ಪ್ರಾಯೋಗಿಕ ತರಗತಿಗಳಿಂದ ಕ್ರಿಯಾಶೀಲತೆ ವೃದ್ಧಿ

Team Udayavani, Oct 2, 2019, 5:09 AM IST

ಕೇವಲ ಶಾಲೆಯ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಜ್ಞಾನ ಸಂಪಾದಿಸಲು ಸಾಧ್ಯವಿಲ್ಲ. ಬದಲಾಗಿ ಪ್ರಾಯೋಗಿಕ ತರಗತಿಗಳು ಕೂಡ ಅಗತ್ಯವಿದೆ. ಪಠ್ಯವನ್ನು ಸಂಪೂರ್ಣವಾಗಿ ಅರ್ಥೈಸಿಕೊಳ್ಳಲು ಪ್ರಾಯೋಗಿಕ ತರಗತಿಗಳು ಕೂಡ ಅಗತ್ಯ.

ತರಗತಿಯಲ್ಲಿ ಅಧ್ಯಾಪಕರು ಹೇಳುವ ಪಾಠವನ್ನು ಗಮನವಿಟ್ಟು ಕೇಳಿ ಅದನ್ನು ಅರ್ಥೈಯಿಸಿಕೊಳ್ಳುವುದು ಕಲಿಕೆಯ ಮುಖ್ಯಭಾಗ. ಈ ನಡುವೆ ತರಗತಿಯಲ್ಲಿ ಹೇಳಿದ ಪಾಠವನ್ನು ಇನ್ನಷ್ಟು ಅರ್ಥೈಸಿಕೊಳ್ಳಲು ಪ್ರಾಯೋಗಿಕ ತರಗತಿಗಳು ಸಹಕಾರಿಯಾಗುತ್ತವೆ ಎಂದರೆ ತಪ್ಪಾಗಲಾರದು. ಅದಕ್ಕಾಗಿಯೇ ಅಧ್ಯಾಪಕರು ಪ್ರಾತ್ಯಕ್ಷಿತೆಗಳನ್ನು ತೋರಿಸಿ ವಿಷಯಗಳನ್ನು ಮನದಟ್ಟು ಮಾಡಲು ಪ್ರಯತ್ನಿಸುತ್ತಾರೆ.

ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಬಾಯಲ್ಲಿ ಮಾಡುವ ಪಾಠಗಳಿಗಿಂತಲೂ ಪ್ರಾತ್ಯಕ್ಷಿತೆ, ಪ್ರಾಯೋಗಿಕ ತರಗತಿಗಳು ಹೆಚ್ಚು ಪ್ರಾಮುಖ್ಯ ವಹಿಸುತ್ತಿವೆೆ. ಹೆಚ್ಚಾಗಿ ವಿಜ್ಞಾನದ ವಿಷಯದ ಕಲಿಕೆಯಲ್ಲಿ ಈ ಅನುಭವ ಹೆಚ್ಚು ಮನದಟ್ಟಾಗಲು ಸಹಕಾರಿಯಾಗುತ್ತವೆೆ. ಭೌತವಿಜ್ಞಾನ, ರಸಾಯನ ವಿಜ್ಞಾನ, ಎಲೆಕ್ಟ್ರಾನಿಕ್ಸ್‌, ಜೀವ ವಿಜ್ಞಾನ ಮುಂತಾದ ವಿಷಯಗಳ ಕಲಿಕೆಯಲ್ಲಿ ಪ್ರಾಯೋಗಿಕ ತರಗತಿಗಳ ಪಾತ್ರ ಮಹತ್ತರವಾದುದು.

