ಸದ್ಬಳಕೆಯಾಗಲಿ  ವಾರ್ಷಿಕ ರಜೆ 


Team Udayavani, Mar 20, 2019, 7:38 AM IST

20-march-8.jpg

ರಜೆ ಅಂದರೆ ಮಜಾ ಎಂಬ ಮಾತಿದೆ. ಆದರೆ ರಜೆಯನ್ನು ಜ್ಞಾನಕ್ಕೆ ಪೂರಕವಾಗಿ ವಿನಿಯೋಗಿಸುವ ಕಾರ್ಯ ಆಗಬೇಕಿದೆ. ದೀರ್ಘ‌ಕಾಲದ ಬೇಸಗೆ ರಜೆ  ಹತ್ತಿರದಲ್ಲೇ ಇರುವುದರಿಂದ ಇದರ ಸದುಪಯೋಗಪಡಿಸುವತ್ತ ವಿದ್ಯಾರ್ಥಿಗಳು ಯೋಜನೆ ರೂಪಿಸಿಕೊಳ್ಳಬೇಕು. ಜೀವನ, ಕೌಶಲ ಹಾಗೂ ಜ್ಞಾನ ವೃದ್ಧಿಗೆ ಪೂರಕವಾಗಿ ನಡೆಯುವ ವಿವಿಧ ತರಬೇತಿಗಳ ಪ್ರಯೋಜನ ಪಡೆದುಕೊಳ್ಳುವ ಕಾರ್ಯವಾಗಲಿ.

ಪರೀಕ್ಷೆಯಲ್ಲಿ ಬ್ಯುಸಿಯಿರುವ ವಿದ್ಯಾರ್ಥಿಗಳಿಗೆ ಇನ್ನೇನು ಕೆಲ ದಿನಗಳಲ್ಲಿ ರಜೆ ಪ್ರಾರಂಭವಾಗುತ್ತದೆ. ರಜೆ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ. ರಜಾದ ಮಜಾವನ್ನು ಯಾವ ರೀತಿ ಕಳೆಯಬೇಕು ಎಂಬ ಯೋಜನೆ ಈಗಾಗಲೇ ಎಲ್ಲ ವಿದ್ಯಾರ್ಥಿಗಳ ಮನದಲ್ಲಿ ಸಿದ್ಧವಾಗಿರುತ್ತದೆ.

ಬೇಸಗೆ ರಜಾ ಅಂದರೆ ಅದು ದೀರ್ಘ‌ ಕಾಲೀನ ರಜಾವಾಗಿದ್ದು, ಇದನ್ನು ಪರಿಪೂರ್ಣವಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಒಂದೆಡೆ ಆಟ, ಮೋಜು, ಮಸ್ತಿ ಇದ್ದರೆ ಮತ್ತೂಂದೆಡೆ ಪಠ್ಯೇತರ ಚಟುವಟಿಕೆಯತ್ತ, ವಿಷಯ ಜ್ಞಾನ ಸಂಪಾದಿಸಲು ಉಪಯೋಗವಾಗಬೇಕು. ಈ ನಿಟ್ಟಿನಲ್ಲಿ ರಜಾವನ್ನು ಯಾವ ರೀತಿ ಕಳೆಯಬಹುದು ಎಂಬುವುದರ ಬಗ್ಗೆ ಪರೀಕ್ಷೆ ಮುಗಿದ ತತ್‌ ಕ್ಷಣ ವಿದ್ಯಾರ್ಥಿಗಳು ವೇಳಾಪಟ್ಟಿಯನ್ನು ಸಿದ್ಧಪಡಿಸುವುದು ಉತ್ತಮ.  ರಜಾ ಸಮಯದಲ್ಲಿ ಅನೇಕ ಸಂಘ-ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ವ್ಯಕ್ತಿತ್ವ ವಿಕ ಸನ, ವೃತ್ತಿ ತರಬೇತಿಯಂಥ ಶಿಬಿರಗಳನ್ನು ಆಯೋಜನೆ ಮಾಡುತ್ತವೆ. ಅರ್ಹ ವಿದ್ಯಾರ್ಥಿಗಳು ಇದನ್ನು ಸದ್ಭಳಕೆ ಮಾಡಿಕೊಳ್ಳಬಹುದು.

