ಶಿಕ್ಷಣದ ಕೊರತೆ ನೀಗಿಸುವ ಸಂಧ್ಯಾ ಕಾಲೇಜು

Team Udayavani, Jun 19, 2019, 5:00 AM IST

ಅನೇಕರು ಯಾವುದೋ ಕಾರಣಕ್ಕೆ ಶಿಕ್ಷಣದಿಂದ ವಿಮುಖರಾಗಿರುತ್ತಾರೆ. ಅದಕ್ಕೆ ಬಡತನ ಕಾರಣವಾಗಿರಬಹುದು, ಇಲ್ಲವೇ ಇನ್ನಿತರ ಕಾರಣಗಳು ಅಡ್ಡಿಯುಂಟು ಮಾಡಬಹುದು. ಅಂಥವರಿಗೆ ಸಂಧ್ಯಾ ಕಾಲೇಜುಗಳು ವರದಾನವಾಗಿವೆೆ. ಹಗಲು ಪಾರ್ಟ್‌ ಟೈಮ್‌ ಕೆಲಸ ಮಾಡಿ ಸಂಜೆ ಕಾಲೇಜಿಗೆ ಹೋಗುವ ಅನೇಕ ಯುವಕ, ಯುವತಿಯರಿಂದು ಸಮಾಜದಲ್ಲಿ ಕಾಣಸಿಗುತ್ತಾರೆ. ಅಂಥವರ ಶಿಕ್ಷಣದ ಕೊರತೆಯನ್ನು ನೀಗಿಸಿ ಸಮಾಜದಲ್ಲಿ ತಲೆ ಎತ್ತಿ ನಿಲ್ಲುವಂತೆ ಮಾಡಿದ್ದು ಇವೇ ಸಂಧ್ಯಾ ಕಾಲೇಜುಗಳು.

ಹಿಂದೆ ಹೀಗಿತ್ತು…
ಆರಂಭದ ದಿನಗಳಲ್ಲಿ, ಹಳ್ಳಿಗಳು ಮತ್ತು ಸಣ್ಣ ನಗರಗಳಿಂದ ಬಂದ ಯುವಕರು, ಶಾಲೆಯನ್ನು (10ನೇ) ಪೂರ್ಣಗೊಳಿಸಿದ ಅನಂತರ ಮತ್ತು ಉದ್ಯೋಗ ಹುಡುಕುವಲ್ಲಿ ದೊಡ್ಡ ನಗರಕ್ಕೆ ಹೋಗಲು ಟೈಪ್‌ರೈಟಿಂಗ್‌ ಅನ್ನು ಕಲಿಯುತ್ತಿದ್ದರು. ಕೆಲಸವನ್ನು ಪಡೆದ ಅನಂತರ ಅವರು ಸಂಜೆ ಕಾಲೇಜುಗಳಿಗೆ ಸೇರಿ ಪದವಿಯನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತಿದ್ದರು.

ಹಿಂದೆಯಾದರೆ ಮನೆಯಲ್ಲಿ ಬಡತನ, ಕಾಲೇಜು ಫೀಸು ಕಟ್ಟೋಕೂ ದುಡ್ಡಿಲ್ಲ ಅಂತ ಅನೇಕರು ಶಿಕ್ಷಣಕ್ಕೆ ತಿಲಾಂಜಲಿ ಇಡುತ್ತಿದ್ದರು. ಈಗ ಹಾಗಿಲ್ಲ. ಹಗಲು ಮಾರ್ಕೆಟಿಂಗ್‌ನಲ್ಲೋ, ಫ‌ುಡ್‌ ಡೆಲಿವರಿ ಬಾಯ್‌ ಆಗಿಯೋ ಕೆಲಸ ಮಾಡಿ ರಾತ್ರಿ ಕಾಲೇಜಿಗೆ ಹೋಗಬಹುದು. ದುಡಿಮೆಯೂ ಆಗುತ್ತೆ, ಶಿಕ್ಷಣ ಸಂಪೂರ್ಣವಾಗುತ್ತದೆ.

ಮೌಲ್ಯಯುತ ಶಿಕ್ಷಣ
ಸಂಜೆ ಕಾಲೇಜು ಬೆಳಗ್ಗೆ ಕಾಲೇಜಿಗೆ ಸಮನಾಗಿದ್ದು, ಪಠ್ಯಕ್ರಮ ಒಂದೇ ರೀತಿ ಇರುತ್ತದೆ. ಯಾವುದೇ ಕಾಲೇಜು ಮತ್ತು ಕಾಲೇಜು ಒದಗಿಸಿದ ಪದವಿ ಅಥವಾ ಪ್ರಮಾಣಪತ್ರಗಳಂತೆ ಸಂಜೆಯ ಕಾಲೇಜು ನೀಡುವ ಪ್ರಮಾಣಪತ್ರ ಉಳಿದ ಕಾಲೇಜುಗಳಷ್ಟೇ ಮೌಲ್ಯಯುತವಾಗಿರುತ್ತದೆ. ಇವುಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಆದರೆ ಸಂಜೆ ಕಾಲೇಜುಗಳು ಸ್ವಾತಂತ್ರ್ಯದ ಆರಂಭಿಕ ವರ್ಷಗಳಿಂದಲೂ ಇವೆೆ. ಈ ಕಾಲೇಜುಗಳು ಕೆಲಸದ ಸ್ವರೂಪದ ಕಾರಣದಿಂದಾಗಿ ಅಧ್ಯಯನ ಮಾಡಲು ಸಾಧ್ಯವಾಗದವರಿಗೆ ಅವಕಾಶ ನೀಡಲು ಪ್ರಾರಂಭವಾದವು.

