ವಿದೇಶಿ ಶಿಕ್ಷಣದ ಆಸಕ್ತಿ

Team Udayavani, Aug 21, 2019, 5:14 AM IST

ವಿದೇಶದಲ್ಲಿ ಕಲಿಯಬೇಕು ಎಂಬ ಆಸೆ ಅನೇಕ ಮಂದಿಯಲ್ಲಿ ಇರುತ್ತದೆ. ಅದರಲ್ಲಿಯೂ ಉನ್ನತ ವಿದ್ಯಾಭ್ಯಾಸವನ್ನು ವಿದೇಶಗಳ ಪ್ರತಿಷ್ಠಿತ ಕಾಲೇಜುಗಳಾದ ಹಾರ್ವರ್ಡ್‌, ಕೇಂಬ್ರಿಜ್‌, ಆಕ್ಸ್‌ಫರ್ಡ್‌, ಲಂಡನ್‌ ಸ್ಕೂಲ್ ಆಫ್‌ ಎಕಾನಾಮಿಕ್ಸ್‌ ಗಳಂಥ ಸಂಸ್ಥೆಯಲ್ಲಿ ಪೂರ್ಣಗೊಳಿಸಬೇಕು ಎಂಬುದು ಅನೇಕರ ಆಸೆ.

ಪ್ರತಿಭಾವಂತರಿಗಂತೂ ವಿದೇಶಗಳಲ್ಲಿ ಕಲಿಯುವುದಕ್ಕೆ ಮಹತ್ತರವಾದಂತಹ ಅವಕಾಶವಿದೆ. ಅದರಲ್ಲಿಯೂ ಅಮೇರಿಕ, ಬ್ರಿಟನ್‌, ಜರ್ಮನಿ ಸೇರಿದಂತೆ ಇತರೇ ದೇಶಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಬೇಡಿಕೆ ಇದೆ. ಭಾರತದಿಂದಲೂ ಕೂಡ ಹೆಚ್ಚಿನ ವಿದ್ಯಾರ್ಥಿಗಳು ವಿದೇಶಿ ಕಲಿಕೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಗುಣಮಟ್ಟದ ಶಿಕ್ಷಣದ ಜತೆಗೆ ಉತ್ತಮ ಮೂಲಭೂತ ಸೌಕರ್ಯ ಹೊಂದಿರುತ್ತದೆ ಎಂಬ ಉದ್ದೇಶದಿಂದ ವಿದೇಶಿ ಶಿಕ್ಷಣದತ್ತ ಆಸಕ್ತಿ ವಹಿಸುತ್ತಿದ್ದಾರೆ.

ಭಾರತದಿಂದ ಹೆಚ್ಚಿನ ವಿದ್ಯಾರ್ಥಿಗಳು ವಿದೇಶಿ ಕಲಿಕೆಗೆಂದು ಯುಎಸ್‌ಎಗೆ ತೆರಳುತ್ತಿದ್ದಾರೆ. ಯುಎಸ್‌ಎಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ವಿದ್ಯಾರ್ಥಿ ವೇತನ ಕೂಡ ಸಿಗುತ್ತದೆ. ಹಲವಾರು ಯುರೋಪಿಯನ್‌ ರಾಷ್ಟ್ರಗಳಾದ ಜರ್ಮನಿ, ಫ್ರಾನ್ಸ್‌ನ ಹೆಚ್ಚಿನ ವಿವಿಗಳು ವಿದೇಶಿ ವಿದ್ಯಾರ್ಥಿಗಳನ್ನು ಸೆಳೆಯುತ್ತಿದೆ.

ವಿದೇಶಿ ಶಿಕ್ಷಣ ಎಲ್ಲರಿಗೂ ಕೈಗೆಟಕುವಂಥದ್ದಲ್ಲ ಎಂದು ಈಗಾಗಲೇ ಹೇಳಲಾಗಿದೆ. ಏಕೆಂದರೆ ಆರ್ಥಿಕತೆ, ಕೌಶಲ ಎಲ್ಲವೂ ಇದ್ದರೂ ವೀಸಾ ಸಿಕ್ಕೇ ಸಿಗುತ್ತದೆ ಎಂದು ಹೇಳಲಾಗದು. ವೀಸಾ ಸಂದರ್ಶನಕ್ಕೂ ಸೂಕ್ತವಾಗಿ ತಯಾರಾಗಿ ಹೋಗಬೇಕು.

