌ ಅಂತಿಮವಾಗಿ 23ನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು.

ಶುಕ್ರವಾರ ನಡೆದ “ಡಿ’ ಸುತ್ತಿನ ಫೈನಲ್‌ನಲ್ಲಿ ಬಲ್ರಾಜ್‌ 5ನೇ ಸ್ಥಾನಿಯಾದರು. ಅವರು 7:02.37 ಸೆಕೆಂಡ್‌ಗಳಲ್ಲಿ ದೂರವನ್ನು ಕ್ರಮಿಸಿದರು. ಇದು ಪ್ಯಾರಿಸ್‌ ಒಲಿಂಪಿಕ್ಸ್‌ ನಲ್ಲೇ ಬಲ್ರಾಜ್‌ ಅವರ ಅತ್ಯುತ್ತಮ ಸಾಧನೆಯಾಗಿತ್ತು. ಆದರೆ ಇದು ಪದಕ ಸುತ್ತು ಆಗಿರಲಿಲ್ಲ. ಗುರುವಾರವಷ್ಟೇ ಅವರು ಕ್ವಾರ್ಟರ್‌ ಫೈನಲ್ಸ್‌ ಹೀಟ್‌ ರೇಸ್‌ನಲ್ಲಿ 5ನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದ್ದರು. ರವಿವಾರದ ರೆಪಿಶೇಜ್‌ ಸುತ್ತಿನಲ್ಲಿ ದ್ವಿತೀಯ ಸ್ಥಾನಿ ಆಗುವುದರೊಂದಿಗೆ ಕ್ವಾರ್ಟರ್‌ ಫೈನಲ್ಸ್‌ಗೆ ಬಂದಿದ್ದರು.ಫೈನಲ್‌ “ಎ’ ಸುತ್ತಿನಲ್ಲಿ ಮೊದಲ 3 ಸ್ಥಾನ ಪಡೆದವರಿಗೆ ಪದಕ ಒಲಿಯಲಿದೆ.

ಜೂಡೋ: ಮಾನ್‌ ಸವಾಲು ಮೊದಲ ಸುತ್ತಿನಲ್ಲೇ ಅಂತ್ಯ
ತೂಲಿಕಾ ಮಾನ್‌ ಅವರ ಪ್ಯಾರಿಸ್‌ ಒಲಿಂಪಿಕ್ಸ್‌ ಜೂಡೋ ಸವಾಲು ಮೊದಲ ಸುತ್ತಿನಲ್ಲೇ ಅಂತ್ಯಗೊಂಡಿದೆ. +78 ಕೆಜಿ ವಿಭಾಗದಲ್ಲಿ ಸ್ಪರ್ಧೆಗೆ ಇಳಿದಿದ್ದ ಮಾನ್‌, ಲಂಡನ್‌ ಗೇಮ್ಸ್‌ ಚಾಂಪಿಯನ್‌ ಆಗಿರುವ ಕ್ಯೂಬಾದ ಇದಾಲಿಸ್‌ ಒರ್ಟಿಝ್ ವಿರುದ್ಧ 0-10 ಅಂತರದಿಂದ ಸೋತುಹೋದರು.

2022ರ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ, ದಿಲ್ಲಿಯ ಜೂಡೋಪಟು ತೂಲಿಕಾ ಮಾನ್‌ ಕ್ಯೂಬಾ ಎದುರಾಳಿ ವಿರುದ್ಧ ಯಾವುದೇ ಚಮತ್ಕಾರ ತೋರದಾದರು. ಕೇವಲ 28 ಸೆಕೆಂಡ್‌ಗಳಲ್ಲಿ ಇದಾಲಿಸ್‌ ಒರ್ಟಿಝ್ ಭಾರತೀಯಳನ್ನು ಕೆಡವಿದರು. ಇದಾಲಿಸ್‌ ಈಗಾಗಲೇ ಒಲಿಂಪಿಕ್ಸ್‌ನಲ್ಲಿ 4 ಪದಕ ಗೆದ್ದಿದ್ದಾರೆ.

26ನೇ ಸ್ಥಾನ ಪಡೆದ ಅಂಜೀತ್‌
ಒಲಿಂಪಿಕ್ಸ್‌ ಶೂಟಿಂಗ್‌ನ ಪುರುಷರ ಸ್ಕೀಟ್‌ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಅಂಜೀತ್‌ ಸಿಂಗ್‌ ನರುಕ, ಮೊದಲ ಅರ್ಹತಾ ಸುತ್ತಿನಲ್ಲಿ 26ನೇ ಸ್ಥಾನ ಪಡೆದಿದ್ದಾರೆ. ಈ ವಿಭಾಗದಲ್ಲಿ ಅಮೆರಿಕದ ವಿನ್ಸೆಂಟ್‌ ಹಾಂಕಾಕ್‌, ಕಾನರ್‌ ಲಿನ್‌ ಪ್ರಿನ್ಸ್‌ ಮತ್ತು ಚೈನೀಸ್‌ ತೈಪೆಯ ಲೀ ಮೆಂಗ್‌ ಯುವಾನ್‌ ಕ್ರಮವಾಗಿ ಅಗ್ರ 3 ಸ್ಥಾನಗಳನ್ನು ಪಡೆದರು. ಶನಿವಾರ ನಡೆಯುವ 2ನೇ ದಿನದ ಅರ್ಹತಾ ಸ್ಪರ್ಧೆಯಲ್ಲಿ ಅಂಜೀತ್‌ ಸ್ಪರ್ಧಿಸಲಿದ್ದಾರೆ.

