73ರ ಅಂಬಾಸಿಡರ್‌ ಮತ್ತು ಕೃಷ್ಣಾಪುರ ಶ್ರೀಗಳು

Team Udayavani, Jan 14, 2022, 6:55 AM IST

Untitled-1

ಉಡುಪಿ: ಕೃಷ್ಣಾಪುರ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರ ಚತುರ್ಥ ಪರ್ಯಾಯಕ್ಕೆ ದಿನಗಣನೆ ಆರಂಭವಾಗಿದೆ. ಕೃಷ್ಣಾಪುರ ಮಠದಲ್ಲಿ ಪರ್ಯಾಯೋತ್ಸವ ಸಡಗರ ಮೇಳೈಸಿದೆ. ವಿಶೇಷವಾಗಿ ಕೃಷ್ಣಾಪುರ ಮಠ ಹಲವು ಸೋಜಿಗಗಳಿಂದ ಕೂಡಿದೆ.  ಮಠದ ಹಿಂದಿರುವ ಶೆಡ್‌ನ‌ಲ್ಲಿ 1973ರ  ಮಾಡೆಲ್‌ನ ಅಂಬಾಸಿಡರ್‌ ಕಾರು ಎಲ್ಲರ ಗಮನ ಸೆಳೆಯುತ್ತಿದೆ. ಶ್ರೀಗಳು ಇಂದಿಗೂ ತಮ್ಮ ಸಂಚಾರ- ಪ್ರವಾಸಕ್ಕೆ ಅದೇ ಕಾರು ಬಳಸುತ್ತಿದ್ದಾರೆ.

ಕಡುನೀಲಿ ಬಣ್ಣದ ಈ ಕಾರು ಆಧುನಿಕ ಭರಾಟೆಯಲ್ಲಿ ಸರಳತೆ ನೆಲೆಯಲ್ಲಿ ಸವಾಲೊಡ್ಡಿ ನಿಂತಂತಿದೆ. ಶ್ರೀ ಮಠದ ವಿಶೇಷ ಆಕರ್ಷಣೆಗಳಲ್ಲಿ ಈ ಕಾರು ಕೂಡ ಒಂದಾಗಿದೆ. ಶ್ರೀ ಹೊರಗಡೆ ಸಭೆ, ಸಮಾರಂಭಗಳಿಗೆ ತೆರಳಿದಾಗ ಸಾರ್ವಜನಿಕರು ಕಾರನ್ನು ವಿಶೇಷ ಕುತೂಹಲದಿಂದ ವೀಕ್ಷಿಸುತ್ತಾರೆ.

ಶ್ರೀಕೃಷ್ಣಾಪುರ ಶ್ರೀಗಳು ಸರಳತೆ ಮತ್ತು ಸಂಪ್ರದಾಯಕ್ಕೆ ಹೆಚ್ಚು ಒತ್ತು ಕೊಡುವರು. ಆಧ್ಯಾತ್ಮದ ಕೇಂದ್ರ ಬಿಂದುವಿನಲ್ಲಿ ಆಧುನಿಕತೆಗೆ ಒಗ್ಗಿಕೊಳ್ಳದೆ ದ್ಯೋತಕವೆಂಬಂತೆ ಈ ಕಾರನ್ನು ಕಾಣಬಹುದು. ಅಷ್ಟೇ ಅಲ್ಲದೆ ಮಠದ ವಿಷಯಕ್ಕೆ ಸಂಬಂಧಿಸಿ ಆಧುನಿಕ ತಂತ್ರಜ್ಞಾನ ಬಳಕೆಯಲ್ಲಿ ತೀರ ಕನಿಷ್ಠ ಸೌಲಭ್ಯಕ್ಕೆ ಆದ್ಯತೆ ನೀಡುತ್ತಾರೆ. ದೂರವಾಣಿ ಕ್ರಾಂತಿ ಸಂದರ್ಭದಲ್ಲಿ ಎಲ್ಲೆಡೆಯೂ ಲ್ಯಾಂಡ್‌ಲೈನ್‌ ಸಂಪರ್ಕವಿದ್ದ ಕಾಲಘಟ್ಟದಲ್ಲಿಯೂ ಕೃಷ್ಣಾಪುರ ಮಠ ಟೆಲಿಫೋನ್‌ ಸಂಪರ್ಕವನ್ನು ಹೊಂದಿರಲಿಲ್ಲ. ಶ್ರೀಪಾದರು ಪತ್ರ ವ್ಯವಹಾರ, ಮುಖತಃ ಭೇಟಿಗೆ ಹೆಚ್ಚಿನ ಒತ್ತು ನೀಡುತ್ತಿದ್ದರು. ಇವತ್ತಿಗೂ ಪತ್ರ ಮತ್ತು ದಾಖಲೆಗಳ ಸಂರಕ್ಷಣೆಗೆ ಶ್ರೀಗಳು ಹೆಚ್ಚಿನ ಅಸ್ಥೆಯನ್ನು ಶ್ರೀಗಳು ವಹಿಸುತ್ತಾರೆ. ಕಾರಿ ನಿಂದಾಗಿ ಅಂತಸ್ತು ಹೆಚ್ಚಾ ಗ ಬೇ ಕೆಂದೇ ನಿಲ್ಲ ಎಂಬು ವುದು ಅವರ ಅಂಬೋಣ.

