ಜನರನ್ನು ಧಾರ್ಮಿಕ ಮಟ್ಟದಲ್ಲಿ ವಿಭಜಿಸುವಲ್ಲಿ ಬಿಜೆಪಿ ವಿಫಲವಾಗಿದೆ : ಪಾಲೇಕರ್
Team Udayavani, May 14, 2022, 5:11 PM IST
ಪಣಜಿ: ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಭೀತಿ ಎದುರಿಸುತ್ತಿದೆ. ಹೀಗಾಗಿ ಆಡಳಿತ ವೈಫಲ್ಯದಿಂದ ಜನರ ಗಮನ ಬೇರೆಡೆ ಸೆಳೆಯಲು ನಾನಾ ತಂತ್ರಗಳನ್ನು ರೂಪಿಸುತ್ತಿದೆ. ಗೋವಾ ರಾಜ್ಯದ ಜನರನ್ನು ಧಾರ್ಮಿಕ ಮಟ್ಟದಲ್ಲಿ ವಿಭಜಿಸುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ಆಮ್ ಆದ್ಮಿ ಪಕ್ಷದ ಅಮಿತ್ ಪಾಲೇಕರ್ ಹೇಳಿದ್ದಾರೆ.
ಪಣಜಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ತಂತ್ರದಿಂದ ಕನ್ನಡ ಒಕ್ಕೂಟದ ಮುಖಂಡರನ್ನು ದೂರವಿಡಬೇಕು. ವೋಟ್ ಬ್ಯಾಂಕ್ ಲಾಭ ಪಡೆದು ಅಧಿಕಾರ ಪಡೆಯಲು ಬಿಜೆಪಿಯು ಒಡೆದು ಆಳುವ ತಂತ್ರವನ್ನು ಬಳಸುತ್ತಿದೆ ಎಂದು ಅಮಿತ್ ಪಾಲೇಕರ್ ಆರೋಪಿಸಿದರು.
ಎಲ್ಲರೂ ಚುನಾವಣೆಗೆ ಸ್ಫರ್ಧಿಸಲು ಸ್ವತಂತ್ರರು. ಆದರೆ ಹೋರಾಟದ ಹಿಂದಿನ ಉದ್ದೇಶ ಜನಸೇವೆಯೇ ಆಗಿರಬೇಕು. ಒಂದು ನಿರ್ದಿಷ್ಠ ಭಾಷೆ ಮಾತನಾಡುವ ಅಥವಾ ಮೂಲತಃ ಹಿಂದಿನ ನಿರ್ದಿಷ್ಠ ರಾಜ್ಯದವರಿಗೆ ಮಾತ್ರ ಸೇವೆ ಸಲ್ಲಿಸುವುದು ಹೊರತುಪಡಿಸಿ ಎಲ್ಲಾ ಜನರಿಗೆ ಸೇವೆ ಸಲ್ಲಿಸುವುದು ಗುರಿಯಾಗಿರಬೇಕು ಎಂದು ಅಮಿತ್ ಪಾಲೇಕರ್ ಅಭಿಪ್ರಾಯಪಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಾರಾಷ್ಟ್ರ ಬಿಕ್ಕಟ್ಟು-ಶಿಂಧೆ ಗುಂಪಿಗೆ ಶಾಸಕರ ಸೇರ್ಪಡೆ, ಶಿವಸೇನಾಗೆ ಭಾರೀ ಮುಖಭಂಗ
ಗೋವು ಕಳ್ಳಸಾಗಣೆ ಪ್ರಕರಣ; ಜಾರಿ ನಿರ್ದೇಶನಾಲಯದಿಂದ ಟಿಎಂಸಿ ಸಂಸದ, ನಟ ದೇವ್ ವಿಚಾರಣೆ
ದೊಡ್ಡ ರಾಷ್ಟ್ರೀಯ ಪಕ್ಷ ಬೆಂಬಲವನ್ನು ಖಚಿತಪಡಿಸಿದೆ : ಏಕನಾಥ್ ಶಿಂಧೆಗೆ ಇನ್ನಷ್ಟು ಬಲ
ನೀವು ಬಿಜೆಪಿಗೆ ಸೇರ್ಪಡೆಯಾಗಿ,ಶಿವಸೇನೆಯನ್ನು ಮತ್ತೆ ಕಟ್ಟುತ್ತೇವೆ: ಬಂಡಾಯ ಶಾಸಕರಿಗೆ ರಾವತ್
ಪನ್ನೀರ್ ಸೆಲ್ವಂ ಮೇಲೆ ಬಾಟಲಿ ಎಸೆತ ; ಎಐಎಡಿಎಂಕೆ ಸಭೆಯಲ್ಲಿ ಕೋಲಾಹಲ