ಕಾಲೇಜು ಕ್ಯಾಂಪಸ್‌..!

ವ್ಯಕ್ತಿತ್ವ ವಿಕಸನಕ್ಕೆ ಹಲವು ಅವಕಾಶ ಸೃಷ್ಟಿಸುವ

Team Udayavani, May 23, 2019, 6:00 AM IST

ಕಾಲೇಜು ಕ್ಯಾಂಪಸ್‌ ಎಂದರೆ ಮೋಜು ಮಸ್ತಿಗೆ ಮಾತ್ರ ಸೀಮಿತವಲ್ಲ. ಅಲ್ಲಿ ವ್ಯಕ್ತಿತ್ವ ವಿಕಸನಕ್ಕೂ ಸಾಕಷ್ಟು ಅವಕಾಶಗಳಿವೆ. ಅದರ ಸದ್ಭಳಕೆ ವಿದ್ಯಾರ್ಥಿಗಳ ಕೈಯಲ್ಲಿದೆ. ಭಿತ್ತಿ ಪತ್ರಿಕೆ, ವಿವಿಧ ಸಂಘಗಳು ವಿದ್ಯಾರ್ಥಿಗಳ ಬೆಳವಣಿಗೆಗೆ ಸಹಕಾರಿ

ಕಾಲೇಜು ಶಿಕ್ಷಣದಲ್ಲಿ ಅವಕಾಶಗಳಿಗೆ ಬರವಿಲ್ಲ. ಕಲಿಕೆ, ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ಹಲವು ಸಂಘ ಸಂಸ್ಥೆಗಳು ಕಾಲೇಜಿನೊಳಗೆ ಮತ್ತು ಹೊರ ಭಾಗದಲ್ಲಿವೆ. ಅವುಗಳ ಸದ್ಭಳಕೆಗೆ ಅನೇಕ ವೇದಿಕೆಗಳು ಕೂಡ ಇವೆ. ಈ ಕಾಲಘಟ್ಟದಲ್ಲಿ ಪೋಷಕರು ಮಕ್ಕಳ ಆಸಕ್ತಿಗೆ ಅನುಗುಣವಾಗಿ ಅವಕಾಶ ಕಲ್ಪಿಸಿಕೊಡುತ್ತಾರೆ.

ಭಿತ್ತಿ ಪತ್ರಿಕೆ, ಗೋಡೆ ಮ್ಯಾಗಜಿನ್‌ಗಳು ಬರೆಹಗಾರರನ್ನು, ಸಾಹಿತ್ಯ ಆಸಕ್ತರನ್ನು, ಕಥೆ, ಕವನ, ಪ್ರಬಂಧಕಾರರನ್ನು ಸೃಷ್ಟಿಸುತ್ತಿವೆ. ಇದು ಭವಿಷ್ಯದಲ್ಲಿ ಬರಹ ಕ್ಷೇತ್ರದಲ್ಲಿ ಸಾಧನೆ ತೋರುವವರಿಗೆ ಒಂದು ಪೂರ್ವತಯಾರಿ ಇದ್ದಂತೆ. ಕನ್ನಡ ಸಂಘಗಳ ಸ್ಥಾಪಿಸಿ ಕ್ಷೇತ್ರ ಪರ್ಯಟನೆ, ಅಧ್ಯಯನ ಶಿಬಿರ, ಮಾಧ್ಯಮ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವ ಅನುಭವ ಸಮಾಜದಲ್ಲಿ ಗುರುತಿಸಿಕೊಳ್ಳಲು ಅನುಕೂಲ ಸೃಷ್ಟಿಸಬಹುದು.

ಸಾಂಸ್ಕೃತಿಕ, ಸಾಹಿತಿಕ ಸಂಘಗಳು, ಕೆಲವು ಕೋರ್ಸ್‌ಗಳಲ್ಲಿ ಕಡ್ಡಾಯವಾಗಿ ಇರಬೇಕಾಗಿರುವ ಸಂಘಗಳು ವ್ಯಕ್ತಿತ್ವ ವಿಕಸನಕ್ಕೆ ಪೂರಕ. ಮುಖ್ಯವಾಗಿ ಸಮಾಜ ಕಾರ್ಯ ಅಧ್ಯಯನ ಮಾಡುವ ವಿದ್ಯಾರ್ಥಿಗಳು ವರ್ಷದ ಅರ್ಧ ಭಾಗ ಅಧ್ಯಯನ ಪ್ರವಾಸ, ಕಾರ್ಯಕ್ರಮ ಆಯೋಜನೆಯಲ್ಲೇ ಬ್ಯುಸಿಯಾಗಿರುತ್ತಾರೆ. ಇದರಿಂದ ನಾಯಕತ್ವ, ಮಾತುಗಾರಿಕೆ, ಭಯ ದೂರವಾಗುವಿಕೆ ಅನುಕೂಲಗಳಿವೆ. ಸಂಘಟನೆ ಚಾತುರ್ಯವು ಅರಿತು ರಾಜಕೀಯ ಸಹಿತ ಇತ್ಯಾದಿ ಕ್ಷೇತ್ರಗಳಲ್ಲಿ ಪಳಗಲು ಸಾಧ್ಯವಾಗಬಹುದು.

