ದಿಗ್ಗಜ ಮಾಲಿಂಗಗೆ ಗೆಲುವಿನ ವಿದಾಯ ನೀಡಿದ ಲಂಕಾ
ಬಣ್ಣ ಬಳಿದ ಕೇಶರಾಶಿ, ಸದಾ ನಗುಮುಖ, ಎಸೆದ ಯಾರ್ಕರ್ ಗಳಿಗೆ ಬ್ಯಾಟ್ಸಮನ್ ಗಳು ಕಂಗಾಲು, ಸ್ಟಂಪ್ ಗಳು ಎಗರಿ ಬೀಳುತ್ತಿದ್ದರೆ ಈ ಬೌಲರ್ ಎರಡೂ ಕೈಯಗಲಿಸಿ ಮೈದಾನದಲ್ಲಿ ಓಡುತ್ತಿದ್ದರು. ಶ್ರೀಲಂಕಾ ಎಂಬ ದ್ವೀಪ ರಾಷ್ಟ್ರದ ಪ್ರತಿಭೆ ಲಸಿತ್ ಮಾಲಿಂಗʼ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ನಿಂದ ನಿವೃತ್ತರಾಗಿದ್ದಾರೆ.
ಕೊಲಂಬೋದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶದ ವಿರುದ್ಧ ತನ್ನ ಅಂತಿಮ ಏಕದಿನ ಪಂದ್ಯವಾಡಿದ ʼಸ್ಲಿಂಗ ಮಾಲಿಂಗʼ ಹೊಸತೊಂದು ದಾಖಲೆ ಬರೆದಿದ್ದಾರೆ.ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಮಾಲಿಂಗ ಮೂರು ವಿಕೆಟ್ ಪಡೆದು ಮಿಂಚಿದರು….