ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ಹಿತಶತ್ರುಗಳ ಸಮಯಸಾಧಕತನ ಆಗಾಗ ಘಾಸಿಗೊಳಿಸಲಿದೆ!
Team Udayavani, Feb 26, 2021, 7:49 AM IST
26-02-2021
ಮೇಷ: ವಿದ್ಯಾರ್ಥಿ ಸಮೂಹಕ್ಕೆ ಹೊಸ ಹುರುಪು ಕಾಣಿಸಲಿದೆ. ನಿರುದ್ಯೋಗಿಗಳಿಗೆ ಹಾಗೂ ಅವಿವಾಹಿತರಿಗೆ ಅನಿರೀಕ್ಷಿತ ರೂಪದಲ್ಲಿ ಅವಕಾಶಗಳು ಒದಗಿ ಬರಲಿವೆ. ಸಾಂಸಾರಿಕವಾಗಿ ಪತ್ನಿ-ಪುತ್ರರ ಸಹಕಾರ, ಪ್ರೀತಿ – ವಿಶ್ವಾಸಗಳಿವೆ.
ವೃಷಭ: ಕಾರ್ಯರಂಗದಲ್ಲಿ ಛಲ ಬಿಡದೆ, ಪಟ್ಟು ಹಿಡಿದು ದುಡಿಯಿರಿ. ನಿರೀಕ್ಷಿತ ಅಭಿವೃದ್ಧಿ ನಿಶ್ಚಿತ ರೂಪ ದಲ್ಲಿ ಕಂಡುಬಂದೀತು. ಸ್ತ್ರೀಯರ ವಿಚಾರದಲ್ಲಿ ಸಮಸ್ಯೆಗಳು ತೋರಿ ಬಾರದಂತೆ ಗಮನಹರಿಸಿರಿ. ವಿದ್ಯಾರ್ಥಿಗಳಿಗೆ ಉತ್ಸಾಹ ಕುಗ್ಗಲಿದೆ.
ಮಿಥುನ: ಆರೋಗ್ಯಕ್ಕಾಗಿ ದೇಹದ ಸ್ಥಿತಿಯನ್ನು ಜಾಗ್ರತೆಯಿಂದ ಕಾಪಾಡಿಕೊಳ್ಳಿರಿ. ಹಣಕಾಸಿನ ಸ್ಥಿತಿಯು ಆಗಾಗ ಏರುಪೇರಾದರೂ ಸುಧಾರಿಸಿಕೊಂಡು ಹೋಗಬಹುದಾಗಿದೆ. ಯಾವುದೇ ವಿಚಾರದಲ್ಲಿ ನಿರಾಸೆಗೊಳ್ಳದಿರಿ.
ಕರ್ಕ: ಹೊಸ ವ್ಯಾಪಾರ, ವ್ಯವಹಾರಗಳಲ್ಲಿ ಪರಿಸ್ಥಿತಿಯನ್ನು ನೋಡಿಕೊಂಡು ಮುನ್ನಡೆಯಿರಿ. ಆಗಾಗ ಭಿನ್ನಾಭಿಪ್ರಾಯದಿಂದ ಸಾಂಸಾರಿಕ ಸುಖ ಕಿರಿಕಿರಿಯೆನಿಸಲಿದೆ. ಅವಿವಾಹಿತರಿಗೆ ವೈವಾಹಿಕ ಜೋಡಣೆ ಸಂತಸ ತಂದೀತು.
ಸಿಂಹ: ದೂರ ಸಂಚಾರದ ಸಿದ್ಧತೆ ಸಂತಸ ತರಲಿದೆ. ಆರೋಗ್ಯಭಾಗ್ಯವು ಕೊಂಚ ಏರುಪೇರಾಗುವ ಸಾಧ್ಯತೆ ಇದೆ. ಹಣದ ಪರಿಸ್ಥಿತಿಯನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಹೊಂದಿಸಿಕೊಳ್ಳಬೇಕಾಗುತ್ತದೆ. ವಾರಾಂತ್ಯ ಶುಭವಿದೆ.
