ಯಶ್‌ ಬರ್ತ್‌ಡೇ ರೆಕಾರ್ಡ್!:‌ ರಾಕಿಂಗ್‌ ಫೋಟೋ ಗ್ಯಾಲರಿ

14

ಐದು ಸಾವಿರ ಕೆ.ಜಿ. ಕೇಕ್‌, 216 ಅಡಿ ಎತ್ತರದ ಕಟೌಟ್‌, ಸಾವಿರಾರು ಸಂಖ್ಯೆಯ ಅಭಿಮಾನಿಗಳ ಉದ್ದನೆಯ ಸಾಲು, ಚಪ್ಪಾಳೆ, ಶಿಳ್ಳೆ, ಜೈಕಾರಗಳ ಸದ್ದು…! ಇದು ನಾಯಂಡಹಳ್ಳಿ ಬಳಿ ಇರುವ ನಂದಿ ಲಿಂಕ್‌ ಗ್ರೌಂಡ್‌ನ‌ಲ್ಲಿ ಕಂಡು ಬಂದ ದೃಶ್ಯ. ಇದಕ್ಕೆಲ್ಲ ಕಾರಣವಾಗಿದ್ದು ಯಶ್‌ ಅವರ 34 ನೇ ಹುಟ್ಟಹಬ್ಬ. ಹೌದು, ಯಶ್‌ ಬುಧವಾರ ತಮ್ಮ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಪರಿ ಹೀಗಿತ್ತು. ಈ ಮೂಲಕ ಅವರ ಈ ವರ್ಷದ ಬರ್ತ್‌ಡೇ ದಾಖಲೆಗೆ ಸೇರಿಕೊಂಡಿತು. ಅವರ ಅಭಿಮಾನಿಗಳು ಪ್ರೀತಿಯಿಂದ ಈ ಬಾರಿಯ ಹುಟ್ಟುಹಬ್ಬಕ್ಕೆ ಐದು ಸಾವಿರ ಕೆ.ಜಿ. ಕೇಕ್‌, ತಯಾರಿಸಿದ್ದರು. ಪತ್ನಿ ರಾಧಿಕಾ ಪಂಡಿತ್‌ ಜೊತೆ ಸೇರಿ ಯಶ್‌ ಕೇಕ್‌ ಕಟ್‌ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ವಿಶೇಷವಾಗಿತ್ತು.

ಹೊಸ ಸೇರ್ಪಡೆ