ಗ್ಯಾಸ್ ಸಿಲಿಂಡರ್ ಎತ್ತಿ ಅಭ್ಯಾಸ!…ಲವ್ಲಿನಾ ಎಂಬ ಲವ್ಲಿ ಬಾಕ್ಸರ್
ಕೋವಿಡ್ ಸಮಯದಲ್ಲಿ ತನ್ನ ತಂದೆ ಜತೆ ಗದ್ದೆಯಲ್ಲಿ ನೇಜಿ ನೆಡುವ ಮೂಲಕ ತಂದೆಗೆ ನೆರವಾಗಿದ್ದಳು.
Team Udayavani
ಕೆಲ ಕ್ರೀಡಾಪಟುಗಳ ಬಗ್ಗೆ ಬರೆಯುವಾಗ, ಓದುವಾಗ ಯಾವಾಗಲು ರೋಮಾಂಚನಗೊಳ್ಳುತ್ತೇವೆ. ಎಲ್ಲರಿಗೂ ಕಾಲಿಡಲಾಗದ, ಏರುವ ಕನಸನ್ನೂ ಕಾಣಲಾಗದ ಸಾಧನೆಯ ಗೌರಿಶಂಕರವನ್ನು ಏರಿ ಗೆಲುವಿನ ಬಾವುಟ ಹಾರಿಸುವ ಧೀಮಂತಿಕೆ ಇರುವ ಅಪರೂಪದ ವ್ಯಕ್ತಿಗಳವರು. ಈ ಸಾಧಕರಲ್ಲೂ ತಮ್ಮದೇ ಆದ ವಿಶೇಷತೆಯುಳ್ಳವರು ಇದ್ದಾರೆ. ಎಲ್ಲ ಬಾಗಿಲುಗಳೂ ಮುಚ್ಚಿಹೋದರೂ ಧೈರ್ಯಗೆಡದೇ ಮುಚ್ಚಿದ ಕಿಟಕಿಯ ಪುಟ್ಟ ಸಂದಿಯೊಂದರಿಂದ ತೂರಿಬರುವ ಬೆಳಕಿನಕೋಲನ್ನೇ ಏಣಿಯಾಗಿಸಿಕೊಂಡು ಆಗಸ ಮುಟ್ಟಿದ ಅಸಾಮಾನ್ಯರವರು...