ಜಗತ್ತಿನಾದ್ಯಂತ ಕೋವಿಡ್ ಅಟ್ಟಹಾಸ ! Special Photo Gallery
ಜರ್ಮನಿ: ಲಾಕ್ಡೌನ್ ಕಾಲದಲ್ಲಿ ಸಂಗೀತ ಅಭ್ಯಾಸ. ವಿದ್ಯಾರ್ಥಿಗಳಿಗೆ ಸಾಮಾಜಿಕ ಅಂತರದ ರೇಖೆ ಬಂಧನ.
ಅಹ್ಮದಾಬಾದ್: ಪಶ್ಚಿಮ ಬಂಗಾಲಕ್ಕೆ ಹೋಗಲು ತಯಾರಾಗಿರುವ ವಲಸೆ ಕಾರ್ಮಿಕರು.
ಪ್ಯಾರಿಸ್: ಇಲ್ಲಿನ ರಿವೊಲಿ ಗ್ಯಾಲರಿಯಲ್ಲಿ ಕಲಾವಿದರು ಸಾಮಾಜಿಕ ಅಂತರ ಕಾಪಾಡಲು ಕಾಗದದಿಂದ ಮಾಡಿದ ವರ್ಣರಂಜಿತ ಕಿರೀಟಗಳನ್ನು ಧರಿಸಿದ್ದರು.
ಹೊಸದಿಲ್ಲಿ: ಗುರುದ್ವಾರ ಮಂದಿರದಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡುತ್ತಿರುವ ಭಕ್ತರು.
ಅಮೃತಸರ: ಆಪರೇಷನ್ ಬ್ಲೂಸ್ಟಾರ್ನ 36ನೇವಾರ್ಷಿಕೋತ್ಸವ ದಿನದಂದು ಕೋವಿಡ್ ಕಾರಣದಿಂದ ಗೋಲ್ಡನ್ ಟೆಂಪಲ್ ನಿರ್ಜನವಾಗಿ ಕಾಣಿಸಿಕೊಂಡದ್ದು
ಹೀಗೆ.
ಸೂರತ್: ವಟ ಪೂರ್ಣಿಮೆಯ ಅಂಗವಾಗಿ ಮಾಸ್ಕ್ ಧರಿಸಿ ಪೂಜೆ ಸಲ್ಲಿಸುತ್ತಿರುವ ಮಹಿಳೆಯರು.
ಬೋಧಗಯಾ: ಇಲ್ಲಿನ ಸನ್ಯಾಸಿಗಳು ಕೊರೊನಾದಿಂದ ಮುಕ್ತಿಗಾಗಿ ವಿಶೇಷ ಪ್ರಾರ್ಥನೆ ಮಾಡಲು ತೆರಳು ತ್ತಿರುವುದು.
ಕ್ವಿಟೊ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಕ್ಷಣಾಕವಚ ಧರಿಸಿ ಸೆಲ್ಫಿ ತೆಗೆಯುತ್ತಿರುವ ದಂಪತಿ.
ಗುವಾಹಟಿ: ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಕ್ವಾರೆಂಟೈನ್ ಕೇಂದ್ರವನ್ನು ನಿರ್ಮಿಸುತ್ತಿರುವ ಕಾರ್ಮಿಕರು.
ಕೋಲ್ಕತ್ತಾ: ಕೋವಿಡ್ ತಡೆಗಟ್ಟಲು ಹೊಸ ಶೈಲಿಯ ಮಾಸ್ಕ್ ಖರೀದಿಸುತ್ತಿರುವ ಮಹಿಳೆ.
ಸಾಮಾಜಿಕ ಅಂತರ ಪಾಲನೆಗೆ ರೋಬೊಟ್ ಕಾವಲು
ಕೋಲ್ಕತ್ತಾ: ಲಾಕ್ಡೌನ್ ಸಡಿಲಿಕೆ ಬಳಿಕ ಮಾಸ್ಕ್ ಧರಿಸಿ ಅಂಗಡಿಯೊಂದಕ್ಕೆ ತೆರಳಿದ ಮಹಿಳೆ.
ಇಸ್ತಾಂಬುಲ್: ಲಾಕ್ಡೌನ್ ಬಳಿಕ ತೆರೆದ ಮಸೀದಿಯಲ್ಲಿ ಸಾಮಾಜಿಕ ಅಂತರ ಪಾಲಿಸಿ ಪ್ರಾರ್ಥನೆ ಸಲ್ಲಿಸುತ್ತಿರುವುದು.