ಅಂತಾರಾಷ್ಟ್ರೀಯ ಕ್ರೆಡಿಟ್ ಕಾರ್ಡ್‌, ಟ್ರಾವೆಲ್ ಚೆಕ್‌ ರೂಪದಲ್ಲಿ ಹಣ ಅವಶ್ಯವಾಗಿ ಬೇಕಾಗುತ್ತದೆ. ಅಂತಾರಾಷ್ಟ್ರೀಯ ವಿದ್ಯಾರ್ಥಿ ಕಾರ್ಡ್‌ ಹೊಂದಿದ್ದರೆ ಅನೇಕ ಡಿಸ್ಕೌಂಟ್, ಸೌಲಭ್ಯಗಳು ಸಿಗುತ್ತವೆ. ಪಾಸ್‌ಪೋರ್ಟ್‌, ವೀಸಾ, ಪ್ರವೇಶದ ಪತ್ರ, ಇತರ ದಾಖಲೆಗಳನ್ನು ಮೂಲ ಪ್ರತಿಯೊಂದಿಗೆ, ಸ್ಕಾ ್ಯನ್‌ ಮಾಡಿದ ಕಾಪಿಯನ್ನು ಹೊಂದಿರುವುದು ಉತ್ತಮ.

ಎಸ್‌ಐಟಿ ಪರೀಕ್ಷೆ
ವಿದೇಶಗಳಲ್ಲಿ ಶಿಕ್ಷಣ ಪಡೆಯುವುದಕ್ಕೂ ಮುನ್ನ ಎಸ್‌ಐಟಿ ಪರೀಕ್ಷೆಯನ್ನು ಬರೆಯಬೇಕಾಗುತ್ತದೆ. ಈ ಪರೀಕ್ಷೆಯನ್ನು ವಿದೇಶಗಳಲ್ಲಿರುವ ವಿವಿಧ ಸ್ನಾತಕೋತ್ತರ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೂ ನಡೆಸಲಾಗುತ್ತದೆ. ಈ ರೀತಿಯ ಪರೀಕ್ಷೆ ನಡೆಸುವುದರಿಂದ ವಿದ್ಯಾರ್ಥಿಗಳು ತಮ್ಮ ಮುಂದಿನ ಶೈಕ್ಷಣಿಕ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ.

ಅಲ್ಲದೆ, ವಿದ್ಯಾರ್ಥಿಯ ಬುದ್ಧಿಮತ್ತೆ ತಿಳಿಯಲು ಕೂಡ ಸಹಕಾರಿಯಾಗುತ್ತದೆ. ಎಸ್‌ಎಟಿ ಪರೀಕ್ಷೆಯನ್ನು ನಡೆಸಲು ಅಮೆರಿಕದ ಎಲ್ಲ ವಿ.ವಿ.ಗಳು ಈಗಾಗಲೇ ಒಪ್ಪಿಕೊಂಡಿವೆ.

ಪ್ರಯೋಜನಗಳು
ವಿದೇಶಗಳಲ್ಲಿ ಕಲಿಯವುದು ಕಾಲೇಜು ವಿದ್ಯಾರ್ಥಿಗಳಿಗೆ ಅತ್ಯಂತ ಪ್ರಯೋಜನಕಾರಿ ಅನುಭವ. ವಿದೇಶಗಳಲ್ಲಿ ಕಲಿಯುವುದರಿಂದ ವಿದ್ಯಾರ್ಥಿಗಳು ಹೊಸ ಸ್ಥಳ, ಹೊಸ ಸಂಸ್ಕೃತಿಯನ್ನು ತಿಳಿದುಕೊಳ್ಳಲು ಸಾಧ್ಯ. ವಿದೇಶಿ ಕಲಿಕೆಯ ಪ್ರಯೋಜನಗಳು ಇಲ್ಲಿವೆ


1 ಜಗತ್ತನ್ನು ನೋಡುವಿರಿ

ವಿದೇಶಿ ಕಲಿಕೆಯಿಂದ ಜಗತ್ತನ್ನು ನೋಡಲು ಸಾಧ್ಯ.ಹೊಸ ದೃಷ್ಟಿಕೋನ, ಪದ್ಧತಿಗಳು ಮತ್ತು ಚಟುವಟಿಕೆಗಳೊಂದಿಗೆ ಹೊಚ್ಚ ಹೊಸ ದೇಶವನ್ನು ಅನ್ವೇಷಿಸಲು ಸಾಧ್ಯ.

2 ನೂತನ ಶಿಕ್ಷಣ ಶೈಲಿ

ವಿದೇಶಿ ಕಲಿಕೆಯ ಇನ್ನೊಂದು ಪ್ರಯೋಜನ ವಿಭಿನ್ನ ಶಿಕ್ಷಣ ಪದ್ಧತಿಯ ಅನುಭವವನ್ನು ಪಡೆಯುವುದು. ದೇಶದಲ್ಲಿರುವ ಶಿಕ್ಷಣ ಪದ್ದತಿಗೂ ವಿದೇಶದಲ್ಲಿರುವ ಶಿಕ್ಷಣ ಪದ್ಧತಿಗೂ ಸಾಕಷ್ಟು ವ್ಯತ್ಯಾಸಗಳಿವೆ.

3 ಹೊಸ ಸಂಸ್ಕೃತಿ ಪರಿಚಯ

ವಿದೇಶಿ ಕಲಿಕೆ ಮತ್ತೂಂದು ಅವಕಾಶ ವಿಭಿನ್ನ ಹಾಗೂ ಹೊಸ ಸಂಸ್ಕೃತಿಯ ಪರಿಚಯ ನಿಮ್ಮದಾಗುತ್ತದೆ. ಅಲ್ಲಿನ ಇತಿಹಾಸ, ಅಲ್ಲಿನ ಸಂಪ್ರದಾಯ ಮೊದಲಾದ ಹೊಸ ವಿಷಯಗಳನ್ನು ಕಲಿಯಲು ಸಾಧ್ಯ.

4 ಭಾಷಾ ಕೌಶಲ

ವಿದೇಶಿ ಕಲಿಕೆಯ ಪ್ರಮುಖ ಪ್ರಯೋಜನ ನಿಮ್ಮ ಭಾಷಾ ಕೌಶಲ ಹೆಚ್ಚಾಗುತ್ತದೆ. ವಿದೇಶಿ ಭಾಷೆಗಳನ್ನು ಕಲಿಯಲಾರಂಭಿಸುವಿರಿ. ಇದರಿಂದ ಭಾಷೆಯ ಮೇಲಿನ ಹಿಡಿತ ಸಾಧ್ಯ.

5 ವೃತ್ತಿ ಅವಕಾಶ

ವಿದೇಶದಲ್ಲಿ ಕಲಿತು ತವರಿಗೆ ನೀವು ಹೊಸ ಸಂಸ್ಕೃತಿ, ಭಾಷಾ ಕೌಶಲ, ಉತ್ತಮ ಶಿಕ್ಷಣ ಮತ್ತು ಹೊಸ ದೃಷ್ಟಿಕೋನದಿಂದ ಹಿಂದಿರುಗಿರುತ್ತೀರಿ. ಹೀಗಿ ಇಲ್ಲಿ ವೃತ್ತಿ ಅವಕಾಶಗಳು ಹೆಚ್ಚು.

ಖಚಿತತೆ ಇದ್ದರೆ ಮಾತ್ರ ಸೇರಬೇಕು
ವಿದೇಶದಲ್ಲಿ ಕಲಿಯಬೇಕು ಎಂಬ ಆಸೆ ಇದ್ದರೆ ಕಲಿಕೆಯ ವಿಷಯ ಮತ್ತು ಕಾಲೇಜಿನ ಬಗ್ಗೆ ಮೊದಲೇ ಕೂಲಂಕುಷವಾಗಿ ತಿಳಿದುಕೊಳ್ಳುವುದು ಒಳಿತು. ವಿದೇಶದಲ್ಲಿ ಕಲಿಕೆಗೆಂದು ಕೋರ್ಸ್‌ಗಳಿಗೆ ಹಣ ನೀಡಿದ ಬಳಿಕ ಆ ಸಂಸ್ಥೆಗಳು ಹಿಂದಿರುಗಿಸುವುದು ಕಷ್ಟ. ಅದೇ ಕಾರಣಕ್ಕೆ ಪ್ರತಿಷ್ಠಿತ ಸಂಸ್ಥೆಗಳಿಗೆ ಪ್ರಾಶಸ್ತ್ಯ ನೀಡವುದು ಉತ್ತಮ. ವಿಶ್ವದ ಅಗ್ರಗಣ್ಯ ವಿಶ್ವವಿದ್ಯಾನಿಲಯಗಳ ಮಾಹಿತಿಯನ್ನು www.topuniversities.com/student-info ದಲ್ಲಿ ಪಡೆಯಬಹುದಾಗಿದೆ.

•ನವೀನ್‌ ಭಟ್ ಇಳಂತಿಲ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