ರಜಾ ದಿನಗಳಲ್ಲಿ ವಿವಿಧ ಕೌಶಲಗಳ ತರಬೇತಿ ನೀಡುವಲ್ಲಿ ವಿವಿಧ ಸಂಘ ಸಂಸ್ಥೆಗಳು ಪೂರಕ ವ್ಯವಸ್ಥೆ ಕಲ್ಪಿ ಸುತ್ತಿ ವೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಗ್ಲಿಷ್‌ ಭಾಷೆ ಜ್ಞಾನ ಅತ್ಯಗತ್ಯ. ಈ ನಿಟ್ಟಿನಲ್ಲಿ ರಜಾ ಸಮಯದಲ್ಲಿ
ನ್ಪೋಕನ್‌ ಇಂಗ್ಲಿಷ್‌ ತರಗತಿಗೆ ಹೋದರೆ ಜ್ಞಾನ ಮತ್ತಷ್ಟು ವೃದ್ಧಿಯಾಗುತ್ತದೆ.
ಅಲ್ಲದೆ, ಕಠಿನ ಶಬ್ದಗಳಲ್ಲಿಯೂ ಪರಿಪೂರ್ಣತೆ ಬೆಳೆಯುತ್ತದೆ. ಹಲವು ಕಂಪ್ಯೂಟರ್‌ ತರಬೇತಿ ಕೇಂದ್ರಗಳು ಈ ಅವಧಿಯಲ್ಲಿ ವಿಶೇಷ ಕಂಪ್ಯೂಟರ್‌ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಅಲ್ಪಾವಧಿಯ ವಿವಿಧ ಕೋರ್ಸ್‌ಗಳೊಂದಿಗೆ ಬೇಸಿಕ್‌ ಕಂಪ್ಯೂಟರ್‌, ಟ್ಯಾಲಿ ಸಹಿತ ಮತ್ತಿತರ ವಿಷಯಗಳಲ್ಲಿ ತರಬೇತಿ ಕೊಟ್ಟು ಪ್ರಮಾಣ ಪತ್ರಗಳನ್ನು ನೀಡುತ್ತವೆ. ಇತ್ತೀಚೆಗೆ ಎಲ್ಲ ಶಾಲಾ- ಕಾಲೇಜುಗಳಲ್ಲಿಯೂ ಕಂಪ್ಯೂಟರ್‌ ಶಿಕ್ಷಣವಿರುವುದರಿಂದ ರಜಾ ಅವಧಿಯಲ್ಲಿ ಇದರ ಬಗ್ಗೆ ಹೆಚ್ಚಿನ ಕಲಿಕೆಯು ಭವಿಷ್ಯಕ್ಕೆ ಸಹಕಾರಿಯಾಗುವುದು.

ವಿದ್ಯಾರ್ಥಿಗಳಿಗೆ ಬೇಸಗೆ ರಜಾ ಬಂದರೆ ಸಾಕು ಕ್ರೀಡಾಸಕ್ತರಿಗೆಂದು ವಿಶೇಷ ತರಬೇತಿಗಳು ಆರಂಭವಾಗುತ್ತದೆ. ಅದರಲ್ಲಿಯೂ ಮಂಗಳೂರು ನಗರದಲ್ಲಿ ಈಜು, ಕ್ರಿಕೆಟ್‌ ಕಲಿಕೆ, ಸ್ಕೇಟಿಂಗ್‌ ಸಹಿತ ಹಲ ವಾರು ತರ ಬೇತಿ ಶಿಬಿರಗಳು ಆರಂಭಗೊಳ್ಳುತ್ತವೆ. ಪಾಠದ ಜತೆ ಆಟದಲ್ಲಿಯೂ ಆಸಕ್ತಿ ಇರುವ ವಿದ್ಯಾರ್ಥಿಗಳು ರಜಾ ಸಮಯವನ್ನು ಕ್ರೀಡಾ ಕಲಿಕೆಗೆ ಮೀಸಲಿಟ್ಟುಕೊಳ್ಳಬಹುದು. ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸುವ ವಿದ್ಯಾರ್ಥಿಗಳಿಗೆ ಪೂರಕವಾಗುವಂತೆ ನೃತ್ಯ ತರಬೇತಿ, ಯಕ್ಷಗಾನ, ಸಂಗೀತ ತರಬೇತಿಗಳು ಇನ್ನೇನು ಕೆಲ ದಿನಗಳಲ್ಲಿ ಆರಂಭಗೊಳ್ಳಲಿವೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಇನ್ನು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಕಲಿಕಾ ತರಬೇತಿಗಳು ಪ್ರಾರಂಭವಾಗಲಿದೆ. ಇವುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಮುಂದಿನ ಹಂತದ ಪರೀಕ್ಷೆಗೆ ಸಹಕಾರಿಯಾಗಲಿದೆ.