ಹವಾನಾ: ಕೊರೊನಾ ರೋಗಿಗಳ ಶುಶ್ರೂಷೆಗಾಗಿ ಕುವೈಟ್ಗೆ ತೆರಳಲಿರುವ ಆರೋಗ್ಯ ಕಾರ್ಯಕರ್ತರು
ಮುಂಬಯಿ: ಕೊರೊನಾಕ್ಕೆ ಸಂಬಂಧಿಸಿ ವಿವಿಧ ಬೇಡಿಕೆಗಳನ್ನಿರಿಸಿ ಕಾರ್ಪೊರೆಟರ್ಗಳು ಮುನ್ಸಿಪಲ್ ಕಮಿಷನರ್ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು.
ಧಿಮಾಪುರ್: ವಿವಿಧೆಡೆಗಳಿಂದ ಇಲ್ಲಿನ ರೈಲು ನಿಲ್ದಾಣಕ್ಕೆ ಆಗಮಿಸಿದ ಜನರು ಕ್ವಾರೆಂಟೈನ್ ಕೇಂದ್ರಕ್ಕೆ ತೆರಳಲು ಸಾಲಿನಲ್ಲಿ ನಿಂತಿರುವುದು
ಘಾಜಿಯಾಬಾದ್: ಲಾಕ್ಡೌನ್ ಬಳಿಕ ತೆರೆದ ದೂದೇಶ್ವರ ಮಠವನ್ನು ಸ್ವಚ್ಛಗೊಳಿಸುತ್ತಿರುವ ಅರ್ಚಕ.
ಮುಂಬಯಿ: ವಟಸಾವಿತ್ರಿ ವ್ರತದಂಗವಾಗಿ ಪೂಜೆ ಸಲ್ಲಿಸಲು ಮಾಸ್ಕ್ ಧರಿಸಿ ಆಗಮಿಸಿದ ಮಹಿಳೆಯರು.
ಮುಂಬಯಿ: ಲಾಕ್ಡೌನ್ ಸಡಿಲಿಕೆಯಾದ ಬಳಿಕ ಬಟ್ಟೆ ಮಳಿಗೆಯನ್ನು ರೆಯುತ್ತಿರುವ ವ್ಯಾಪಾರಿ
ಹೊಸದಿಲ್ಲಿ: ಗುರುದ್ವಾರದಲ್ಲಿ ಸ್ಥಾಪಿಸಲಾದ ಸ್ಯನಿಟೈಸಿಂಗ್ ಕೊಠಡಿಯ ಮೂಲಕ ಹಾದು ಹೋಗುತ್ತಿರುವ ಭಕ್ತರು.
ಮುಂಬಯಿ: ಕೊರೊನಾ ಸಮಯದಲ್ಲಿ ರಕ್ತದ ಅಭಾವವಿರುವುದರಿಂದ ದಾನಿಗಳು ರಕ್ತದಾನ ಮಾಡುತ್ತಿರುವುದು.
22
ಕೋವಿಡ್ ಸೋಂಕಿನ ಭರಾಟೆಯಿಂದಾಗಿ ಇನ್ನಿತರ ಕಾಯಿಲೆಗಳಿಂದ ಬಳಲುತ್ತಿರುವವರು ಸರಿಯಾದ ಚಿಕಿತ್ಸೆ ಸಿಗದೆ ಪಡಿಪಾಟಲು ಪಡುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಕೋವಿಡ್ ವೈರಸ್ ಅಪಾಯಕಾರಿ ನಿಜ. ಹಾಗೆಂದು ಇತರ ಕಾಯಿಲೆಗಳಿರುವ ರೋಗಿಗಳನ್ನು ನಿರ್ಲಕ್ಷಿಸುವುದು ಸಲ್ಲ. ಯಾವ ಕಾಯಿಲೆಯಿಂದಲಾದರೂ ಸಂಭವಿಸುವುದು ಸಾವೇ ಆದ ಕಾರಣ ಉಳಿದವರನ್ನೂ ಮಾನವೀಯ ನೆಲೆಯಲ್ಲಿ ಕಾಣುವುದು ಈ ಸಂದರ್ಭದಲ್ಲಿ ಅಗತ್ಯ. ಕೋವಿಡ್ ಕಾಂಡದಿಂದ ಜಗತ್ತಿನಾದ್ಯಂತ ಸಂಭವಿಸಿದ ಘಟನೆ/ ಬದಲಾವಣೆಯ ಕೆಲವೊಂದು ಚಿತ್ರ ಇಲ್ಲಿದೆ.