ಬದುಕಿನ ನೈಜ್ಯತೆಗೆ ಕನ್ನಡಿ ಹಿಡಿದ ಗೇಟ್ ಕೀಪರ್‌

Team Udayavani, May 15, 2019, 5:00 AM IST

ಸಿನೆಮಾ ಎಂದರೆ ಕೇವಲ ಮನೋರಂಜನೆಯಲ್ಲ. ಅದು ಒಂದು ಸಮಾಜದ ಆಗುಹೋಗುಗಳನ್ನು ಎತ್ತಿ ಹಿಡಿಯುವ ಸಾಧನ. ಸಿನೆಮಾದಿಂದ ಸಂದೇಶ ತಲುಪಿಸಲಾಗದು ಅಂದುಕೊಂಡಿರುವ ಜನಗಳ ಮಧ್ಯೆಯೇ ಅದೆಷ್ಟೋ ಸಿನೆಮಾಗಳು ಎಷ್ಟೋ ಮನಸ್ಸುಗಳನ್ನು ಬದಲಾಯಿಸಿದ ಕಥೆಗಳು ಮುಗಿಯದಷ್ಟೂ ಇವೆ. ಹೀಗೆ ಜನರ ಮಧ್ಯೆ ಬಂದು ಹೋದಂತಹ ಸಿನೆಮಾಗಳನ್ನೇ ಕೇಂದ್ರೀಕರಿಸಿ ಆರ್‌. ಕೇಶವಮೂರ್ತಿ ಬರೆದ ಕೃತಿ ‘ಗೇಟ್ ಕೀಪರ್‌’ ಭಾವನಾತ್ಮಕ ಜಗತ್ತನ್ನು ತೆರೆದಿಡುವುದರೊಂದಿಗೆ ಬದುಕಿನ ನೈಜ್ಯತೆಗೆ ಕನ್ನಡಿ ಹಿಡಿದಂತಿದೆ.

••ಘಟನೆ: 1

ಜೀವನ ಸುಖ, ದುಃಖ, ಸಂತೋಷ ಬದುಕಿನ ರೀತಿಗಳನ್ನು ಒಳಗೊಂಡಿರುವ ಸಾಮಾನ್ಯ ಜನರ ಕಲಾ ಮಾಧ್ಯಮ ಸಿನೆಮಾ ಎನ್ನುವ ಭಾರತ ಕಂಡ ಶ್ರೇಷ್ಠ ನಿರ್ದೇಶಕ ಸತ್ಯಜಿತ್‌ ರೇ ಅವರು ಸಿನೆಮಾದ ಬಗ್ಗೆ ಹೇಳುವ ಮಾತಿದು. ಸತ್ಯಜಿತ್‌ ರೇ ನಿರ್ದೇಶಿಸಿದ ಬೆಂಗಾಲಿ ಚಿತ್ರ ಚಾರುಲತಾ ಎನ್ನುವ ಸಿನೆಮಾದ ವಿವರಣೆಯಲ್ಲಿಯೇ ಮೇಲೆ ಹೇಳಿದ ಮಾತು ಸುಳ್ಳಲ್ಲ ಎಂದು ಎತ್ತಿ ತೋರಿಸುತ್ತದೆ. ಒಂಟಿತನವನ್ನು ಕಾಡುವ ಒಂದು ಹೆಣ್ಣಿನ ಕಥೆಯನ್ನು ತನ್ನ ಅರ್ಥಪೂರ್ಣ ಚಿತ್ರಕಥೆಯೊಂದಿಗೆ ಕಟ್ಟಿಕೊಂಡು ಹೋಗುವುದನ್ನು ಕೇವಲ ಬರಹ ರೂಪದಲ್ಲಿ ಕಂಡಾಗಲೇ ಈ ಸಿನೆಮಾದ ತಾಕತ್ತನ್ನು ಮತ್ತು ಅದನ್ನು ನೋಡುವಂತೆ ಸೂಚಿಸುತ್ತದೆ.

••ಘಟನೆ: 2

ಹಿಂದಿ ಚಿತ್ರವಾದ ಐ ಯಾಮ್‌ ಕಲಾಂ ಚಿತ್ರದ ಕಥೆ ನಮ್ಮೊಳಗಿನ ಕನಸುಗಳನ್ನೂ ಒಂದೂ ಕ್ಷಣ ನೆನಪಿಸುವ ಶಕ್ತಿ ಇದಕ್ಕಿದೆ ಎನ್ನಬಹುದು. ಚಹಾ ಮಾರುವ ಬಡ ಬಾಲಕ ಕಲಾಂರ ಚಿತ್ರ ಕಂಡು ಅವರ್ಯಾರು ಎಂದು ಕೇಳುತ್ತಾ ಅವರ ಕತೆಗಳನ್ನು ಕೇಳಿ ತಾನು ಅವರಂತಾಗಲು ತನ್ನ ಹೆಸರನ್ನು ಐ ಯಾಮ್‌ ಕಲಾಂ ಬದಲಾಯಿಸಿ ತನ್ನ ಕನಸ ಹಿಂದೆ ಓಡುವ ಕಥೆ.

