ದಿಲೀಪ್ ಸಿಂಗ್ ರಾಣಾ ಎಂಬ ದೈತ್ಯ ಕುಸ್ತಿಪಟುವಿನ ಯಶಸ್ವಿ ಪಯಣ!
ಜಲಂಧರ್ ಗೆ ಬಂದ ದಿಲೀಪ್ ಜಿಮ್ ನಲ್ಲಿ ಕುಸ್ತಿ ಅಭ್ಯಾಸ ಮಾಡಲಾರಂಭಿಸಿದ .
Team Udayavani
ಸುಮಾರು ಆರು ವರ್ಷಗಳ ಕಾಲ ಪೊಲೀಸ್ ಕೆಲಸ ಮಾಡಿದ ದಿಲೀಪ್ ಸಿಂಗ್ ರಾಣಾ 1999ರಲ್ಲಿ ವೃತ್ತಿಪರ ಕುಸ್ತಿ ಅಖಾಡದಲ್ಲಿ ಪಾಲ್ಗೊಳ್ಳುವ ಸಲುವಾಗಿ ಅಮೇರಿಕಾಗೆ ಹಾರುತ್ತಾನೆ. ಆಲ್ ಪ್ರೋ ರೆಸ್ಲಿಂಗ್ ಕ್ಯಾಂಪ್ ನಲ್ಲಿ ತರಬೇತಿ ಪಡೆಯುತ್ತಾನೆ. ಅಲ್ಲಿ ದಿಲೀಪ್ ಸಿಂಗ್ ರಾಣಾ, ಜೈಂಟ್ ಸಿಂಗ್ ಆಗಿ ಬದಲಾಗುತ್ತಾನೆ. 2000ನೇ ಇಸವಿಯ ಅಕ್ಟೋಬರ್ ಏಳರಂದು ಎಪಿ ಡಬ್ಲ್ಯೂ ಗೆ ವೃತ್ತಿಪರ ರೆಸ್ಲಿಂಗ್ ಪಟುವಾಗಿ ಜೈಂಟ್ ಸಿಂಗ್ ಕಣಕ್ಕಿಳಿಯುತ್ತಾನೆ. 2001ರ ಮೇ 21ರಂದು ಸಹವರ್ತಿ ಬ್ರೈನ್ ಓಎನ್ ಜಿ ಅವರ ಜೊತೆ ತರಬೇತಿ ಮಾಡುವ ವೇಳೆ ಆದ ಒಂದು ಯಡವಟ್ಟಿನಿಂದ ಬ್ರೈನ್ ರ ಪ್ರಾಣಪಕ್ಷಿಯೇ ಹಾರಿಹೋಗಿತ್ತು.