ನಿಮ್ಮ ಭಾವನೆಯ ಆ ಮೂರು ಅಂಶಗಳ ಬಗ್ಗೆ ನಿಮಗೆ ಮಾಹಿತಿ ಇಲ್ಲ..! ಆ ಅಂಶಗಳ್ಯಾವುವು..?
ಕೆಲವರು, ತಾನು ಭಾವನಾತ್ಮಕ ಜೀವಿ ಎಂದು ಗುರುತಿಸಿಕೊಳ್ಳುವುದು ಇನ್ನೊಬ್ಬರ ಅನುಕಂಪಕ್ಕಾಗಿಯೂ ಹೌದು..!
Team Udayavani
ಪ್ರಾತಿನಿಧಿಕ ಚಿತ್ರ
ಭಾವನೆಗಳನ್ನು ನಮಗೆ ನಿಯಂತ್ರಿಸಲು ಸಾಧ್ಯವಿಲ್ಲವೆನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೇ, ಇಲ್ಲಿ ಹೇಳಿರುವ ಮೂರು ಅಂಶಗಳನ್ನು ಅಳವಡಿಸಿಕೊಂಡರೇ, ಭಾವನೆಗಳಿಗೆ ಪ್ರತಿ ಸ್ಪಂದಿಸುವುದಕ್ಕೆ ಆಗುತ್ತದೆ. ಮಾತ್ರವಲ್ಲದೇ, ಎಲ್ಲಾ ಭಾವನೆಗಳನ್ನು ಕೇವಲ ಭಾವನೆಗಳಂತೆಯೇ ಸ್ವೀಕರಿಸಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಭಾವನೆಗಳು ‘ಕೊರಗು’ ಗಳಾಗಿ ಪರಿವರ್ತೆನಯಾಗುತ್ತವೆ.
ಭಾವನೆ ಮತ್ತು ಭಾವನೆಯಿಂದಾಗುವ ಪರಿಣಾಮಗಳ, ಪ್ರಧಾನವಾಗಿ ವರ್ತನೆ ಮತ್ತು ಭಾವನಾತ್ಮಕ ಅಭಿವ್ಯಕ್ತಿಗಳ, ಮಧ್ಯೆ ಸಂಬಂಧಿತ ಭಿನ್ನತೆ ಇರುತ್ತದೆ.