ಪ್ರಾಯೋಗಿಕ ತರಗತಿಗಳಿಂದ ಹೆಚ್ಚು ಕ್ರೀಯಾಶೀಲ
ತರಗತಿಗಳಲ್ಲಿ ನಡೆಯುವ ಪಾಠಗಳಲ್ಲಿ ಬರುವ ಸಂಶಯಗಳನ್ನು ನಿವಾರಿಸಿಕೊಳ್ಳಲು ಹೆಚ್ಚು ಕಾಲಾವಕಾಶ ಸಿಗುವುದಿಲ್ಲ. ಕೆಲವು ಗೊಂದಲಗಳು ಹಾಗೆಯೇ ಉಳಿದುಬಿಡುತ್ತವೆ. ಅದನ್ನು ಪ್ರಾಯೋಗಿಕ ತರಗತಿಗಳಲ್ಲಿ ನಿವಾರಿಸಿಕೊಳ್ಳಬಹುದು. ಪ್ರಯೋಗಿಕ ತರಗತಿಗಳು ವಿದ್ಯಾರ್ಥಿಗಳನ್ನು ಹೊಸ ಯೋಚನೆಯತ್ತ ಕೊಂಡೊಯ್ಯುತ್ತದೆ ಎಂದರೆ ತಪ್ಪಾಗಲಾರದು. ಬರುವ ಸಂಶಯಗಳನ್ನು ಪ್ರಾಯೋಗಿಕವಾಗಿ ನಿವಾರಿಸಿಕೊಳ್ಳುವ ತವಕದಲ್ಲಿ ಇನ್ನೇನು ಹೊಸ ಯೋಚನೆಗಳು ಮೂಡಿ ಆ ಬಗ್ಗೆ ಹೆಚ್ಚಿನ ಕಲಿಕೆ ಮಾಡುವ ಆಸಕ್ತಿ ಬೆಳೆಯಬಹುದು. ಅದರೊಂದಿಗೆ ಈವರೆಗೆ ತಿಳಿಯದ ಕೆಲವು ವಿಷಯಗಳನ್ನು ಅರಿತುಕೊಳ್ಳುವ ಅವಕಾಶ ಇದೆ. ಹೀಗಾಗಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕವಾಗಿ ಯೋಚಿಸುವ ಮನೋಭಾವ ಬೆಳೆಯುತ್ತದೆ.

ಆಸಕ್ತಿ ಇರಲಿ
ಪಠ್ಯದ ಪ್ರಮುಖ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡುವ ಉದ್ದೇಶದಿಂದ ಪ್ರಾಯೋಗಿಕ ತರಗತಿಗಳಿಗೆ ವಿದ್ಯಾಸಂಸ್ಥೆಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪ್ರಾಯೋಗಿಕ ತರಗತಿಗಳಲ್ಲಿ ನಮ್ಮ ಕೈಯಲ್ಲೇ ಪ್ರಯೋಗಗಳನ್ನು ಮಾಡಿಸುತ್ತಾರೆ ಎಂದು ಶಿಕ್ಷಕರನ್ನು ದೂರುವ ಬದಲು ಆ ತರಗತಿಯ ಬಗ್ಗೆ ಹೆಚ್ಚು ಆಸಕ್ತಿ ವಹಿಸಿಕೊಳ್ಳಬೇಕಾಗುತ್ತದೆ. ತರಗತಿಗಳಿಗೆ ಹೋಗುವ ಮುನ್ನ ಶಿಕ್ಷಕರು ಯಾವ ಪಾಠಕ್ಕೆ ಸಂಬಂಧಿಸಿದಂತೆ ಪ್ರಯೋಗಗಳನ್ನು ಮಾಡಲಿದ್ದಾರೆ ಎಂಬುದಾಗಿ ತಿಳಿದುಕೊಂಡು ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ಗಮನಿಸುವ ಹೊಸ ವಿಷಯಗಳನ್ನು ದಾಖಲಿಸಿಕೊಳ್ಳಿ. ಸಂಶಯಗಳನ್ನು ಅಲ್ಲೇ ನಿವಾರಿಸಿಕೊಳ್ಳಿ.

