ಪುನೀತ್‌ “ಜೇಮ್ಸ್‌’ಗೆ ಮುಹೂರ್ತ: ಬ್ಯೂಟಿಫುಲ್ ಫೋಟೋ ಗ್ಯಾಲರಿ

18

ಪುನೀತ್‌ ರಾಜ್‌ಕುಮಾರ್‌ ನಾಯಕರಾಗಿರುವ “ಜೇಮ್ಸ್‌’ ಚಿತ್ರದ ಮುಹೂರ್ತ ಭಾನುವಾರ ನಡೆಯಿತು. ಅಶ್ವಿ‌ನಿ ಪುನೀತ್‌ ರಾಜ್‌ಕುಮಾರ್‌ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿದರು. ಚೇತನ್‌ ಈ ಚಿತ್ರದ ನಿರ್ದೇಶಕರು. ಈಗಾಗಲೇ “ಭರ್ಜರಿ’, “ಬಹದ್ದೂರ್‌’, “ಭರಾಟೆ’ ಚಿತ್ರಗಳನ್ನು ನಿರ್ದೇಶಿಸಿರುವ ಚೇತನ್‌ ಈಗ “ಜೇಮ್ಸ್‌’ ಚಿತ್ರ ಮಾಡುತ್ತಿದ್ದಾರೆ. ಕಿಶೋರ್‌ ಪತ್ತಿಕೊಂಡ ಈ ಚಿತ್ರದ ನಿರ್ಮಾಪಕರು. ಚಿತ್ರಕ್ಕೆ ಚರಣ್‌ ರಾಜ್‌ ಸಂಗೀತ, ಶ್ರೀಶ ಕೂದುವಳ್ಳಿ ಛಾಯಾಗ್ರಹಣವಿದೆ. ಫೆಬ್ರವರಿಯಿಂದ ಚಿತ್ರೀಕರಣ ಆರಂಭವಾಗಲಿದೆ.

ಹೊಸ ಸೇರ್ಪಡೆ