Lockdown ತೆರವು ; ದರ್ಶನ ನೀಡಿದ ದೇವರು, ಹೋಟೆಲ್, ಮಾಲ್ಗಳಲ್ಲಿ ವ್ಯಾಪಾರ ನೀರಸ !
21
ಲಾಕ್ಡೌನ್ ಹಿನ್ನೆಲೆಯಲ್ಲಿ 75 ದಿನಗಳಿಂದ ಬಂದ್ ಆಗಿದ್ದ ರಾಜ್ಯದ ಬಹುತೇಕ ದೇಗುಲಗಳು ಸೋಮವಾರ ತೆರೆದಿದ್ದು, ಎಂದಿನಂತೆ ಗ್ರಾಹಕರನ್ನು ಸ್ವಾಗತಿಸಲು ಸಜ್ಜಾದ ಮಾಲ್ಗಳು, ನಿರಂತರ ಮನೆ ಆಹಾರದಿಂದ ಬೇಸತ್ತು ಹೋಟೆಲ್ ರುಚಿ ಸವಿದ ಜನ, ಮೊದಲ ದಿನ ನೀರಸ ಪ್ರತಿಕ್ರಿಯೆ, “ಬಂಧ ಮುಕ್ತ’ವಾದರೂ ಕಳೆಗಟ್ಟದ ಹಾಟ್ಸ್ಪಾಟ್ಗಳು… ಲಾಕ್ಡೌನ್ ಸಂಪೂರ್ಣ ತೆರವಾದ ಮೊದಲ ದಿನ ಬಹುತೇಕ ನಗರಗಳಲ್ಲಿ ಕಂಡುಬಂದ ದೃಶ್ಯಗಳಿವು.