ಆ್ಯಂಕರಿಂಗ್‌ ಭವಿಷ್ಯದ ಭರವಸೆ

Team Udayavani, Jun 12, 2019, 5:50 AM IST

ಪ್ರಸ್ತುತವಾಗಿ ಆ್ಯಂಕರಿಂಗ್‌ ಕೋರ್ಸ್‌ಗಳಿಗೆ ಬಹು ಬೇಡಿಕೆಯಿದೆ. ಹಾಗಾಗಿ ಕೆಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಆ್ಯಂಕರಿಂಗ್‌ ಸಂಬಂಧಿಸಿದ ಕೋರ್ಸ್‌ಗಳನ್ನು ಆರಂಭಿಸಿ, ತರಬೇತಿ ನೀಡಲಾಗುತ್ತದೆ. ಉತ್ತಮ ಸಂವಹನ ಕೌಶಲ, ಸಾಮಾನ್ಯ ಜ್ಞಾನ, ಆಂಗಿಕ ಭಾಷೆ, ಶಬ್ದ ಭಂಡಾರ ಇದ್ದರೆ ಆ್ಯಂಕರ್‌ ಆಗಬಹುದಾಗಿದೆ.

ಹಾಯ್‌..ಹಲೋ..ನಮಸ್ಕಾರ…ಎನ್ನುತ್ತಲೇ ಟಿವಿ ಪರದೆಯಲ್ಲಿ ಕಾಣಿಸಿಕೊಳ್ಳುವ, ನಿರರ್ಗಳವಾಗಿ ಪದಪುಂಜಗಳನ್ನೇ ತೇಲಿ ಬಿಡುವ ಹುಡುಗ-ಹುಡುಗಿಯರನ್ನು ಕಂಡಾಗಲೆಲ್ಲ ನಾವೂ ಅವರಂತಾಗಬೇಕು, ಅವರಂತೆ ಟಿವಿ ಪರದೆಯಲ್ಲಿ ಕಾಣಿಸಿಕೊಳ್ಳಬೇಕು, ಮೈಕ್‌ ಮುಂದೆ ನಿಂತು ನಿರರ್ಗಳ ಪದಮುತ್ತುಗಳನ್ನು ಉದುರಿಸಬೇಕೆಂಬ ಬಯಕೆ, ಆಸೆ ಚಿಗುರೊಡೆಯುವುದು ಸಾಮಾನ್ಯ. ಆದರೆ, ಅಂತಹ ಮಾತುಗಾರಿಕೆ ಕಲೆ ಸುಮ್ಮನೇ ಬಂದೀತೆ? ಆ್ಯಂಕರಿಂಗ್‌ ಅವಕಾಶ ದಕ್ಕಿಸಿಕೊಳ್ಳಲು ಅವಿರತ ಶ್ರಮವೂ ಅಗತ್ಯ ಎನ್ನುವುದು ಅಷ್ಟೇ ಪ್ರಾಮುಖ್ಯ.

ಉಪಗ್ರಹ ಆಧಾರಿತ ಚಾನೆಲ್‌ಗ‌ಳು ಈ ಯುಗದಲ್ಲಿ ಮಾಧ್ಯಮ ಲೋಕದಲ್ಲಿ ಕಾಲಿಟ್ಟ ಬಳಿಕ ಆ್ಯಂಕರಿಂಗ್‌ ಎಂಬುದು ಜನಪ್ರಿಯ ವೃತ್ತಿಯಾಗಿ ರೂಪು ತಳೆಯಿತು. ವಾರ್ತಾವಾಚಕರಾಗಿ, ಕಾರ್ಯಕ್ರಮಗಳ ನಿರೂಪಕರಾಗಿ ಅದೆಷ್ಟೋ ಯುವ ಜನತೆ ತಮ್ಮ ಮಾತಿನ ಮೋಡಿಯಿಂದಲೇ ಜನಪ್ರಿಯತೆ ಗಳಿಸಿಕೊಂಡರು. ಆ್ಯಂಕರಿಂಗ್‌ ವೃತ್ತಿ ಪ್ರಾಮುಖ್ಯತೆ ಗಳಿಸಿದಂತೆ ಅದಕ್ಕೆ ಬೇಡಿಕೆಯೂ ಹೆಚ್ಚಾಯಿತು. ಎಷ್ಟೆಂದರೆ, ಈ ವೃತ್ತಿ ಬೇಡಿಕೆ ಗಳಿಸುತ್ತಿದ್ದಂತೆ ಆ್ಯಂಕರಿಂಗ್‌ಗಾಗಿಯೇ ಕೆಲವೊಂದು ಅಲ್ಪಕಾಲದ ಕೋರ್ಸ್‌ಗಳೂ ಹುಟ್ಟಿಕೊಂಡವು.