ಇತರ ವಿಷಯಗಳಿಗೂ ವಿಸ್ತರಣೆ
ಕೆಲವು ವರ್ಷಗಳ ಹಿಂದೆ ಪ್ರಯೋಗಗಳನ್ನು ಕೇವಲ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಮಾಡಲಾಗುತ್ತಿತ್ತು. ಆದರೆ ಇತ್ತೀಚೆಗೆ ವಿಜ್ಞಾನ ಹೊರತುಪಡಿಸಿದ ವಿಷಯಗಳಿಗೂ ಪ್ರಾಯೋಗಿಕ ತರಗತಿಗಳನ್ನು ವಿಸ್ತರಿಸಲಾಗಿದೆ. ಪ್ರಾಥಮಿಕ ಹಂತದಲ್ಲಿ ಮ್ಯಾಥ್ಸ್ ಲ್ಯಾಬ್‌ ಹೆಚ್ಚು ಸಕ್ರೀಯವಾಗಿದೆ. ಆಟಿಕೆಗಳು ಹಾಗೂ ಅದರ ಮಾದರಿಗಳ ಮೂಲಕ ಗಣಿತದ ವಿವಿಧ ಪ್ರಕಾರಗಳನ್ನು ಸುಲಭವಾಗಿ ಕಲಿಯಲಾಗುತ್ತದೆ. ಗಣಿತಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಿಡಿ ಸುವುದಕ್ಕೆ ಸಹಕಾರಿಯಾಗುತ್ತದೆ. ಇನ್ನೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಬಿಸಿನೆಸ್‌ ಲ್ಯಾಬ್‌ಗಳನ್ನು ಮಾಡಲಾಗಿದೆ. ತಂಡಗಳಾಗಿ ಮಾಡಿ ಸಂವಹನ ಸಾಮರ್ಥ್ಯ, ಗುಂಪು ಚರ್ಚೆಗಳ ಮೂಲಕ ಹೆಚ್ಚು ಮಾಹಿತಿಗಳನ್ನು ನೀಡಲಾಗುತ್ತದೆ.

ಪ್ರಾಯೋಗಿಕ ತರಗತಿಗಳಿಂದ ವಿದ್ಯಾರ್ಥಿಗಳಿಗೇನು ಲಾಭ?
ಶಿಕ್ಷಕರು ಎಷ್ಟೇ ಉತ್ತಮವಾಗಿ ತರಗತಿಗಳನ್ನು ಮಾಡಿದರೂ ಪ್ರಾಯೋಗಿಕವಾಗಿ ಪಾಠಗಳ ಅಧ್ಯಯನ ನೀಡಿದಷ್ಟು ಮಾಹಿತಿ ತರಗತಿ ಪಾಠದಲ್ಲಿ ಸಿಗುವುದಿಲ್ಲ. ಪ್ರಾಯೋಗಿಕ ತರಗತಿಗಳಲ್ಲಿ ಪ್ರತಿ ಹಂತವನ್ನು ಗಮನಿಸಬಹುದು ಹಾಗೂ ವಿಷಯಕ್ಕೆ ಸಂಬಂಧಿಸಿದ ವಸ್ತುಗಳನ್ನು ಬದಲಾವಣೆಗೆ ಒಳಪಡಿಸಿ ಬದಲಾವಣೆಗಳನ್ನು ಗಮನಿಸಬಹುದು. ಪ್ರಾಯೋಗಿಕ ತರಗತಿಗಳಿಂದ ಕಲಿಯುತ್ತಿರುವ ವಿಷಯದ ಬಗೆಗಿನ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಾಧ್ಯ. ತರಗತಿಯಲ್ಲಿ ಪಾಠ ಕೇಳಿದಾಗ ಮೂಡುವ ಕೆಲವು ಸಂಶಯಗಳಿಗೆ ಸ್ವ ಪ್ರಯೋಗಗಳ ಮೂಲಕ ಉತ್ತರ ಕಂಡುಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಕೆಲವೊಂದು ವಿಷಯಗಳು ಕ್ಲಿಷ್ಟಕರವಾಗಿರುತ್ತವೆೆ. ಅದನ್ನು ಸರಳವಾಗಿ ಅರ್ಥ ಮಾಡಿಕೊಳ್ಳಲು ಪ್ರಾಯೋಗಿಕ ತರಗತಿಗಳು ಬಹಳಷ್ಟು ಸಹಕಾರಿಯಾಗುತ್ತವೆ. ಪ್ರಾಯೋಗಿಕ ತರಗತಿಗಳಲ್ಲಿ ಹೊಸ ಪ್ರಯೋಗಗಳನ್ನು ಮಾಡಲು ಬೇಕಾದ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಅವಕಾಶ ಸಿಗುತ್ತವೆ.

