ಫಿಲ್ಮ್  ಎಡಿಟಿಂಗ್‌ ಅವಕಾಶದ ಆಗರ

Team Udayavani, Feb 27, 2019, 9:17 AM IST

27-february-9.jpg

ಸಿನೆಮಾವನ್ನು ಇಷ್ಟ ಪಡದವರೇ ಇಲ್ಲ. ಕೆಲವರಿಗೇ ರೊಮ್ಯಾಂಟಿಕ್‌, ಕೆಲವರೂ ಫೈಟಿಂಗ್‌ ಹೀಗೆ ಬಗೆ ಬಗೆಯ ಅಭಿರುಚಿಯುಳ್ಳ ಜನರಿದ್ದಾರೆ. ಸಿನೆಮಾವನ್ನು ಕುತೂಹಲವಾಗಿ ನೋಡುವಂತೆ ಮಾಡಲು ಎಡಿಟಿಂಗ್‌ ಚಾಕಚಕ್ಯತೆ ಅಷ್ಟೇ ಪಾತ್ರ ವಹಿಸಿರುತ್ತದೆ. ಫಿಲ್ಮ್ ಇಂಡಸ್ಟ್ರಿ ಇಂದು ವ್ಯಾಪಕವಾಗಿ ಬೆಳೆದಿದ್ದು, ಇದರ ಒಂದು ಭಾಗವಾದ ಫಿಲ್ಮ್ ಎಡಿಟಿಂಗ್‌ ಕೂಡ ವಿಫ‌ುಲ  ಅವಕಾಶಗಳಿಂದ ತೆರೆದುಕೊಳ್ಳುತ್ತಿದೆ.

ಕ್ರಿಯೇಟಿವಿಟಿ ಪ್ರತಿಯೊಬ್ಬರಲ್ಲೂ ವಿಭಿನ್ನವಾಗಿದ್ದು, ಅದನ್ನು ಬಳಸಿ ಜನರ ಗಮನ ಸೆಳೆಯುವುದು ಅಷ್ಟು ಸುಲಭದ ಮಾತಲ್ಲ, ಅದಕ್ಕೆ ಹಲವಾರು ರೀತಿಯ ಪೂರಕ ಆಲೋಚನೆಗಳ ಆವಶ್ಯಕತೆಯಿದೆ. ಇಂತಹ ಆಲೋಚನೆಗಳು ನಿಮ್ಮಲ್ಲಿದ್ದರೆ ಫಿಲ್ಮ್ಎಡಿಟಿಂಗ್‌ ಗೆ ಪೂರಕವಾಗಿ ಹಲವಾರು ಶಿಕ್ಷಣ ಸಂಸ್ಥೆಗಳು ಕೋರ್ಸ್‌, ಕ್ಲಾಸ್‌ ಗಳ ಮೂಲಕ ಸೂಕ್ತ ಮಾರ್ಗದರ್ಶನ ನೀಡುವ ಕೆಲಸ ಮಾಡುತ್ತಿವೆ.

ಅಗತ್ಯ ಶಿಕ್ಷಣ
ವೀಡಿಯೋ ಸಂಪಾದಕರಿಗೆ ಔಪಚಾರಿಕ ಶಿಕ್ಷಣವಿರುವುದಿಲ್ಲ. ಯಾವುದೇ ಪದವಿ ಅಥವಾ ಅನುಭವದ ಮೇರೆಗೆ ಭವಿಷ್ಯಕ್ಕೆ ಮುನ್ನುಡಿ ಬರೆಯಬಹುದು. ಇತ್ತೀಚಿನ ದಿನಗಳಲ್ಲಿ ಇದಕ್ಕೆಂದು ಹಲವಾರು ರೀತಿಯ ಕೋರ್ಸ್‌ಗಳು ಆರಂಭಗೊಂಡಿದ್ದು, ವೀಡಿಯೊ ನಿರ್ದೇಶನ, ಸೆಟ್‌ ವಿನ್ಯಾಸ, ಸೌಂಡ್‌ ರೆಕಾರ್ಡಿಂಗ್‌, ಸೌಂಡ್‌ ಎಡಿಟಿಂಗ್‌, ಡಿಜಿಟಲ್‌ ಇಮೇಜಿಂಗ್‌, ಕಂಪ್ಯೂಟರ್‌ ಆ್ಯನಿಮೇಶನ್‌ ಮುಂತಾದವುಗಳನ್ನು ಒಳಗೊಂಡಿರುತ್ತದೆ.