ಪಾಠದ ಜತೆ ಆಟವೂ ಇರಲಿ
ರಜೆಯನ್ನು ಕೇವಲ ಪಠ್ಯೇತರ ಚಟುವಟಿಕೆಗಳಿಗೆ ಮಾತ್ರ ಸೀಮಿತ ಮಾಡುವುದು ಬೇಡ. ಕೆಲವೊಂದು ಸಮಯ ಸಂಬಂಧಿಕರ, ಸ್ನೇಹಿತರ ಜತೆ ಕಳೆಯಬಹುದು. ಅಲ್ಲದೇ, ಆಟ, ಮೋಜು ಮಸ್ತಿಯಲ್ಲಿಯೂ ದಿನ ಕಳೆಯಬಹುದು. ಮನೆಯವರ ಜತೆ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು. ಬೀಚ್‌, ದೇವಸ್ಥಾನ, ಮಸೀದಿ, ಚರ್ಚ್‌ ಸಹಿತ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ ರಜಾ ಸಮಯವನ್ನು ಕಳೆಯಬಹುದು. 

ರಜಾದಲ್ಲಿ ಟ್ಯೂಶನ್‌
ಬೇಸಗೆ ರಜೆಯಲ್ಲಿ ಟ್ಯೂಶನ್‌ ತರಬೇತಿಗಳು ಪ್ರಾರಂಭವಾಗುತ್ತವೆ. ಅದರಲ್ಲಿಯೂ ಮುಂದಿನ ತರಗತಿಗಳಿಗೆ ಪೂರಕವಾಗುವ ದೃಷ್ಟಿಯಿಂದ ತರಬೇತಿ ಆರಂಭವಾಗಲಿದೆ. ವಿದ್ಯಾರ್ಥಿಗಳು ಪಠ್ಯದಲ್ಲಿ ಮತ್ತಷ್ಟು ಜ್ಞಾನ ಸಂಪಾದಿಸಿಕೊಳ್ಳಲು ಇಂಥ ತರಬೇತಿಗೆ ಸೇರಿಕೊಳ್ಳಲು ಅವಕಾಶವಿದೆ. ತರಬೇತಿ ಪಡೆದರೆ ತರಗತಿಯಲ್ಲಿ ಮುಂದಿನ ಕಲಿಕೆಗೆ ಇದು ಸಹಕಾರಿಯಾಗುತ್ತದೆ. 

ಗಿಡ ನೆಡಲು ಅಭ್ಯಾಸ
ವಿದ್ಯಾರ್ಥಿಗಳು ರಜೆಯಲ್ಲಿ ಪರಿಸರಕ್ಕೆ ಕಿಂಚಿತ್ತು ಉಪಯೋಗವಾಗುವಂತಹ ಕೆಲಸ ಮಾಡಿದರೆ ರಜೆಯನ್ನು ಪರಿಪೂರ್ಣವಾಗಿ ಕಳೆದ ಧನ್ಯತೆ ನಮ್ಮಲ್ಲಿರುತ್ತದೆ. ಪರಿಸರ ಸಂರಕ್ಷಣೆ ಎಲ್ಲರ ಹೊಣೆಯಾಗಿದ್ದು, ಕುಂಡದಲ್ಲಿ ಒಂದೋ, ಎರಡೋ ಗಿಡಗಳನ್ನು ನೆಟ್ಟು ಅದರ ನಿರ್ವಹಣೆಯನ್ನು ಹೆತ್ತವರು, ಶಿಕ್ಷಕರು ವಿದ್ಯಾರ್ಥಿಗಳಿಗೆ ಬಿಡಬೇಕು. ಇದರಿಂದಾಗಿ ಅವರಲ್ಲಿ ಸಣ್ಣ ಮಟ್ಟಿನ ಜವಾಬ್ದಾರಿ ಬಂದಂತಾಗುತ್ತದೆ.

ನವೀನ್‌ ಭಟ್‌ ಇಳಂತಿಲ

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.