••ಘಟನೆ: 3

ಅಮೌರ್‌ ಎಂಬ ಇಂಗ್ಲಿಷ್‌ ಚಿತ್ರ ವೃದ್ಧಾಪ್ಯದ ಬಗ್ಗೆ ಹೇಳುವಾಗ ಲೇಖಕರು ತಮ್ಮದೇ ಸುತ್ತಲಿನ ಕಥೆಯ ಮೂಲಕ ಈ ಸಿನೆಮಾದ ಕಥೆಯನ್ನು ಹೇಳುತ್ತಾರೆ. ಕೇವಲ ಎರಡೇ ಪಾತ್ರಗಳಲ್ಲಿ ವೃದ್ಧಾಪ್ಯದ ಸಂಕಟಗಳನ್ನು ತೆರೆದಿಡುತ್ತದೆ.

•ವಿಶ್ವಾಸ್‌ ಅಡ್ಯಾರ್‌


ಈ ವಿಭಾಗದಿಂದ ಇನ್ನಷ್ಟು

  • ಕಾಲೇಜು ಕ್ಯಾಂಪಸ್‌ ಎಂದರೆ ಮೋಜು ಮಸ್ತಿಗೆ ಮಾತ್ರ ಸೀಮಿತವಲ್ಲ. ಅಲ್ಲಿ ವ್ಯಕ್ತಿತ್ವ ವಿಕಸನಕ್ಕೂ ಸಾಕಷ್ಟು ಅವಕಾಶಗಳಿವೆ. ಅದರ ಸದ್ಭಳಕೆ ವಿದ್ಯಾರ್ಥಿಗಳ ಕೈಯಲ್ಲಿದೆ....

  • ಇಂದಿನ ಮಕ್ಕಳೇ ಮುಂದಿನ ಪ್ರಜೆಗಳೆಂಬಂತೆ ಭವ್ಯ ಭಾರತದ ಭವಿಷ್ಯಕ್ಕಾಗಿ ಇಂದಿನ ಮಕ್ಕಳಿಗೆ ಅಂಕ ಗಳಿಸುವ ಶಿಕ್ಷಣದೊಂದಿಗೆ ನೈತಿಕ ಮೌಲ್ಯಯುತ ಶಿಕ್ಷಣವನ್ನೂ ನೀಡಬೇಕಾಗಿದೆ....

  • ಒಂದು ಕಾಲದಲ್ಲಿ ಕಲಾ ವಿಭಾಗವೆಂದರೆ ಎಲ್ಲರಲ್ಲೂ ತಿರಸ್ಕಾರ. ಆದರೆ ಇಂದು ಮನಸ್ಥಿತಿ ಬದಲಾಗಿದೆ. ಕಲಾ ಭಾಗವನ್ನು ಪತ್ರಿಕೋದ್ಯಮದ ಸಲುವಾಗಿ ಆಯ್ದುಕೊಳ್ಳುವವರು...

  • ಶಾಲಾ ಕಾಲೇಜುಗಳ ಪರೀಕ್ಷೆಯಲ್ಲಿ ರ್‍ಯಾಂಕ್‌ ಪಡೆದರೂ ಉನ್ನತ ಶಿಕ್ಷಣಕ್ಕಾಗಿ ಹೆಚ್ಚುವರಿ ಪರೀಕ್ಷೆಗಳನ್ನು ಎದುರಿಸಬೇಕಾದದ್ದು ಸದ್ಯದ ಸ್ಥಿತಿ. ವಿದ್ಯಾರ್ಥಿಗಳ...

  • ಶಿಕ್ಷಣ ಮುಗಿದ ಕೂಡಲೇ ಹೆಚ್ಚು ಸಂಬಳ ಸಿಗುವ ಉದ್ಯೋಗಗಳಿಗೆ ಮುಖ ಮಾಡುವ ಯುವ ಜನತೆ ನೆಮ್ಮದಿ ಜೀವನಕ್ಕೆ ಗುಡ್‌ಬೈ ಹೇಳುತ್ತಾರೆ. ನಾವು ಮಾಡುವ ಕೆಲಸ ನಮಗೆ ಖುಷಿ...

ಹೊಸ ಸೇರ್ಪಡೆ