ಈ ಜನರ ಆಹಾರ ಪದ್ಧತಿ ವಿಚಿತ್ರ…. ಪುರಾಣಕ್ಕೂ ಆಹಾರಕ್ಕೂ ಏನು ಸಂಬಂಧ?
ಲೈಟುಗಳ ಕೆಳಗೆ ಹಾರಾಡುವ ಈ ಹುಳುಗಳನ್ನು ಹಿಡಿದು ಜನ ಒಣಗಿಸಿ ತಿನ್ನುತ್ತಾರೆ.
Team Udayavani
ಹೌದು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕೆಲವು ಭಾಗಗಳಲ್ಲಿ ಜನರ ಆಹಾರ ಪದ್ಧತಿ ವಿಚಿತ್ರವಾಗಿದೆ. ಅದೇನು ಎಂಬುದು ತಿಳಿದರೆ ನಿಮಗೆ ಆಶ್ಚರ್ಯ ಆಗೋದ್ರಲ್ಲಿ ಎರಡು ಮಾತಿಲ್ಲ. ಹಾಗಾದ್ರೆ ಆ ಆಹಾರ ಯಾವುದು ಅಂದ್ರಾ.. ಅದೇ ಮಳೆ ಹುಳು. ಇದನ್ನು ಇಂಗ್ಲಿಷ್ ನಲ್ಲಿ fly termites ಎಂದು ಕರೆಯುತ್ತಾರೆ. ಆದ್ರೆ ಶಿರಾ ಭಾಗದ ಜನರು ಈ ಹುಳುಗಳನ್ನು ‘ಈಸಲು’ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಈ ಈಸಲು ಹುಳುಗಳು ಮಳೆ ಬಂದಾಗ ಮಣ್ಣಿನೊಳಗಿಂದ ಮೇಲಕ್ಕೆ ಬರುತ್ತವೆ. ಕೆಲವು ಕಡೆ ಹುತ್ತದಲ್ಲಿಯೂ ಈ ಹುಳಗಳು ಗೂಡುಗಳನ್ನು ಮಾಡಿಕೊಂಡು ಇದ್ದು ಮಳೆ ಬಂದಾಗ ಮೇಲೆ ಬರುತ್ತವೆ.