ಈಗ ಕಾಲೇಜು ಕ್ಯಾಂಪಸ್‌ಗಳಲ್ಲಿ ಅಂತಾರಾಷ್ಟ್ರೀಯ ಸೇವಾ ಸಂಸ್ಥೆಗಳಾದ ರೋಟರಿ, ಜೇಸಿಯಂತಹ ಸಂಘಗಳು ವಿದ್ಯಾರ್ಥಿಗಳಿಗೆಂದೇ ಜ್ಯೂನಿಯರ್‌ ಸಂಘಗಳನ್ನು ಸೃಷ್ಟಿಸಿವೆ. ಅಲ್ಲಿ ವರ್ಷಕೊಮ್ಮೆ ಪದಾಧಿಕಾರಿಗಳನ್ನು ಆರಿಸಿ, ಒಂದಷ್ಟು ಕಾರ್ಯಚಟುವಟಿಕೆ ನೀಡಲಾಗುತ್ತದೆ. ಅದನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವ ಗುರಿ ನೀಡಲಾಗುತ್ತದೆ. ಗುರಿ ಮೀರಿದ ಸಾಧನೆ ತೋರಿದ ಸಂಘಗಳನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತದೆ. ಈ ಮೂಲಕ ಸಮಾಜಮುಖೀ ಕಾರ್ಯಕ್ಕೆ ಒತ್ತು ನೀಡಲಾಗುತ್ತದೆ.

ಎನ್ಸೆಸ್ಸೆಸ್‌, ಎನ್‌ಸಿಸಿ, ಸ್ಫೋರ್ಟ್ಸ್ ಸಂಘಗಳು ಸೈನ್ಯ, ಪೊಲೀಸ್‌ ಮೊದಲಾದ ಹುದ್ದೆಗಳಿಗೆ ವಿದ್ಯಾರ್ಥಿ ಸಮುದಾಯವನ್ನು ಸೆಳೆಯಲು, ಸಜ್ಜುಗೊಳಿಸಲು ಸಹಕಾರಿ. ದುರ್ಘ‌ಟನೆ, ಪ್ರಾಕೃತಿಕ ಅವಘಡ ಉಂಟಾದ ಸಂದರ್ಭ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಧುಮ್ಮುಕ್ಕಿ ಸಹಾಯಹಸ್ತ ಚಾಚಿದ ಉದಾಹರಣೆ ಬೇಕಾದಷ್ಟಿವೆ.

ಸದ್ಭಳಕೆ ಪ್ರಮಾಣ ಇಳಿಮುಖ
ವ್ಯಕ್ತಿತ್ವ ವಿಕಸನಕ್ಕೆ ದಾರಿಗಳು ಹಲವು. ಅದು ಯುವಜನತೆ ಯನ್ನು ಸೆಳೆಯುವ ಪ್ರಮಾಣ ಹಿಂದಿಗಿಂತ ಹೆಚ್ಚು. ಆದರೆ ಸದ್ಭಳಕೆ ಪ್ರಮಾಣ ಕಡಿಮೆ. ಬಡತನ, ಆರ್ಥಿಕ ಸಮಸ್ಯೆಗಳು ಈಗಿನ ಪೀಳಿಗೆಯ ಯುವ ಸಮುದಾಯಕ್ಕೆ ಅಷ್ಟಾಗಿ ಕಾಡದಿರುವ ಕಾರಣ ಬದುಕು ರೂಪಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಈ ಅವಕಾಶ ಬಳಕೆ ಆಗುವುದು ಅಷ್ಟಕಷ್ಟೆ. ನೇಮ್‌ ಆ್ಯಂಡ್‌ ಫೇಮ್‌ ನೆಪದಲ್ಲಿ ಸಂಘಟನೆ ಚುಕ್ಕಾಣಿ ಹಿಡಿಯುವವರೆ ಅಧಿಕ.

-  ಕಿರಣ್‌ ಕುಂಡಡ್ಕ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

 • ಶಿಕ್ಷಣ ಎನ್ನುವುದು ಪ್ರತಿಯೊಬ್ಬರಿಗೂ ಮುಖ್ಯ. ಅದರ ಜತೆಯಲ್ಲಿ ಸಾಮಾಜಿಕ ಮೌಲ್ಯಗಳು ಕೂಡ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮೌಲ್ಯಗಳು ಪ್ರಮುಖವಾಗಿ ನಮ್ಮನ್ನು...

 • ಟೆಕ್ನಾಲಜಿಗಳು ಮುಂದುವರಿದಂತೆ ಉದ್ಯೋಗಾವಕಾಶಗಳು ಹೆಚ್ಚಾಗುತ್ತಿವೆ. ವಿವಿಧ ಕೋರ್ಸ್‌ಗಳೂ ಆರಂಭವಾಗುತ್ತಿವೆ. ಟೆಕ್ನಾಲಜಿಗಳಲ್ಲಿ ಆಸಕ್ತಿಯಿರುವವರು ಟೆಕ್ನಾಲಜಿಗೆ...

