ಪಲಿಮಾರು ಮಠದ ಉತ್ತರಾಧಿಕಾರಿಯಾಗಿ ಶ್ರೀ ವಿದ್ಯಾರಾಜೇಶ್ವರ ತೀರ್ಥರು

18

ಉಡುಪಿ: ಶುಕ್ರವಾರ ಸನ್ಯಾಸಾಶ್ರಮ ಸ್ವೀಕರಿಸಿದ ಕಂಬಳಕಟ್ಟದ ಶೈಲೇಶ್‌ ಉಪಾಧ್ಯಾಯರು ರವಿವಾರ ಶ್ರೀಪಲಿಮಾರು ಮಠದ ಉತ್ತರಾಧಿಕಾರಿಯಾಗಿ ನಿಯೋಜನೆಗೊಂಡರು.

30ನೆಯ ಪೀಠಾಧಿಪತಿಗಳಾದ ಪರ್ಯಾಯ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು 31ನೆಯ ಪೀಠಾಧಿಪತಿಯವರನ್ನು ಶ್ರೀವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಎಂದು ಪ್ರಕಟಿಸಿದರು. ಮಧ್ಯಾಹ್ನ 12.20 ಗಂಟೆ ಅಭಿಜಿನ್‌ ಮುಹೂರ್ತದಲ್ಲಿ ಸರ್ವಜ್ಞ ಪೀಠದಲ್ಲಿ ಕುಳಿತು ಶ್ರೀವಿದ್ಯಾಧೀಶ ತೀರ್ಥರು ಶಿಷ್ಯನಿಗೆ ಪಟ್ಟಾಭಿಷೇಕ ನಡೆಸಿದರು. ತಮ್ಮ ಉಪಾಸ್ಯಮೂರ್ತಿಗಳಾದ ವೇದವ್ಯಾಸರು, ಶ್ರೀಕೃಷ್ಣ, ವಿಶ್ವಂಭರ ಸಾಲಿಗ್ರಾಮವನ್ನು ಹರಿವಾಣದಲ್ಲಿಟ್ಟು ಅದನ್ನು ಶಿಷ್ಯನ ಶಿರದ ಮೇಲಿರಿಸಿ ಅಭಿಷೇಕ ಮಾಡಿದರು. ಈ ನೀರು ಶಿಷ್ಯನ ದೇಹವನ್ನು ಒದ್ದೆಯಾಗಿಸಿತು. ಈ ಅಪರೂಪದ ಕ್ಷಣದ ವಿಶೇಷ ಫೋಟೋಗಳು ಇಲ್ಲಿವೆ.

ಹೊಸ ಸೇರ್ಪಡೆ