ಪೋರ್ನೋಗ್ರಫಿ ಸ್ಟಾರ್ ಮಿಯಾ ಕಲೀಫ ಮತೀಯ ವೈಷಮ್ಯದಲ್ಲಿ ಬೆಂದಿದ್ದೇಕೆ..?
ಮಾಡೆಲಿಂಗ್ ಕ್ಷೇತ್ರವೆಂದು ಮಿಯಾ ಕಲೀಫ ಕಾಲಿಟ್ಟಿದ್ದು ‘ಸೆಕ್ಸ್’ ಲೋಕಕ್ಕೆ..!
ಶ್ರೀರಾಜ್ ವಕ್ವಾಡಿ
ಅಮೆರಿಕಾದಲ್ಲೂ ಮುಸ್ಮೀಮರ ಮೇಲೆ ಮತೀಯ ವೈಷಮ್ಯ ತಾರಕಕ್ಕೇರಿತ್ತು. ಮಿಯಾ ಕಲೀಫ ಅವರ ಕುಟುಂಬ ಇದೇ ಸಂದರ್ಭದಲ್ಲಿ ಅಮೆರಿಕಾಕ್ಕೆ ಬಂದಿದ್ದಷ್ಟೇ, ಅಮೆರಿಕಾದಲ್ಲಿ ಮುಸ್ಮೀಂ ರ ಮೇಲೆ ದೊಡ್ಡ ವೈಷಮ್ಯದ ವಾತಾವರಣ ಸೃಷ್ಟಿಯಾಗಿದ್ದ ಕಾರಣದಿಂದಾಗಿ ಮಿಯಾ ಕಲೀಫ ಕುಟುಂಬ ಕೂಡ ಈ ಘರ್ಷಣೆ, ವೈಷಮ್ಯದ ಬಿಸಿಗೆ ಬೇಯಬೇಕಾಯ್ತು ಎನ್ನುವುದು ಸತ್ಯ.
ಮಾಡೆಲಿಂಗ್ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಬೇಕೆಂಬ ಮಹತ್ತರ ಕನಸಿನೊಂದಿಗೆ ಕಾಲಿಟ್ಟಿದ್ದು, ಅಮೆರಿಕಾ ಮೂಲದ ಅಂತಾರಾಷ್ಟ್ರೀಯ ಪೋರ್ನೋಗ್ರಫಿ ಪ್ರೊಡಕ್ಷನ್ ಸಂಸ್ಥೆ ಬ್ಯಾಂಗ್ ಬ್ರೋಸ್ ಸಂಸ್ಥೆಗೆ.
ಕಲೀಫಾ ಮೊದಲು ನಟಿಸಿದ ಮೊದಲ ಪೋರ್ನೋಗ್ರಫಿ ಶೋಗಳಲ್ಲಿ ಮುಸ್ಲೀಂ ಸಾಂಪ್ರದಾಯಿಕ ಧಿರಿಸನ್ನು ಧರಿಸಿ ನಟಿಸುವಂತೆ ಆ ಪ್ರೊಡಕ್ಷನ್ ಸಂಸ್ಥೆ ಕಲೀಫಳನ್ನು ಒತ್ತಾಯಿಸುತ್ತದೆ. ಆದರೇ, ಅದೇ ದೊಡ್ಡ ವಿವಾದದ ಮೂಟೆಯನ್ನು ಕಲೀಫಳ ತಲೆ ಮೇಲೆ ತಂದಿಡುತ್ತದೆ ಎಂಬ ಸಣ್ಣ ಆಲೋಚನೆಯೂ ಇಲ್ಲದ ಮುಗ್ದೆಯಾಗಿದ್ದಳು ಕಲೀಫ ಎಂದರೇ ತಪ್ಪಿಲ್ಲ.