ಯೋಗವು ಏಕತೆಯ ಶಕ್ತಿ: ಗಡಿಯುದ್ದಕ್ಕೂ ಯೋಧರ ಯೋಗ; ಮನೆಯೊಳಗೇ ಯೋಗಕ್ಕೆ ಭಾರೀ ಸ್ಪಂದನೆ
ಯೋಗವು ಏಕತೆಯ ಶಕ್ತಿಯಾಗಿ ಹೊರಹೊಮ್ಮಿದೆ. ಕೋವಿಡ್ ದ ಸಂಕಷ್ಟದಲ್ಲಿರುವ ಜಗತ್ತು ಯೋಗಕ್ಕೆ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ. ಪ್ರಾಚೀನ ಭಾರತದ ಈ ಅಭ್ಯಾಸದಿಂದ ಜಗತ್ತಿನ ಸಹಸ್ರಾರು ರೋಗಿಗಳು ಕೋವಿಡ್ ಸೋಂಕನ್ನು ಸೋಲಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ
ವ್ಯಕ್ತಪಡಿಸಿದರು. ಭಾನುವಾರ 6ನೇ ಅಂತಾರಾಷ್ಟ್ರೀಯ ಯೋಗ ದಿನ ಪ್ರಯು ಕ್ತ ಪ್ರಧಾನಿ “ಯೋಗವು ಜಗತ್ತಿನ ಮಾನವೀಯ ಬಂಧಗಳನ್ನು ಗಾಢವಾಗಿಸುತ್ತಿದೆ.
ಯೋಗಕ್ಕೆ ತಾರತಮ್ಯ ತಿಳಿದಿಲ್ಲ. ಯಾವುದೇ ಜನಾಂಗ, ಬಣ್ಣ, ಲಿಂಗ, ನಂಬಿಕೆ ಮತ್ತು ರಾಷ್ಟ್ರದ ಗಡಿಗಳಿಗೆ ಇದು ಸೀಮಿತವಾಗಿಲ್ಲ. ಯಾರೂ ಬೇಕಾದರೂ
ಯೋಗವನ್ನು ಸ್ವೀಕರಿಸ ಬಹುದು’ ಎಂದು ತಿಳಿಸಿದರು.
ನಮ್ಮ ವೀರಯೋಧರ ಕೆಚ್ಚೆದೆಯ ಶಕ್ತಿಯ ಹಿಂದೆ ಯೋಗವಿದೆ ಎಂದು ಸೇನೆ ಜಗತ್ತಿಗೆ ಸಾರಿಹೇಳಿದೆ. 18 ಸಾವಿರ ಅಡಿ ಎತ್ತರದ, ಶೂನ್ಯಕ್ಕಿಂತಲೂ ಕಡಿಮೆ ತಾಪಮಾನದ ಲಡಾಖ್ ನೆಲದಲ್ಲೂ ಇಂಡೋ- ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆ (ಐಟಿಬಿಪಿ)ಶಿಸ್ತುಬದ್ಧ ಯೋಗ ಪ್ರದರ್ಶಿಸಿತು. ಲಡಾಖ್ನ ಮೈ ಕೊರೆಯುವ ಚಳಿಯಲ್ಲಿ ದಪ್ಪ ಜಾಕೆಟ್, ಉಣ್ಣೆಯ ಟೋಪಿಗಳನ್ನು ಧರಿಸಿ ವೀರಯೋಧರು ಸೂರ್ಯ ನಮಸ್ಕಾರ, ಪ್ರಾಣಾಯಾಮ ಮಾಡಿದರು.
“ಮನೆಯಲ್ಲೇ ಯೋಗ ಕುಟುಂಬದೊಂದಿಗೆ ಯೋಗ’ ಎಂಬುದು 2020ರ ಯೋಗ ದಿನಾಚರಣೆಯ ಪರಿಕಲ್ಪನೆಯಾಗಿತ್ತು. ಇದೇ ಕಾರಣಕ್ಕೆ ಮನೆಯಲ್ಲೇ ಸಾಮಾಜಿಕ ಅಂತರ ಕಾಯ್ದುಕೊಂಡು ಯೋಗ ನಡೆಸಲಾಯಿತು. ಕೆಲವು ಕಡೆಗಳಲ್ಲಿ ಆನ್ಲೈನ್ ಮುಖೇನವೂ ಯೋಗ ನಡೆಯಿತು. ಕೆಲವೊಂದು
ಸಂಸ್ಥೆಗಳು ಆನ್ಲೈನ್ ಯೋಗ ಕಾರ್ಯಾಗಾರ ಆಯೋಜನೆ ಮಾಡಿದ್ದವು. ವಿವಿಧ ಆ್ಯಪ್ ಮೂಲಕ ನೇರ ಪ್ರಸಾರವಾಗಿ ಯೋಗ ವೀಕ್ಷಣೆ ಕೂಡ ಆಯೋಜನೆ ಮಾಡಿದ್ದರು.
ಹೊಸ ಫೋಟೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು