ಟ್ಯುಟೋರಿಯಲ್‌ನಿಂದ ಕಲಿಕೆಯ ಜತೆಗೆ ಸಂಪಾದನೆ

Team Udayavani, Sep 18, 2019, 5:34 AM IST

ಕಾಲೇಜು ಜೀವನದಲ್ಲಿ ಹಣದ ಆವಶ್ಯಕತೆ ಇರುತ್ತದೆ. ಪೋಷಕರು ಬೇಕಾದಷ್ಟು ನಮ್ಮ ಅಗತ್ಯಗಳನ್ನು ಪೂರೈಸಿದರೂ, ಪಾಕೆಟ್‌ ಮನಿಗಳನ್ನು ನೀಡಿದರೂ ನಮ್ಮಲ್ಲಿ ಒಂದಿಷ್ಟು ಹಣ ಇರುವುದು ಅಗತ್ಯವಾಗುತ್ತದೆ. ಕೆಲವೊಂದು ಅಗತ್ಯಗಳಿಗೆ ಮನೆಯಿಂದ ಹಣ ಲಭಿಸುವುದೂ ಕಡಿಮೆ. ಕೆಲವೊಂದು ಭಾರೀ ಮನೆಯಲ್ಲಿ ಆರ್ಥಿಕ ಸಂಕಷ್ಟ ಇರುವ ವಿದ್ಯಾರ್ಥಿಗಳಿಗೆ ಕಲಿಕೆ ಮುಂದುವರಿಸಲು ಹಣದ ಕೊರತೆ ಕಂಡು ಬರುತ್ತದೆ. ವಿದ್ಯಾಭ್ಯಾಸ ಅಲ್ಲಿಗೇ ಮೊಟಕುಗೊಳಿಸಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಯ ಜತೆ ದುಡಿಮೆಯೂ ಅವಿವಾರ್ಯವಾಗುತ್ತದೆ. ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯ ಹಾನಿಯುಂಟಾಗದೆ ಸಂಪಾದನೆ ಮಾಡುವ ಒಂದು ಉತ್ತಮ ಮಾರ್ಗವೆಂದರೆ ಟ್ಯುಟೋರಿಯಲ್‌.

ಪ್ರೈಮರಿ, ಹೈಸ್ಕೂಲ್‌, ಪಿಯುಸಿ ಮಕ್ಕಳಿಗೆ ಅವರವರ ವಿಷಯದ ಕುರಿತು ಪಾಠ ಮಾಡುವುದು ಅಥವಾ ಟ್ಯೂಷನ್‌ ತೆಗೆದುಕೊಳ್ಳುವುದೇ ಟ್ಯುಟೋರಿಯಲ್‌ನ ವೈಶಿಷ್ಟ. ಮನೆಯಲ್ಲೇ ಇದಕ್ಕಾಗಿ ಒಂದು ಕೋಣೆಯನ್ನು ಮೀಸಲಿಟ್ಟು ಬೆಳಗ್ಗೆ ಅಥವಾ ಸಂಜೆ, ಅಥವಾ ಎರಡೂ ವೇಳೆಗಳಲ್ಲಿ ತರಗತಿಗಳನ್ನು ನಡೆಸಬಹುದು. ಒಬ್ಬ ವಿದ್ಯಾರ್ಥಿಗೆ ಮಾಸಿಕವಾಗಿ ಇಂತಿಷ್ಟು ಫೀಸ್‌ ಎಂದು ನಿಗದಿಪಡಿಸಿದರೆ ಮಾಸಿಕ ಆದಾಯಕ್ಕೆ ಕೊರತೆಯಿಲ್ಲ,

ಆಯ್ಕೆ ಹೀಗಿರಲಿ
ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಸ್ವಲ್ಪ ಎಚ್ಚರಿಕೆ ವಹಿಸಿ. ನಿಮ್ಮ ಆಸಕ್ತಿಯ ವಿಷಯದಲ್ಲಿರುವ ವಿದ್ಯಾರ್ಥಿಗಳಾಗಿದ್ದರೆ ಉತ್ತಮ. ಉದಾಹರಣೆ ನೀವು ಎಂ. ಎಸ್ಸಿ ವಿದ್ಯಾರ್ಥಿಯಾಗಿದ್ದರೆ ಪಿಯುಸಿಯಲ್ಲಿ ವಿಜ್ಞಾನ ವಿಷಯವನ್ನು ಆಯ್ದುಕೊಂಡ ವಿದ್ಯಾರ್ಥಿಗಳಿಗೆ ತರಗತಿ ನೀಡಿ. ಇದರಿಂದ ನಿಮಗೆ ವಿಷಯದಲ್ಲಿ ಗೊಂದಲ ಉಂಟಾಗುವ ಸಾಧ್ಯತೆ ಕಡಿಮೆಯಿರುತ್ತದೆ. ಸಣ್ಣ ಮಕ್ಕಳನ್ನೂ ತೆಗೆದುಕೊಳ್ಳಬಹುದು.