ಆಂಗಿಕ ಭಾಷೆಗೂ ಪ್ರಾಮುಖ್ಯ
ಯಾವುದೇ ಕಾರ್ಯಕ್ರಮಗಳನ್ನು, ಸುದ್ದಿಗಳನ್ನು ಜನ ಸಾಮಾನ್ಯರಿಗೆ ಮನಮುಟ್ಟುವಂತೆ ತಿಳಿಸುವುದು ಆ್ಯಂಕರ್‌ ಎನಿಸಿಕೊಂಡವರ ಕರ್ತವ್ಯ. ಮುಖ್ಯವಾಗಿ ಒಬ್ಬ ಯಶಸ್ವಿ ನಿರೂಪಕನಾಗಿ ರೂಪು ತಳೆಯಬೇಕಾದರೆ ಮಾತುಗಾರಿಕೆಯ ಕಲೆಯೊಂದಿದ್ದರೆ ಸಾಲದು. ಮಾತನಾಡಿದ್ದನ್ನು ಜನಮಾನಸಕ್ಕೆ ತಲುಪಿಸುವುದು ಅಷ್ಟೇ ಮುಖ್ಯ. ಸಮರ್ಥ ಭಾಷಾ ಹಿಡಿತದೊಂದಿಗೆ ಆಂಗಿಕ ಭಾಷಾ ಹಿಡಿತವೂ ಇಲ್ಲಿ ಮುಖ್ಯವಾಗುತ್ತದೆ. ಶುದ್ಧ ಭಾಷಾಜ್ಞಾನ, ಉತ್ತಮ ಸಂವಹನ ಕೌಶಲ, ಪ್ರಾಪಂಚಿಕ ಜ್ಞಾನ, ಶಬ್ದಭಂಡಾರ, ಆಕರ್ಷಕ ಮೈಕಟ್ಟು, ಆರೋಗ್ಯಕರ ಮನಸ್ಸು, ಆತ್ಮವಿಶ್ವಾಸ ಇವಿಷ್ಟಿದ್ದರೆ ನಿರೂಪಣೆ ಕ್ಷೇತ್ರದಲ್ಲಿ ಪಳಗುವುದು ಸುಲಭ.

ಸಂಭಾವನೆಯೂ ಅಧಿಕ
ಬೇಡಿಕೆಯ ನಿರೂಪಕರಾಗಿ ಗುರುತಿಸಿಕೊಂಡರೆ ಹಲವಾರು ಕಾರ್ಯಕ್ರಮಗಳ ನಿರೂಪಣೆಗೆ ಸ್ವತಃ ಕಾರ್ಯಕ್ರಮ ಆಯೋಜಕರೇ ಆಹ್ವಾನಿಸುತ್ತಾರೆ. ಹೀಗೆ ನಿರೂಪಣೆಯಲ್ಲಿ ತೊಡಗಿಸಿಕೊಂಡರೆ ಒಂದು ನಿರೂಪಣೆಗೆ ಕನಿಷ್ಠ 10 ಸಾವಿರ ರೂ.ಗಳಿಂದ ಲಕ್ಷ ರೂ.ಗಳವರೆಗೂ ಸಂಪಾದಿಸಲು ಅವಕಾಶವಿದೆ. ಉದ್ಯೋಗ ನಿರ್ವಹಿಸುತ್ತಲೇ ಉಪ ವೃತ್ತಿಯಾಗಿ ನಿರೂಪಣೆಯನ್ನು ಆಯ್ಕೆ ಮಾಡಿಕೊಳ್ಳಬಹುದು.