ಕನ್ಯಾ: ಧಾರ್ಮಿಕ ರಂಗದ ಚಟುವಟಿಕೆಗಳು ಸಂತಸದ ವಾತಾವರಣಕ್ಕೆ ಕಾರಣವಾಗಲಿವೆ. ಬ್ಯಾಂಕ್, ವಿತ್ತ ಖಾತೆಗೆ ಸಂಬಂಧಪಟ್ಟ ಕೆಲಸ ಕಾರ್ಯಗಳು ಸಫಲತೆ ತಂದುಕೊಡಲಿವೆ. ಕೆಲವೊಮ್ಮೆ ಕೆಲಸದ ಒತ್ತಡವು ಮಾನಸಿಕವಾಗಿ ಕಿರಿಕಿರಿ ಎನಿಸಲಿವೆ.
ತುಲಾ: ವ್ಯಾಪಾರ, ವ್ಯವಹಾರಗಳಲ್ಲಿ ಚೇತರಿಕೆಯಿಂದ ಆರ್ಥಿಕ ಸ್ಥಿತಿಯು ಸುಧಾರಿಸುತ್ತಲೇ ಹೋಗುತ್ತದೆ. ಹಿತಶತ್ರುಗಳ ಸಾಮರ್ಥ್ಯದ ಬಲೆಗೆ ಬೀಳುವ ಬದಲಿಗೆ ತಪ್ಪಿಸಿಕೊಂಡಲ್ಲಿ ಉತ್ತಮ. ಹೊಸ ಕಾರ್ಯಗಳ ಚಿಂತನೆಗೆ ಇದು ಸಕಾಲ.
ವೃಶ್ಚಿಕ: ಪದೇ ಪದೇ ಕಂಡುಬರುವ ಅಡ್ಡಿ-ಆತಂಕಗಳಿಂದ ಮನೋಚಾಂಚಲ್ಯ ಕಾಡಬಹುದು. ವ್ಯವಹಾರ, ವ್ಯಾಪಾರ ಕಾರ್ಯಕ್ಷೇತ್ರದಲ್ಲಿ ಆರ್ಥಿಕ ಸ್ಥಿತಿಯಲ್ಲಿ ಏರುಪೇರು ತೋರಿಬರಲಿದೆ. ವಿದ್ಯಾರ್ಥಿಗಳಿಗೆ ಪ್ರಯತ್ನಬಲದಿಂದ ಮುಂದುವರಿಯಬೇಕಾದೀತು.
ಧನು: ಅವಿವಾಹಿತರಿಗೆ ಕಂಕಣಬಲ ತೋರಿಬರಲಿದೆ. ದೇಹಾರೋಗ್ಯದ ಸ್ಥಿತಿಯಲ್ಲಿ ಅಭಿವೃದ್ಧಿ ಇರುವುದು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಂತಸ ತರುತ್ತದೆ. ಸಂಚಾರದಲ್ಲಿ ಕಾರ್ಯಸಿದ್ಧಿ ಇದೆ. ವಾರಾಂತ್ಯ ಶುಭವಿದೆ.
ಮಕರ: ಆರೋಗ್ಯವು ಉತ್ತಮವಿದ್ದು, ಮನೋನೆಮ್ಮದಿಯಿಂದ ಮಾನಸಿಕ ಶಾಂತಿ ದೊರಕಲಿದೆ. ಅಧಿಕಾರಿ ಹಾಗೂ ಉದ್ಯೋಗಸ್ಥರಿಗೆ ಶುಭವಾರ್ತೆ ಇದೆ. ದೇವತಾ ಕಾರ್ಯ ದಿಂದ ಮನೋಲ್ಲಾಸ. ಬಂಧುಮಿತ್ರರ ಆಗಮನ ಸಂತಸ ತರಲಿದೆ.