ತರಗತಿಗಳನ್ನು ನಿಮ್ಮ ಹಾಗೂ ವಿದ್ಯಾರ್ಥಿಗಳ ಶಾಲಾ ಸಮಯವನ್ನು ನೋಡಿಕೊಂಡು ನಿರ್ಧರಿಸಿ. ಬೆಳಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ಅಥವಾ ಸಂಜೆ 5ರಿಂದ 7 ಗಂಟೆಯವರೆಗೆ ಎಂಬ ಸಮಯ ನಿಗದಿಪಡಿಸಿ. ರವಿವಾರ ಸ್ವಲ್ಪ ಹೆಚ್ಚು ಹೊತ್ತು ತರಗತಿ ನಡೆಸಬಹುದು.
ಕಾಲೇಜು ವಿದ್ಯಾಭ್ಯಾಸದ ನಡುವೆ ಹಾಗೂ ರಜಾ ಅವಧಿಗಳಲ್ಲಿ ವಿದ್ಯಾರ್ಥಿಗಳ ಸಂಪಾದನೆಯ ಮುಖ್ಯ ದಾರಿಯಾಗಿ ಟ್ಯುಟೋರಿಯಲ್‌ ಮಾಡಬಹುದು. ಕಲಿಕೆಯ ಆಸಕ್ತಿ ಅಧಿಕವಿದ್ದವರಿಗೆ ಈ ಕೆಲಸ ಹೆಚ್ಚು ಖುಷಿ ಕೊಡುತ್ತದೆ.

ಲಾಭ
ಇತರ ಯಾವುದೇ ಉದ್ಯೋಗಗಳಿಗಿಂತ ಶಿಕ್ಷಣದ ನಡುವೆ ಟ್ಯುಟೋರಿಯಲ್‌ ನಡೆಸುವುದೇ ಉತ್ತಮ. ಯಾಕೆಂದರೆ ಕಲಿಕೆ ನಿರಂತರವಾಗಿರುತ್ತದೆ. ಇತರರಿಗೆ ಹೇಳಿ ಕೊಡುವಾಗ ನಮ್ಮ ಬುದ್ಧಿವಂತಿಕೆಯೂ ಅಧಿಕವಾಗುತ್ತದೆ. ವಿದ್ಯಾರ್ಥಿಗಳ ದೃಷ್ಟಿಯಲ್ಲಿ ನೀವೇ ಅಧ್ಯಾಪಕರಾದುದರಿಂದ ಅವರ ಸಂದೇಹಗಳನ್ನು ಪರಿಹರಿಸುವ ಜವಾಬ್ದಾರಿಯೂ ನಿಮ್ಮ ಮೇಲಿರುತ್ತದೆ. ಆದ್ದರಿಂದ ಹೆಚ್ಚು ಓದು ಅಗತ್ಯವಾಗುತ್ತದೆ.

– ಸುಶ್ಮಿತಾ ಶೆಟ್ಟಿ ಸಿರಿಬಾಗಿಲು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮಾಡಿದ ಅಡುಗೆಯನ್ನು ಸವಿಯುವುದು ಮಾತ್ರವಲ್ಲ ರುಚಿಕರ ಅಡುಗೆ ಮಾಡುವುದು ಅನೇಕರಿಗೆ ಖುಷಿಯ ಸಂಗತಿ. ಮನೆ ಮಂದಿಗೆಲ್ಲ ರುಚಿಯಾದ ಆಹಾರ ಸಿದ್ಧಪಡಿಸಿಕೊಡುವುದು...

  • ಉದ್ಯೋಗಕ್ಕೆ ಹೊಸ ದಾರಿ ಮದರಂಗಿ ಕೋರ್ಸ್‌ಮದರಂಗಿಗೆ ಭಾರತದ ಸಂಪ್ರದಾಯದಲ್ಲಿ ಮಹತ್ತರ ಸ್ಥಾನವಿದೆ. ಹಾಗಾಗಿ ಮದರಂಗಿಗೆ ನಮ್ಮಲ್ಲಿ ಆದ್ಯತೆ ಹೆಚ್ಚಿದೆ. ಮದುವೆ...

  • ವಿದ್ಯಾರ್ಥಿಗಳ ಜ್ಞಾನ ವೃದ್ಧಿಗೆ ಪ್ರಬಂಧ ಪೂರಕಕಾಲೇಜು ಜೀವನದಲ್ಲಿ ಅನೇಕ ರೀತಿಯ ಸ್ಪರ್ಧೆಗಳಲ್ಲಿ ಭಾಗವ‌ಹಿಸುವುದು ಸಾಮಾನ್ಯ. ಆದರೆ ಕೆಲವರು ಯಾಕೆ ಅದಕ್ಕೆಲ್ಲಾ...

  • ಕೇವಲ ಶಾಲೆಯ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಜ್ಞಾನ ಸಂಪಾದಿಸಲು ಸಾಧ್ಯವಿಲ್ಲ. ಬದಲಾಗಿ ಪ್ರಾಯೋಗಿಕ ತರಗತಿಗಳು ಕೂಡ ಅಗತ್ಯವಿದೆ. ಪಠ್ಯವನ್ನು ಸಂಪೂರ್ಣವಾಗಿ...

  • ಈಗಿನ ಸಂದರ್ಭದಲ್ಲಿ ನಮಗೆ ಬೇಕಾದ ಹಾಗೆ ಕೆಲಸ ಸಿಗುವುದು ಬಲು ಕಷ್ಟ. ಒಂದಿಷ್ಟೂ ಸಂಪಾದನೆ ಮಾಡಬೇಕು, ಒಳ್ಳೆಯ ಉದ್ಯೋಗ ಪಡೆಯಬೇಕೆನ್ನುವುದು ಎಲ್ಲರಲ್ಲೂ ಇರುವಂತಹ...

ಹೊಸ ಸೇರ್ಪಡೆ