ಅಡುಗೆ ಹವ್ಯಾಸ , ಇದಕ್ಕಿದೆ ಸದವಕಾಶ 

Team Udayavani, Dec 26, 2018, 1:23 PM IST

26-december-8.gif

ಹೊಟೇಲ್‌ ಫ‌ುಡ್‌ ಯಾರಿಗಿಷ್ಟವಿಲ್ಲ ಹೇಳಿ. ಹೋದ ತತ್‌ ಕ್ಷಣ ವೆರೈಟಿ ಖಾದ್ಯ, ತಿಂಡಿ, ತಿನಸುಗಳು ನಮ್ಮ ಟೇಬಲ್‌ ಮುಂದೆ ಇರುತ್ತವೆ. ಅದರಂತೆಯೇ ಈ ರುಚಿಯ ಮುಂದೆ ಅಮ್ಮನ ಕೈರುಚಿಯೂ ಕೆಲವರಿಗೆ ಹಿಡಿಸುವುದಿಲ್ಲ.

ಹೌದು, ಬಾಣಸಿಗ ಅಥವಾ ಚೆಫ್ ಈಗ ಹೊಟೇಲ್‌ ಉದ್ಯಮದಲ್ಲಿ ದೊಡ್ಡ ಪಾತ್ರವನ್ನು ನಿರ್ವಹಿಸುತ್ತಿದ್ದಾನೆ. ಹಿಂದಿನ ಕಾಲದಲ್ಲಿ ಅಡುಗೆ ಮಾಡುವ ವೃತ್ತಿಯಿಂದ ದೂರ ವಿದ್ದ ಪುರುಷರು ಇಂದು ಇದನ್ನೇ ವೃತ್ತಿಯನ್ನಾಗಿಸಿದ್ದಾರೆ. ಮಾತ್ರವಲ್ಲದೆ ಹೊಟೇಲ್‌ ಉದ್ಯಮ ದೊಡ್ಡ ವ್ಯವಹಾರವಾಗಿ ಬೆಳೆದಿದೆ.

ಅಡುಗೆ ಮನೆಯಲ್ಲಿ ಅಮ್ಮ ಅಡುಗೆ ಮಾಡುವಾಗ ಅದನ್ನು ನೋಡಿ ಕಲಿಯುತ್ತಿದ್ದ ಕಾಲ ಈಗ ಬದಲಾಗಿದೆ. ಅಂದು ಅಡುಗೆ ಮಾಡುವುದನ್ನು ಹವ್ಯಾಸ ಮಾಡಿಕೊಂಡಿದ್ದವರನ್ನು ಗೇಲಿ ಮಾಡುತ್ತಿದ್ದವರು, ಇಂದು ಕಣ್ಣರಳಿಸಿ ಚೆಫ್ ಮಾಡುವ ಹೊಸ ರೆಸಿಪಿಗಳನ್ನು ನೋಡುವಂತಾಗಿದೆ. ಹೀಗಾಗಿಯೇ ಅಡುಗೆ ಕಲಿಯುವ ಅಥವಾ ಬಾಣಸಿಗನಾಗಲು ಹಲವು ಕೋರ್ಸ್‌ಗಳೂ ಹುಟ್ಟಿಕೊಂಡಿವೆ. ಕೇವಲ ಅಡುಗೆ ಮಾಡುವುದು ಮಾತ್ರವಲ್ಲದೆ ಹೊಟೇಲ್‌ ನಿರ್ವಹಣೆ, ವ್ಯವಸ್ಥಾಪನೆ ಹೀಗೆ ಹಲವು ವೃತ್ತಿಗಳು ಈ ಉದ್ಯಮದಲ್ಲಿ ಹುಟ್ಟಿಕೊಂಡಿವೆ.

ಹೊಟೇಲ್‌ ಮ್ಯಾನೇಜ್‌ ಮೆಂಟ್‌ ಎಂಬ ಕೋರ್ಸ್‌ ಈಗ ಎಷ್ಟು ಪಾಪ್ಯುಲರ್‌ ಆಗಿದೆಯೇ ಅಷ್ಟೇ ಇದನ್ನು ಹವ್ಯಾಸವಾಗಿಸಿ ರೂಢಿಸಿಕೊಂಡವರಿಗೂ ಸಾಕಷ್ಟು ಅವಕಾಶಗಳಿವೆ.