 • 21ನೇ ಶತಮಾನದಲ್ಲಿ ಎಲ್ಲರೂ ಬಯಸುವುದು ಆನ್‌ಲೈನ್‌ ವಹಿವಾಟು. ಪುಸಕ್ತ, ಪೆನ್ನಿನಲ್ಲಿ ನಡೆಯುತ್ತಿದ್ದ ವ್ಯವಹಾರ ಇಂದು ಕಂಪ್ಯೂಟರ್‌ ಸಾಫ್ಟ್ವೇರ್‌ಗಳಿಗೆ ವರ್ಗವಣೆಗೊಂಡಿದೆ....

 • ಮಾರುಕಟ್ಟೆಯಲ್ಲಿ, ಮನೆಗಳಲ್ಲಿ ಅಲಂಕಾರಕ್ಕಾಗಿ ಬಳಸುವ ಪಾಂಟ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆಲಂಕಾರಿಕ ವಸ್ತುಗಳ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಪಾಟ್‌ ಪೈಂಟಿಂಗ್‌ನಂತಹ...

 • ಸಮಯ ಎನ್ನುವುದು ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಅತಿ ಅಗತ್ಯ. ಸಮಯ ಯಾವತ್ತೂ ನಿಲ್ಲುವುದಿಲ್ಲ. ಅದು ಓಡುತ್ತೀರುತ್ತದೆ. ವಿದ್ಯಾರ್ಥಿ ಜೀವನದಲ್ಲಂತೂ ಸಮಯದ...

ಹೊಸ ಸೇರ್ಪಡೆ

 • ಸುರೇಶ ಯಳಕಪ್ಪನವರ ಹಗರಿಬೊಮ್ಮನಹಳ್ಳಿ: ಕಳೆದ ವರ್ಷ ತುಂಗಾಭದ್ರಾ ನದಿ ತುಂಬಿದ್ದರಿಂದ ತಾಲೂಕಿನ ಹಿನ್ನೀರು ಪಾತ್ರದ ರೈತರು ಹರ್ಷ ವ್ಯಕ್ತಪಡಿಸಿದ್ದರು. ಆದರೆ...

 • ಹುಬ್ಬಳ್ಳಿ: ಮಹಾನಗರ ಪಾಲಿಕೆ ಹಳೇ ಹುಬ್ಬಳ್ಳಿಯನ್ನು ನಿರ್ಲಕ್ಷಿಸಿದೆ ಎಂಬುದು ಇಲ್ಲಿನ ನಿವಾಸಿಗಳ ದೂರು. ಇಲ್ಲಿನ ರಸ್ತೆಗಳ ದುಸ್ಥಿತಿಯನ್ನು ಗಮನಿಸಿದರೆ ನಿವಾಸಿಗಳ...

 • •ವೆಂಕೋಬಿ ಸಂಗನಕಲ್ಲು ಬಳ್ಳಾರಿ: 'ಬಡವರ ಬಂಧು' ಯೋಜನೆಯಡಿ ಬೀದಿಬದಿ ವ್ಯಾಪಾರಿಗಳಿಗೆ ನೀಡಲಾಗಿದ್ದ ಸಾಲ ಸಮರ್ಪಕವಾಗಿ ಮರುಪಾವತಿಯಾಗದ ಹಿನ್ನೆಲೆಯಲ್ಲಿ ಯೋಜನೆಯನ್ನೇ...

 • ದಾವಣಗೆರೆ: ಕುಂದುವಾಡ ಕೆರೆಯನ್ನು ಪ್ರವಾಸಿ ತಾಣ....ಎಂದು ಘೋಷಣೆ ಮಾಡಬೇಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎನ್‌. ಶಿವಮೂರ್ತಿ...

 • ಹುಬ್ಬಳ್ಳಿ: ಬೇಂದ್ರೆ ಸಾರಿಗೆಯ ರಹದಾರಿ ಪರವಾನಗಿ ನವೀಕರಿಸದಂತೆ ಒತ್ತಾಯಿಸಿ ಕೆಎಸ್‌ಆರ್‌ಟಿಸಿ ಸ್ಟಾಫ್‌ ಆ್ಯಂಡ್‌ ವರ್ಕರ್ಸ್‌ ಫೆಡರೇಶನ್‌ ನೇತೃತ್ವದಲ್ಲಿ...

 • ಜಗಳೂರು: ಭದ್ರಾ ಮೇಲ್ದಂಡೆ ಜಗಳೂರು ಶಾಖಾ ಕಾಲುವೆಯ ಮಾರ್ಗ ಬದಲಾವಣೆ ಮಾಡದಂತೆ ಮತ್ತು ಸಮಗ್ರ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ಭದ್ರಾ ಮೇಲ್ದಂಡೆ ನೀರಾವರಿ...