ಶೂನ್ಯ ಮೊತ್ತದ ಬಜೆಟ್: ರಾಹುಲ್ ಗಾಂಧಿ ಸೇರಿ ವಿರೋಧ ಪಕ್ಷದ ಟೀಕೆ
ಅಚ್ಚೇ ದಿನ್’ ಎಂಬ ಮರೀಚಿಕೆ ಇನ್ನಷ್ಟು ದೂರ
Team Udayavani, Feb 1, 2022, 3:10 PM IST
ನವದೆಹಲಿ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ವಿಪಕ್ಷ ನಾಯಕರು ವ್ಯಾಪಕ ಟೀಕೆ ಮಾಡಿದ್ದು, ಇದು ಶೂನ್ಯ ಬಜೆಟ್ ಎಂದಿವೆ.
ಮೋದಿ ಸರಕಾರದ ಶೂನ್ಯ ಮೊತ್ತದ ಬಜೆಟ್! ಯಾವುದಕ್ಕೂ ಇಲ್ಲ, ಸಂಬಳ ಪಡೆಯುವವರಿಗೂ, ಮಧ್ಯಮ ವರ್ಗದಾರಿಗೆ, ಬಡವರು ಮತ್ತು ವಂಚಿತರು, ಯುವ ಜನ, ರೈತರು ಮತ್ತು MSMEಗಳಿಗೆ ಏನೂ ಸಿಕ್ಕಿಲ್ಲ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಅಚ್ಛೇ ದಿನ್’ ಎಂಬ ಮರೀಚಿಕೆ
ನಾವು ಭಯಾನಕ ಹಣದುಬ್ಬರವನ್ನು ಎದುರಿಸುತ್ತಿದ್ದೇವೆ ಮತ್ತು ಮಧ್ಯಮ ವರ್ಗದವರಿಗೆ ಯಾವುದೇ ತೆರಿಗೆ ವಿನಾಯಿತಿ ಇಲ್ಲ. ‘ಅಚ್ಚೇ ದಿನ್’ ಎಂಬ ಮರೀಚಿಕೆಯನ್ನು ಇನ್ನಷ್ಟು ದೂರ ತಳ್ಳುವಂತಿರುವ ಬಜೆಟ್ ಇದಾಗಿದೆ. ಈಗ ಅದು 100 ರ ಭಾರತ, ‘ಅಚ್ಛೇ ದಿನ್’ ಬರಲು ನಾವು ಇನ್ನೂ 25 ವರ್ಷ ಕಾಯಬೇಕು ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಟೀಕಿಸಿದ್ದಾರೆ.
ಇದನ್ನೂ ಓದಿ : ಜನಪ್ರಿಯ ಘೋಷಣೆಗಳಿಲ್ಲದ ಕೇಂದ್ರ ಬಜೆಟ್ 2022: ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ?
ಪೆಗಾಸಸ್ ಸ್ಪಿನ್ ಬಜೆಟ್
ನಿರುದ್ಯೋಗ ಮತ್ತು ಹಣದುಬ್ಬರದಿಂದ ನಲುಗಿ ಹೋಗುತ್ತಿರುವ ಸಾಮಾನ್ಯ ಜನರಿಗೆ ಬಜೆಟ್ ಶೂನ್ಯವನ್ನು ನೀಡಿದೆ. ಸರ್ಕಾರವು ಯಾವುದನ್ನೂ ನೀಡದೆ ದೊಡ್ಡ ಪದಗಳಲ್ಲಿ ಕಳೆದುಹೋಗಿದೆ ಇದು ಪೆಗಾಸಸ್ ಸ್ಪಿನ್ ಬಜೆಟ್ ಎಂದು ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