ಕಾಲೇಜುಗಳಲ್ಲೇ ತರಬೇತಿ
ಬೆಂಗಳೂರಿನಂತಹ ಮಹಾನಗರಗಳಲ್ಲಿ ಆ್ಯಂಕರಿಂಗ್‌ಗೆಂದೇ ಅಲ್ಪಾವಧಿಯ ಕೆಲವು ಕೋರ್ಸ್‌ಗಳಿವೆ. ಆದರೆ ಮಂಗಳೂರಿನಲ್ಲಿ ಇಂತಹ ಕೋರ್ಸ್‌ ಗಳು ಇರುವುದಿಲ್ಲ. ಪ್ರಮುಖವಾಗಿ ಮಾಧ್ಯಮ ಕ್ಷೇತ್ರಕ್ಕೆ ಪೂರಕವಾದ ಕೋರ್ಸ್‌ ಗಳನ್ನು ಕೆಲವು ಖಾಸಗಿ ಸಂಸ್ಥೆಗಳಲ್ಲಿಯೇ ನೀಡಲಾಗುತ್ತದೆ. ಪತ್ರಿಕೋದ್ಯಮ ತರಗತಿಗಳನ್ನು ಹೊಂದಿರುವ ಕಾಲೇಜುಗಳಲ್ಲಿ ಪ್ರಾಯೋಗಿಕ ಶಿಕ್ಷಣವಾಗಿ ಇದನ್ನು ಕಲಿಸಲಾಗುತ್ತದೆ. ಉಜಿರೆ ಎಸ್‌ಡಿಎಂ ಕಾಲೇಜು, ಪುತ್ತೂರು ವಿವೇಕಾನಂದ ಕಾಲೇಜು ಮತ್ತು ಇತರ ಕೆಲವು ಕಾಲೇಜುಗಳು ಪತ್ರಿಕೋದ್ಯಮ ವಿಭಾಗದಲ್ಲಿಯೇ ತಮ್ಮದೇ ಆದ ಸ್ಟುಡಿಯೋವೊಂದನ್ನು ಹೊಂದಿದ್ದು, ಇಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಭಾಗವಾಗಿ ಆ್ಯಂಕರಿಂಗ್‌ ತರಬೇತಿಯನ್ನೂ ನೀಡಲಾಗುತ್ತದೆ. ಮಂಗಳೂರು ಸೈಂಟ್‌ ಅಲೋಶಿಯಸ್‌ ಕಾಲೇಜು, ಬೆಸೆಂಟ್‌ ಕಾಲೇಜುಗಳಲ್ಲಿಯೂ ಪತ್ರಿಕೋದ್ಯಮ ತರಗತಿಯಲ್ಲಿ ಆ್ಯಂಕರಿಂಗ್‌ ಕುರಿತು ಪ್ರಾಥಮಿಕ ಮಾಹಿತಿ ಒದಗಿಸುವ ವ್ಯವಸ್ಥೆ ಇರುತ್ತದೆ. ಇನ್ನು ರಾಜ್ಯ ಮಟ್ಟದ ಸುದ್ದಿವಾಹಿನಿಗಳು ತಮ್ಮ ಸಂಸ್ಥೆಗಳಲ್ಲಿಯೇ ಆ್ಯಂಕರಿಂಗ್‌ ತರಬೇತಿಯನ್ನು ಆರಂಭಿಸಿ ರುವುದು ಆ್ಯಂಕರಿಂಗ್‌ ಬಗ್ಗೆ ಕನಸು ಕಾಣುತ್ತಿರುವ ಯುವ ಸಮುದಾಯಕ್ಕೆ ವರವಾಗಿದೆ.

-   ಧನ್ಯಾ ಬಾಳೆಕಜೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಲೈಬ್ರರಿ ಕೇವಲ ಗ್ರಂಥ ಸಂಗ್ರಹಾಲಯದ ಕೋಣೆಯಲ್ಲ. ಅದೊಂದು ಜ್ಞಾನದ ಆಗರಗಳನ್ನು ಹೊತ್ತ ದೇವಾಲಯ. ಮಾಹಿತಿ ಕೊಡುವ, ಮಾಹಿತಿ ಹೊತ್ತ ಗ್ರಂಥಗಳನ್ನು ಸೂಕ್ತವಾಗಿ ಒದಗಿಸಿಕೊಡುವ...

  • ಓದಿನ ಜತೆ-ಜತೆಗೆ ಅರೆಕಾಲಿಕ ಉದ್ಯೋಗವನ್ನು ಗಳಿಸಬೇಕು ಎಂದು ವಿದ್ಯಾರ್ಥಿಗಳ ತುಡಿತ ಇದ್ದೇ ಇರುತ್ತದೆ. ಅಂಥಹ ಆ ಹಲವು ಅವಕಾಶಗಳಲ್ಲಿ ಇಂದು ಜಿಮ್‌ ಟ್ರೈನರ್‌ಗಳಿಗೆ...

  • ಪ್ರತಿಯೊಬ್ಬರಲ್ಲೂ ಒಂದು ಪ್ರತಿಭೆ ಇದ್ದೇ ಇರುತ್ತೇ, ಸರಿಯಾದ ವೇದಿಕೆ ಮತ್ತು ಸರಿಯಾದ ಸಮಯ ಸಿಕ್ಕಾಗ ಮಾತ್ರ ಅಂತಹ ಪ್ರತಿಭೆಗಳ ಅನಾವರಣಗೊಳ್ಳುತ್ತವೆ. ಶಾಲೆ,...

  • ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರಿಕನು ಕಾನೂನಿನ ಅರಿವು ಹೊಂದಿರುವುದು ಅಗತ್ಯ. ಮಾನವ ಸಂಘಜೀವಿ ಆಗಿರುವವರೆಗೂ ಕಾನೂನು ಅಸ್ತಿತ್ವ ದಲ್ಲಿರುತ್ತದೆ....

  • ಕಾಮಿಕ್‌ ಆರ್ಟ್‌ ಅಥವಾ ಕಾಟೂìನ್‌ ಎಂಬುದು ಒಂದು ಕಲೆ. ಚಿತ್ರಗಳ ಮೂಲಕ ಹಲವಾರು ಭಾವನೆಗಳನ್ನು ವ್ಯಕ್ತಪಡಿಸುವುದು ಕಾಮಿಕ್‌ ಆರ್ಟ್‌ನ ವೈಶಿಷ್ಟ. ಹಾಸ್ಯ ಮಿಶ್ರಿತ...

ಹೊಸ ಸೇರ್ಪಡೆ