ಟಾಪ್ ನ್ಯೂಸ್

Pushkar sing dhami

Uttarakhand: ಪ್ರತಿಭಟನಕಾರರಿಂದ ಹಾನಿ ನಷ್ಟ ಭರಿಸುವ ಕಾನೂನು ಜಾರಿ

ದಸರೆಗೆ ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ: ಹರಿದ್ವಾರಕ್ಕೆ ಚಲುವರಾಯಸ್ವಾಮಿ ನಿಯೋಗ ಭೇಟಿ

Dasara: ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ; ಹರಿದ್ವಾರಕ್ಕೆ ಚಲುವರಾಯಸ್ವಾಮಿ ನಿಯೋಗ ಭೇಟಿ

BJP ಶಾಸಕ ಮುನಿರತ್ನಗೆ ಎಸ್‌ಐಟಿ ಕುಣಿಕೆ? ರಾಜ್ಯಪಾಲರಿಗೂ ಶೀಘ್ರ ದೂರು

BJP ಶಾಸಕ ಮುನಿರತ್ನಗೆ ಎಸ್‌ಐಟಿ ಕುಣಿಕೆ? ರಾಜ್ಯಪಾಲರಿಗೂ ಶೀಘ್ರ ದೂರು

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

1-lorry

West Bengal;ಝಾರ್ಖಂಡ್‌ನಿಂದ ಬರುವ ವಾಹನಕ್ಕೆ ನಿಷೇಧ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sanjay Sing WFI

Vinesh Phogat ತೀರ್ಪು ನಮ್ಮ ಪರ ಬರುವ ನಿರೀಕ್ಷೆ;ಅದು ವೈಯಕ್ತಿಕ ಪದಕವಲ್ಲ: ಸಂಜಯ್ ಸಿಂಗ್

America

Paris Olympics: ಅಮೆರಿಕಕ್ಕೆ ಬಂತು ಒಲಿಂಪಿಕ್ಸ್‌  ಧ್ವಜ

emanual

Paris: 2036ರ ಒಲಿಂಪಿಕ್ಸ್‌ ಭಾರತ ನಡೆಸ‌ಬಲ್ಲದು: ಫ್ರಾನ್ಸ್‌ ಅಧ್ಯಕ್ಷ

Paris-ind

Paris Olympics 2024ಕ್ಕೆ ವರ್ಣರಂಜಿತ ವಿದಾಯ

IOA shrugs off Vinish Phogat issue; What did PT Usha say?

IOA; ವಿನೀಶ್‌ ಫೋಗಾಟ್‌ ವಿಚಾರದಲ್ಲಿ ತಣ್ಣಗೆ ನುಣುಚಿಕೊಂಡಿತಾ ಐಒಎ?; ಪಿಟಿ ಉಷಾ ಹೇಳಿದ್ದೇನು?

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Pushkar sing dhami

Uttarakhand: ಪ್ರತಿಭಟನಕಾರರಿಂದ ಹಾನಿ ನಷ್ಟ ಭರಿಸುವ ಕಾನೂನು ಜಾರಿ

ದಸರೆಗೆ ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ: ಹರಿದ್ವಾರಕ್ಕೆ ಚಲುವರಾಯಸ್ವಾಮಿ ನಿಯೋಗ ಭೇಟಿ

Dasara: ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ; ಹರಿದ್ವಾರಕ್ಕೆ ಚಲುವರಾಯಸ್ವಾಮಿ ನಿಯೋಗ ಭೇಟಿ

BJP ಶಾಸಕ ಮುನಿರತ್ನಗೆ ಎಸ್‌ಐಟಿ ಕುಣಿಕೆ? ರಾಜ್ಯಪಾಲರಿಗೂ ಶೀಘ್ರ ದೂರು

BJP ಶಾಸಕ ಮುನಿರತ್ನಗೆ ಎಸ್‌ಐಟಿ ಕುಣಿಕೆ? ರಾಜ್ಯಪಾಲರಿಗೂ ಶೀಘ್ರ ದೂರು

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

1-lorry

West Bengal;ಝಾರ್ಖಂಡ್‌ನಿಂದ ಬರುವ ವಾಹನಕ್ಕೆ ನಿಷೇಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.