ಅರ್ಧ ಶತಮಾನ ಚಾಲಕರಾಗಿದ್ದ ಬಾರಿತ್ತಾಯರು :  

ಕೃಷ್ಣಾಪುರ ಶ್ರೀಪಾದರ ಕಾರಿಗೆ ಕರಂಬಳ್ಳಿ ಶ್ರೀನಿವಾಸ ಬಾರಿತ್ತಾಯರು 1955ರಿಂದ 2006ರ ವರೆಗೆ ಸುಮಾರು 51 ವರ್ಷ ಖಾಯಂ ಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ. ಶ್ರೀನಿವಾಸ ಬಾರಿತ್ತಾಯರು ಶಾಸಕ ಕೆ. ರಘುಪತಿ ಭಟ್‌ ಅವರ ತಂದೆ.  2006ರ ಅನಂತರ ಅವರು ನಿವೃತ್ತರಾದರು. ಶ್ರೀಗಳಿಗೆ ಹಳೆ ಕಾರಿನ ಮೇಲೆ ತುಂಬ ಒಲವು, ಎಲ್ಲಿಯೇ ಓಡಾಟವಿದ್ದರೂ ಅದೇ ಕಾರನ್ನು ಬಳಸುತ್ತಾರೆ.

ಪೆಟ್ರೋಲ್‌ನಿಂದ  ಡೀಸೆಲ್‌ ಎಂಜಿನ್‌ಗೆ :

1973ರಲ್ಲಿ ಶ್ರೀಗಳ ಓಡಾಟಕ್ಕೆ ಈ ಅಂಬಾಸಿಡರ್‌ ಕಾರನ್ನು ಖರೀದಿಸಲಾಯಿತು. ಈ ಕಾರು ಎಂಇಜಿ 653 ನೋಂದಣಿ ಸಂಖ್ಯೆಯನ್ನು ಹೊಂದಿದೆ. 49 ವರ್ಷಗಳಿಂದ ಶ್ರೀಗಳು ಇದನ್ನು ಓಡಾಟಕ್ಕೆ ಬಳಸುತ್ತಿದ್ದಾರೆ. ಧಾರ್ಮಿಕ ಕಾರ್ಯಕ್ರಮಗಳು, ಶಾಖಾ ಮಠಗಳಿಗೆ ಭೇಟಿ ಸೇರಿದಂತೆ ಉಡುಪಿ-ದ.ಕ. ಜಿಲ್ಲೆ ಒಳಗೆ ಕಾರಿನಲ್ಲಿ ಪ್ರಯಾಣಿಸುತ್ತಾರೆ. ಕಾಲಕಾಲಕ್ಕೆ ಸರ್ವಿಸ್‌ ಮಾಡಿಸುವ ಮೂಲಕ ಈಗಲು 49 ವರ್ಷದ ಹಳೆ ಕಾರು ಸುಸ್ಥಿತಿಯಲ್ಲಿರುವಂತೆ ನೋಡಿಕೊಂಡಿರುವುದು ವಿಶೇಷ. ಸದ್ಯ ಪೆಟ್ರೋಲ್‌ ಎಂಜಿನ್‌ನಿಂದ ಡೀಸೆಲ್‌  ಎಂಜಿನ್‌ಗೆ ಬದಲಾವಣೆಗೊಂಡಿದೆ.

ಟಾಪ್ ನ್ಯೂಸ್

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು

Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು

Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ

Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ

Kota Srinivas Poojary; ಮೀನುಗಾರರ ಸಮಸ್ಯೆ, ಬೇಡಿಕೆಗಳಿಗೆ ಧ್ವನಿಯಾಗುವೆ

Kota Srinivas Poojary; ಮೀನುಗಾರರ ಸಮಸ್ಯೆ, ಬೇಡಿಕೆಗಳಿಗೆ ಧ್ವನಿಯಾಗುವೆ

Veerappa Moily; ದೇಶಕ್ಕೆ ಕ್ರಿಕೆಟ್‌ ಕಾಮೆಂಟ್ರಿಯನ್‌ ಬೇಕಿಲ್ಲ

Veerappa Moily; ದೇಶಕ್ಕೆ ಕ್ರಿಕೆಟ್‌ ಕಾಮೆಂಟ್ರಿಯನ್‌ ಬೇಕಿಲ್ಲ

Manipal; ಟ್ಯಾಪ್ಮಿ 38ನೇ ಘಟಿಕೋತ್ಸವ: 510 ಎಂಬಿಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

Manipal; ಟ್ಯಾಪ್ಮಿ 38ನೇ ಘಟಿಕೋತ್ಸವ: 510 ಎಂಬಿಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.