ಮನೆಯೊಳಗೆ ನಾಗರಹಾವು ಮತ್ತು ಮನುಷ್ಯರ ವಾಸ…ಇದು “ಉರಗ ಪ್ರೇಮಿ” ಊರು!
ಹಾವು ಮತ್ತು ಮನುಷ್ಯರು ಜೊತೆ ಜೊತೆಯಾಗಿ ಹೇಗೆ ಜೀವಿಸುತ್ತಾರೆ?
ಗಣೇಶ್ ಹಿರೇಮಠ
ಭಾರತವು ಹಾವುಗಳನ್ನು ಮೋಡಿ ಮಾಡುವ ದೇಶ ಎಂದು ಪಾಶ್ಚಿಮಾತ್ಯದ ಕೆಲವು ದೇಶಗಳು ಹೇಳಿಕೊಳ್ಳುತ್ತವೆ. ಶೆಪ್ತಾಲ್ ಗ್ರಾಮಕ್ಕೆ ಭೇಟಿ ನೀಡಿದರೆ ಈ ಪರದೇಶಿಗಳ ಮಾತನ್ನು ಸ್ವಲ್ಪ ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಯಾಕಂದರೆ ಈ ಗ್ರಾಮದ ಜನರಿಗೆ ಹಾವುಗಳೆಂದರೆ ಭಯವೇ ಇಲ್ಲ. ನಾವು ಬೆಕ್ಕು-ನಾಯಿಗಳ ಜೊತೆಗೆ ಹೇಗೆ ವಾಸಿಸುತ್ತೇವೋ ಹಾಗೇ ಇಲ್ಲಿಯ ಜನರು ನಾನಾ ಬಗೆಯ ಹಾವುಗಳನ್ನು ಕಿಂಚಿತ್ತೂ ಭಯವಿಲ್ಲದೆ ಮುದ್ದಿಸುತ್ತಾರೆ. ಉರಗಗಳನ್ನು ದೇವ ಸ್ವರೂಪಿಯಂತೆ ಕಾಣುವ ಇಲ್ಲಿಯ ಜನರಿಗೆ ಹಾವನ್ನು ಪೂಜಿಸುವ ಪದ್ಧತಿ ಹೇಗೆ ಆರಂಭವಾಯಿತು ಅನ್ನೋದು ಗೊತ್ತಿಲ್ಲ...