ಕೋರ್ಸ್‌
ಹೊಟೇಲ್‌ ಮ್ಯಾನೇಜ್‌ ಮೆಂಟ್‌ ಎಂಬ ಕೋರ್ಸ್‌ ಈ ಫೀಲ್ಡ್‌ಗೆ ತರಬೇತಿಗಳನ್ನು ನೀಡುತ್ತಿದೆ. ಇದರಲ್ಲಿ ಅಕಮಡೇಶನ್‌ ಮ್ಯಾನೇಜರ್‌, ಕೆಟರಿಂಗ್‌ ಮ್ಯಾನೇಜರ್‌, ಚೆಫ್, ಇವೆಂಟ್‌ ಮ್ಯಾನೇಜರ್‌, ಫಾಸ್ಟ್‌ಫ‌ುಡ್‌ ರೆಸ್ಟೋರೆಂಟ್‌, ಹೊಟೇಲ್‌ ಮ್ಯಾನೇಜರ್‌, ರೆಸ್ಟೋರೆಂಟ್‌ ಮ್ಯಾನೇಜರ್‌ ಹೀಗೆ ಹಲವು ಕೋರ್ಸ್‌ಗಳೂ  ಇವೆ. ಡಿಪ್ಲೋಮಾ ಹಾಗೂ ಫ‌ುಲ್‌ಟೈಮ್‌ ಕ್ಲಾಸ್‌ಗಳು ಇವೆ. ಸುಮಾರು ಮೂರು ವರ್ಷಗಳ ಕಾಲ ಇವುಗಳಲ್ಲಿ ಇಷ್ಟ ವಾದ ವಿಷಯವನ್ನು ಕಲಿತು ಮಾಸ್ಟರ್‌ ಆಗಬಹುದು.

ವಿಸ್ತಾರಗೊಂಡ ಉದ್ಯಮ
ಹೊಟೇಲ್‌ ಉದ್ಯಮ ಇಂದು ದೊಡ್ಡ ವ್ಯವಹಾರವನ್ನೇ ನಡೆಸುತ್ತಿದೆ. ಕ್ಯಾಟರಿಂಗ್‌, ಹೊಟೇಲ್‌, ರೆಸ್ಟೋರೆಂಟ್ಸ್‌, ರೆಸಾರ್ಟ್ಸ್ ಹೀಗೆ ಸಣ್ಣ ಪುಟ್ಟ ಕ್ಯಾಂಟೀನ್‌ ಗಳಿಂದ ಹಿಡಿದು ಸ್ಟಾರ್‌ ಹೊಟೇಲ್‌ ಗಳ ತನಕ ಆವರಿಸಿದೆ. ಹಾಗಾಗಿ ಸಣ್ಣ ವಯಸ್ಸಿನಲ್ಲೇ ಅಮ್ಮ ಮಾಡುವ ಅಡುಗೆಯನ್ನು ಹವ್ಯಾಸವಾಗಿ ಕಲಿತು ಮುಂದೆ ಅದನ್ನೇ ವೃತ್ತಿಯಾಗಿಸಿ ಬದುಕನ್ನು ರೂಪಿಸಬಹುದು ಅಥವಾ ಪಾರ್ಟ್‌ ಟೈ ರೀತಿಯಲ್ಲೂ ಮುಂದುವರಿಸಬಹುದು. ಇದರ ಮೂಲಕ ಸ್ವಂತ ಉದ್ಯಮ ಅಥವಾ ಯಾವುದಾದರೂ ಸ್ಟಾರ್‌ ಹೊಟೇಲ್‌ಗ‌ಳಲ್ಲಿ ಕೆಲಸವನ್ನೂ ಮಾಡಬಹುದು. ಒಟ್ಟಿನಲ್ಲಿ ಇದೊಂದು ಅಧಿಕ ಸಂಭಾವನೆಯನ್ನು ನೀಡುವ ವೃತ್ತಿಯಾಗಿ ಗುರುತಿಸಿಕೊಂಡಿದೆ.

ಭರತ್‌ ರಾಜ್‌ ಕರ್ತಡ್ಕ

ಟಾಪ್ ನ್ಯೂಸ್

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.