ಕಿರುಚಿತ್ರಗಳ ಹಾವಳಿ
ಇತ್ತೀಚೆಗೆ ಚಲನಚಿತ್ರಗಳ ಜತೆಗೆ ಕಿರು ಚಿತ್ರಗಳ ಟ್ರೆಂಡ್‌ ಕೂಡ ಹೆಚ್ಚುತ್ತಿದ್ದು, ಇದರಲ್ಲಿಯೂ ಹಲವಾರು ಅವಕಾಶಗಳಿವೆ. ಬಿಡುವಿನ ವೇಳೆಯಲ್ಲಿ ನುರಿತ ಕಲಾವಿದರ ಜತೆಗೆ ಅಗತ್ಯ ಮಾಹಿತಿಗಳನ್ನು ಪಡೆಯಬಹುದಾಗಿದೆ. ಕಾಲೇಜು, ಇನ್ನಿತರ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಕೂಡ ಹವ್ಯಾಸಿಯಾಗಿ ಫಿಲ್ಮ್ಎಡಿಟಿಂಗ್‌  ಕಲಿಯಬಹುದು.

ಆರ್ಥಿಕ ದೃಷ್ಟಿಕೋನ
ಯು.ಎಸ್‌. ಬ್ಯೂರೋ ಆಫ್ ಲೇಬರ್‌ ಸ್ಟಾಟಿಸ್ಟಿಕ್ಸ್‌ (ಬಿಎಲ್‌ ಎಸ್‌) ಪ್ರಕಾರ 2014-2024ರ ಅವಧಿಯಲ್ಲಿ ವೀಡಿಯೋ ಸಂಪಾದಕರಿಗೆ ಶೇ. 18 ಅವಕಾಶಗಳು ಹೆಚ್ಚಾಗಿವೆ ಎಂದು ನಿರೀಕ್ಷಿಸಲಾಗಿದೆ. ಉದ್ಯೋಗ ಕ್ಷೇತ್ರದಲ್ಲಿ ಸ್ಪರ್ಧೆ ತೀವ್ರವಾಗುತ್ತಿದ್ದು ಹೆಚ್ಚಾಗಿ ಚಲನಚಿತ್ರಗಳ ಕಡೆ ಮುಖ ಮಾಡುತ್ತಿದ್ದಾರೆ. ಬರುವ ದಿನಗಳಲ್ಲಿ ಇವರ ವೇತನಗಳಲ್ಲಿ ಗಣನೀಯವಾಗಿ ಏರಿಕೆ ಕಂಡು ಬರುವುದಲ್ಲದೆ ವಾರ್ಷಿಕವಾಗಿ ಕೋಟಿಗಳಲ್ಲಿ ಸಂಭಾವನೆ ಪಡೆಯುವುದರಲ್ಲಿ ಸಂಶಯವಿಲ್ಲ ಎಂಬುದು ವರದಿಗಳ ಸಾರಾಂಶ. 

ಬೇಕಾಗಿರುವ ಕೌಶಲಗಳು
ವೀಡಿಯೋ ಸಂಪಾದಕರಾಗಲು ವೀಡಿಯೋ ಎಡಿಟಿಂಗ್‌ ಸಾಫ್ಟ್ ವೇರ್‌ ಗಳ ಆಳವಾದ ಜ್ಞಾನ, ಜತೆಗೆ ಸ್ವಲ್ಪ ಮಟ್ಟಿನ ಕಲಾತ್ಮಕತೆಯ ಆವಶ್ಯಕತೆಯಿರುತ್ತದೆ. ಚಲನಚಿತ್ರ ದೂರದರ್ಶನದ ಪ್ರದರ್ಶನ, ವಾಣಿಜ್ಯ, ಸಂಗೀತ ಎಲ್ಲದರ ವೀಡಿಯೊ ತಯಾರಿಸಲು ಕಲಾತ್ಮಕ ವೃತ್ತಿಪರರೊಂದಿಗೆ ಸಹಭಾಗಿತ್ವ ಹೊಂದಿರಬೇಕು.

ಪ್ರೀತಿ ಭಟ್‌ ಗುಣವಂತೆ 

ಟಾಪ್ ನ್ಯೂಸ್

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

9-udupi

ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.