ಯಾಕೆ ಸೇರಬಹುದು?
ಎಷ್ಟೋ ಜನರಿಗೆ ಶಿಕ್ಷಣ ಪಡೆಯುವ ಆಸೆಯಿದ್ದರೂ ಬಡತನ ಉದ್ಯೋಗ ಮಾಡುವಂತೆ ದೂಡುತ್ತದೆ. ಅಂಥವ‌ರಿಗೆ ಉದ್ಯೋಗದ ಜತೆಗೆ ಸಂಜೆ ಕಾಲೇಜು ಸೇರಿಕೊಂಡು ತಮ್ಮ ಶಿಕ್ಷಣ ಮುಂದುವರಿಸಬಹುದು. ಇಲ್ಲಿನ ಶಿಕ್ಷಣ ಮೌಲ್ಯಯುತವಾಗಿರುವುದರಿಂದ ಸಂಜೆ ಕಾಲೇಜಿಗೆ ಹೋಗಲೂ ಯಾವುದೇ ಹಿಂಜರಿಕೆಯ ಅಗತ್ಯವಿಲ್ಲ. ಮನೆ ಜವಾಬ್ದಾರಿಯಿಂದ ಕಲಿಕೆಗೆ ಬ್ರೇಕ್‌ ಹೇಳಿದ ಅದೆಷ್ಟೋ ಜನರು ಈ ಕಾಲೇಜುಗಳಲ್ಲಿ ಕಲಿಯುತ್ತಾರೆ.

-  ಹಿರಣ್ಮಯಿ

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

  • ಮೆಟಲರ್ಜಿಕಲ್‌ ಎಂಜಿನಿಯರಿಂಗ್‌ ಪೂರೈಸಿದವರು ಮೆಟೀರಿಯಲ್ಸ್‌ ವಿಜ್ಞಾನಿಗಳಾಗಿ, ಮೆಟಲರ್ಜಿಕಲ್‌ ಲ್ಯಾಬೊರೇಟರಿ ಟೆಕ್ನೀಶಿಯನ್‌ಗಳಾಗಿ, ಗಣಿಗಾರಿಕೆ ಎಂಜಿನಿಯರ್‌...

  • ಜಾಹೀರಾತು, ಸಿನೆಮಾ, ಧಾರಾವಾಹಿ ಮತ್ತು ಕಿರುಚಿತ್ರ ಉತ್ಪನ್ನಗಳ ಬ್ರ್ಯಾಂಡ್‌ ಅಂಬಾಸಿಡರ್‌ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಮಾಡೆಲಿಂಗ್‌ಗೆ ಅಪಾರ ಅವಕಾಶಗಳು ಹುಟ್ಟಿಕೊಳ್ಳುತ್ತಿವೆ....

  • ಸ್ಪರ್ಧಾತ್ಮಕ ಯುಗ ಎಲ್ಲವನ್ನೂ ವೇಗವಾಗಿಸಿದೆ. ಎಷ್ಟು ಕಲಿತಿದ್ದರೂ ಸಾಲದು ಎನ್ನುವ ಕಾಲಘಟ್ಟಕ್ಕೆ ಬಂದು ತಲುಪಿದ್ದೇವೆ. ಇದರಿಂದ ಸಹಜವಾಗಿ ಎಲ್ಲೆಡೆ ತೀವ್ರ ಪೈಪೋಟಿ...

  • ಶೈಕ್ಷಣಿಕ ಕ್ಷೇತ್ರ ಇತ್ತೀಚಿನ ದಿನಗಳಲ್ಲಿ ಪ್ರಗತಿ ಸಾಧಿಸುತ್ತಿದ್ದು, ವರ್ಷಂಪ್ರತಿ ಹೊಸ ಹೊಸ ಕೋರ್ಸ್‌ಗಳು ಸೇರ್ಪಡೆಯಾಗುತ್ತಿದೆ. ಅದಕ್ಕೆ ತಕ್ಕಂತೆಯೇ ವಿದ್ಯಾರ್ಥಿಗಳು...

  • ಸ್ಪರ್ಧಾತ್ಮಕ ಯುಗದಲ್ಲಿ ಕೆಲಸ ಅರಸುವವರಿಗೆ ಏನಾದರೂ ಹೊಸತಾದ ಆಲೋಚನಾ ಕ್ರಮ, ಕ್ರೀಯಾಶೀಲತೆ, ಉತ್ತಮ ಮಾತುಗಾರಿಕೆ ಹೀಗೆ ಹಲವಾರು ಮೌಲ್ಯವನ್ನು ಹೊಂದಿರಬೇಕು....

ಹೊಸ ಸೇರ್ಪಡೆ