ಕುಂಭ: ಆತ್ಮೀಯರಿಂದ ಪುನಃ ಉತ್ತಮ ಸಹಕಾರವು ದೊರಕಲಿದೆ. ವೃತ್ತಿರಂಗದಲ್ಲಿ ಶತ್ರುಗಳಿಂದ ತೊಂದರೆ ಕಂಡುಬರಲಿದೆ. ಸರಕಾರದ ಕೆಲಸ ಕಾರ್ಯಗಳು ಸುಗಮವಾಗಿ ಸಾಗಲಿದೆ. ಶಕ್ತಿಮೀರಿ ದುಡಿದಲ್ಲಿ ಪ್ರಗತಿ ಸಾಧಿಸುವಿರಿ.
ಮೀನ: ಹಿತಶತ್ರುಗಳ ಸಮಯಸಾಧಕತನ ಆಗಾಗ ಘಾಸಿಗೊಳಿಸಲಿದೆ. ತಾಳ್ಮೆ, ಸಹನೆಯಿಂದ ಮುಂದುವರಿದಲ್ಲಿ ಮುನ್ನಡೆಗೆ ಸಾಧಕವಾಗುತ್ತದೆ. ಅವಿವಾಹಿತರಿಗೆ ಮನೋಕಾಮನೆಗಳು ಪೂರ್ಣಗೊಂಡಾವು.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಶಿಫಲ: ಈ ರಾಶಿಯವರು ವ್ಯಾಪಾರ, ವ್ಯವಹಾರದಲ್ಲಿ ಸದ್ಯದ ಮಟ್ಟಿಗೆ ಹೂಡಿಕೆ ಮಾಡುವುದು ಬೇಡ.
ಇಂದಿನ ಗ್ರಹಬಲ: ಈ ವಾರದಲ್ಲಿ ಈ ರಾಶಿಯವರಿಗೆ ಉತ್ತಮ ಫಲಗಳು ಗೋಚರಕ್ಕೆ ಬರುವುದು
ಇಂದಿನ ಗ್ರಹಬಲ:ಈ ರಾಶಿಯವರಿಗೆ ಬಂಧುಗಳ ಸಮಾಗಮದಿಂದ ಮಾನಸಿಕ ಸಮಾಧಾನ ಸಿಗಲಿದೆ.
ಇಂದಿನ ಗ್ರಹಬಲ: ಅವಿವಾಹಿತರ ವಿವಾಹ ಜೋಡಣೆ ಯೋಜನೆಗಳ ಅನುಷ್ಠಾನಕ್ಕೆ ಇದು ಸಕಾಲ.
ಇಂದಿನ ಗ್ರಹಬಲ: ಈ ರಾಶಿಯವರಿಗೆ ಗೃಹ ನಿರ್ಮಾಣದ ಕನಸು ಸಾಕಾರಗೊಳ್ಳಲಿದೆ.
MUST WATCH
ಹೊಸ ಸೇರ್ಪಡೆ
ಈ ವಾರ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹಾಜರಾಗುತ್ತಿಲ್ಲ ಸುದೀಪ್ : ಕಿಚ್ಚ ಸ್ಪಷ್ಟನೆ
ವಿದ್ಯಾರ್ಥಿಗಳ ಉಜ್ವಲ ಭವಿಷ್ಯದಲ್ಲಿ ಅಧ್ಯಾಪಕರ ಕೊಡುಗೆ ಅಪಾರ: ಎಸ್. ಪಿ. ಶೆಣೈ
ರಾಮಮಂದಿರ ನಿರ್ಮಾಣ ದೇಣಿಗೆ: 22 ಕೋಟಿ ಮೊತ್ತದ 15 ಸಾವಿರ ಚೆಕ್ ಗಳು ಬೌನ್ಸ್
“ಸಮಾಜದ ಜನರ ಅಭ್ಯುದಯ ಅಸೋಸಿಯೇಶನ್ನ ಧ್ಯೇಯ’
ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಟಿಟಿಡಿ ವಿವಾದದ ಬಗ್ಗೆ ಸಂಶೋಧನೆಯಾಗಲಿ: ಸಚಿವ ಲಿಂಬಾವಳಿ