– ಪ್ರಜ್ಞಾ ಶೆಟ್ಟಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮಾಡಿದ ಅಡುಗೆಯನ್ನು ಸವಿಯುವುದು ಮಾತ್ರವಲ್ಲ ರುಚಿಕರ ಅಡುಗೆ ಮಾಡುವುದು ಅನೇಕರಿಗೆ ಖುಷಿಯ ಸಂಗತಿ. ಮನೆ ಮಂದಿಗೆಲ್ಲ ರುಚಿಯಾದ ಆಹಾರ ಸಿದ್ಧಪಡಿಸಿಕೊಡುವುದು...

  • ಉದ್ಯೋಗಕ್ಕೆ ಹೊಸ ದಾರಿ ಮದರಂಗಿ ಕೋರ್ಸ್‌ಮದರಂಗಿಗೆ ಭಾರತದ ಸಂಪ್ರದಾಯದಲ್ಲಿ ಮಹತ್ತರ ಸ್ಥಾನವಿದೆ. ಹಾಗಾಗಿ ಮದರಂಗಿಗೆ ನಮ್ಮಲ್ಲಿ ಆದ್ಯತೆ ಹೆಚ್ಚಿದೆ. ಮದುವೆ...

  • ವಿದ್ಯಾರ್ಥಿಗಳ ಜ್ಞಾನ ವೃದ್ಧಿಗೆ ಪ್ರಬಂಧ ಪೂರಕಕಾಲೇಜು ಜೀವನದಲ್ಲಿ ಅನೇಕ ರೀತಿಯ ಸ್ಪರ್ಧೆಗಳಲ್ಲಿ ಭಾಗವ‌ಹಿಸುವುದು ಸಾಮಾನ್ಯ. ಆದರೆ ಕೆಲವರು ಯಾಕೆ ಅದಕ್ಕೆಲ್ಲಾ...

  • ಈಗಿನ ಸಂದರ್ಭದಲ್ಲಿ ನಮಗೆ ಬೇಕಾದ ಹಾಗೆ ಕೆಲಸ ಸಿಗುವುದು ಬಲು ಕಷ್ಟ. ಒಂದಿಷ್ಟೂ ಸಂಪಾದನೆ ಮಾಡಬೇಕು, ಒಳ್ಳೆಯ ಉದ್ಯೋಗ ಪಡೆಯಬೇಕೆನ್ನುವುದು ಎಲ್ಲರಲ್ಲೂ ಇರುವಂತಹ...

  • 1995ರಲ್ಲಿ ಮೊದಲು ಮುದ್ರಣಗೊಂಡ ಕೃಪಾಕರ ಸೇನಾನಿಯ ಪುಸ್ತಕವೇ "ಸೆರೆಯಲ್ಲಿ ಕಳೆದ ಹದಿನಾಲ್ಕು ದಿನಗಳು'. ವೀರಪ್ಪನ್‌ ಎಂದೊಡನೆಯೇ ಕ್ರೌರ್ಯದ ಮುಖ. ಆತ ದರೋಡೆಕೋರ,...

ಹೊಸ ಸೇರ್ಪಡೆ