ಚಂದ್ರಯಾನ-2 ರಾಕೆಟ್ ಉಡ್ಡಯನ ಯಶಸ್ವಿ
ಇಸ್ರೋದ ಹಿರಿಯ ವಿಜ್ಞಾನಿ ಚಂದ್ರಕಾಂತ ಕುಮಾರ್ ಅವರ ಮನೆಯಲ್ಲಿ ಚಂದ್ರಯಾನ -2 ಉಡ್ಡಯನದ ನೇರಪ್ರಸಾರ ವೀಕ್ಷಣೆ.
ಶತಕೋಟಿ ಕನಸುಗಳನ್ನು ಚಂದ್ರನಲ್ಲಿಗೆ ತೆಗೆದುಕೊಂಡು ಹೋಗುವ ಇಸ್ರೋದ ಕನಸು ನನಸಾಗಿದೆ. ಸರಿಯಾಗಿ 11 ವರ್ಷಗಳ ಹಿಂದೆ ಚಂದ್ರಯಾನ-1ರಲ್ಲಿ ಕಂಡಿದ್ದ ಯಶಸ್ಸನ್ನು ಇಸ್ರೋ ಪುನರಾವರ್ತಿಸಿದೆ. ಜಾಗತಿಕ ಮಟ್ಟದಲ್ಲಿ ನಮ್ಮ ಶಕ್ತಿ ಸಾಮರ್ಥ್ಯವನ್ನು ಅನಾವರಣ ಮಾಡಿರುವ ಇಸ್ರೋ, ಚಂದ್ರಯಾನ-2 ಹೊತ್ತೂಯ್ದ ಜಿಎಸ್ಎಲ್ ವಿ ಮಾರ್ಕ್ 3 ರಾಕೆಟ್ (ಬಾಹುಬಲಿ) ಅನ್ನು 16
ನಿಮಿಷ 14 ಸೆಕೆಂಡ್ಗಳಲ್ಲೇ ಕಕ್ಷೆಗೆ ಸೇರಿಸಿದೆ.